AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಂ ಗೌಡ ಸುಳ್ಳನ್ನೇ ತೀರ್ಥವೆಂದು ಕಣ್ಣಿಗೊತ್ತಿರುವ ಕಾಂಗ್ರೆಸ್; ಜೆಡಿಎಸ್ ವಾಗ್ದಾಳಿ

ಚುನಾವಣಾ ಕುತಂತ್ರಿಯನ್ನು ಕರೆಸಿದರೂ ತನಗೆ ಮತ ಬೀಳುವುದಿಲ್ಲ ಎಂದು ದುರಂಹಕಾರಿ ಪ್ರೀತಂ ಗೌಡಗೆ ಖಾತ್ರಿಯಾಗಿದೆ. ಹಾಗಾಗಿಯೇ ಹೆಚ್​ಡಿ ದೇವೇಗೌಡ ಅವರ ಹೆಸರಿನಲ್ಲಿ ಮತ ಕೇಳಿ, ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.

ಪ್ರೀತಂ ಗೌಡ ಸುಳ್ಳನ್ನೇ ತೀರ್ಥವೆಂದು ಕಣ್ಣಿಗೊತ್ತಿರುವ ಕಾಂಗ್ರೆಸ್; ಜೆಡಿಎಸ್ ವಾಗ್ದಾಳಿ
ಪ್ರಾತಿನಿಧಿಕ ಚಿತ್ರ
ಗಣಪತಿ ಶರ್ಮಾ
|

Updated on: Apr 28, 2023 | 9:20 PM

Share

ಬೆಂಗಳೂರು: ಜೆಡಿಎಸ್​ಗೆ ಮತ ನೀಡಿದರೂ ಬಿಜೆಪಿಗೆ ನೀಡಿದಂತೆಯೇ, ಹಾಗಾಗಿ ಬಿಜೆಪಿಗೇ ಮತ ನೀಡಿ ಎಂಬರ್ಥದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ (Preetham Gowda) ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ಆ ಕುರಿತು ಕಾಂಗ್ರೆಸ್​​ ಟ್ವೀಟ್ ಮಾಡಿತ್ತು. ಇದರಿಂದ ಕೆರಳಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದೆ.

ಚುನಾವಣಾ ಕುತಂತ್ರಿಯನ್ನು ಕರೆಸಿದರೂ ತನಗೆ ಮತ ಬೀಳುವುದಿಲ್ಲ ಎಂದು ದುರಂಹಕಾರಿ ಪ್ರೀತಂ ಗೌಡಗೆ ಖಾತ್ರಿಯಾಗಿದೆ. ಹಾಗಾಗಿಯೇ ಹೆಚ್​ಡಿ ದೇವೇಗೌಡ ಅವರ ಹೆಸರಿನಲ್ಲಿ ಮತ ಕೇಳಿ, ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ. ಆದರೆ ಕರ್ನಾಟಕ ಕಾಂಗ್ರೆಸ್ ಮಾತ್ರ ಬಿಜೆಪಿಯ ಸುರಿದ ಸುಳ್ಳನ್ನೆ ತೀರ್ಥ ಎಂದುಕೊಂಡು ಕಣ್ಣಿಗೊತ್ತಿಕೊಳ್ಳುತ್ತಿದೆ. ಚುನಾವಣೆ ಗೆಲ್ಲಲು ಈ ಎರಡು ಹಿಂದಿ ಗುಲಾಮಿ ರಾಷ್ಟ್ರೀಯ ಪಕ್ಷಗಳು ಯಾವುದೆ ಮಟ್ಟಕ್ಕಾದರೂ ಇಳಿಯಬಲ್ಲವು. ಜೆಡಿಎಸ್ ಅನ್ನು ಸೋಲಿಸಲು ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಈಗ ಸ್ಪಷ್ಟವಾಯ್ತು. ಕಳ್ಳನಿಗೆ ಮಳ್ಳ ಸಾಕ್ಷಿ ಎಂಬಂತೆ ಪ್ರೀತಂ ಬಿಸಾಕಿದ ಮೂಳೆಯನ್ನು ಈಗ ಕರ್ನಾಟಕ ಕಾಂಗ್ರೆಸ್ ಕೂಡಾ ನೆಕ್ಕುತ್ತಿರುವುದು ಹಾಸ್ಯಾಸ್ಪದ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ನಾವು ಪದೇ ಪದೇ ಹೇಳುತ್ತಿದ್ದೇವೆ ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ. ಅದನ್ನೇ ಈಗ ಸ್ವತಃ ಬಿಜೆಪಿ ಶಾಸಕ ಪ್ರೀತಂ ಗೌಡ ಅನುಮೋದಿಸಿದ್ದಾರೆ. ಮೋದಿ-ದೇವೇಗೌಡರ ಮಧ್ಯೆ ಈಗಾಗಲೇ ಮಾತುಕತೆಯೂ ಆಗಿದೆಯಂತೆ. ಬಿಜೆಪಿಯೊಂದಿಗೆ ಕೈಜೋಡಿಸಿರುವ ಜೆಡಿಎಸ್​​ ಅನ್ನು ಬೆಂಬಲಿಸಬೇಡಿ. ಕಾಂಗ್ರೆಸ್​ಗೆ ಮತ ನೀಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಏನು ಹೇಳಿದ್ದರು ಪ್ರೀತಂ ಗೌಡ?

‘ನಾನು ನಿಮಗೆ ಹೇಳುತ್ತಿದ್ದೇನೆ. ಜೆಡಿಎಸ್​ಗೆ ಮತ ನೀಡುವುದೂ ಬಿಜೆಪಿಗೆ ನೀಡಿದಂತೆಯೇ. ಅವರಿಗೆ ನೀಡಿದರೂ ಅದು ನಮಗೇ ಸಲ್ಲಲಿದೆ. ಹೆಚ್​ಡಿ ದೇವೇಗೌಡರು ಮತ್ತು ಮೋದಿ ಸಾಹೇಬ್ರು ಈಗಾಗಲೇ ಮಾತನಾಡಿದ್ದಾರೆ. ಜೆಡಿಎಸ್​​ಗೆ ಕೇವಲ 20 ರಿಂದ 25 ಸ್ಥಾನಗಳಷ್ಟೇ ದೊರೆಯಲಿದೆ. ನೀವು ಬೆಂಗಳೂರಿಗೆ ಹೋಗಲು ಬಯಸುತ್ತೀರಿ ಎಂದಾದರೆ ಅದಕ್ಕಾಗಿ ಮೈಸೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೂಲಕ ಹೋಗಿ. ನೀವು ಮೈಸೂರಿನಿಂದಾಗಿ ಹೋಗಲು ಬಯಸುತ್ತೀರಾದರೆ ನಾನು ಹೇಳುವುದಿಷ್ಟೇ. ಎಲ್ಲ ನದಿಗಳ ನೀರು ಹರಿದು ಕೊನೆಗೆ ಸೇರುವುದು ಸಮುದ್ರಕ್ಕೇ. ಅದೇ ರೀತಿ ನೀವು ನಮ್ಮನ್ನೇ ಸೇರಬೇಕಷ್ಟೆ. ಈ ಬಗ್ಗೆ ಯೋಚನೆ ಮಾಡಿ. ಬಿಜೆಪಿಯನ್ನೇ ಬೆಂಬಲಿಸಿ’ ಎಂದು ಪ್ರೀತಂ ಗೌಡ ಹೇಳಿರುವ ವಿಡಿಯೋ ವೈರಲ್ ಆಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು