ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy ), ಮುಂದಿನ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ (KRPP) ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಇಂದು(ಫೆಬ್ರವರಿ 16) ಐದು ಕ್ಷೇತ್ರಗಳಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು. ಸಿರುಗುಪ್ಪ, ಕನಕಗಿರಿ, ನಾಗಠಾಣ, ಸಿಂಧನೂರು ಹಾಗೂ ಹಿರಿಯೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.
ಇದನ್ನೂ ಓದಿ: Janardhana Reddy Manifesto : ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ರೈತರಿಗೆ ಮೊದಲ ಆದ್ಯತೆ
ಬಳ್ಳಾರಿ ಜಿಲ್ಲೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ-ಧರೆಪ್ಪ ನಾಯಕ, ಕೊಪ್ಪಳ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿಗೆ-ಡಾ.ಚಾರುಲ್ ದಾಸರಿ, ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರಕ್ಕೆ-ಶ್ರೀಕಾಂತ್, ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರ-ನೆಕ್ಕಂಟಿ ಮಲ್ಲಿಕಾರ್ಜುನ, ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರ-ಮಹೇಶ್.
ಈ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಅವರು ಗೆಲ್ಲುತ್ತಾರೆ ಎನ್ನೋ ನಂಬಿಕೆಯಿಂದ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಸರ್ವೇ ಮಾಡಿಸಿ ಗೆಲ್ಲುವ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತಿದ್ದೆವೆ. ನಾನು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದುರ.
ಶ್ರೀರಾಮುಲು ವಿರುದ್ದ ಅಭ್ಯರ್ಥಿ ಹಾಕುತ್ತೀರಾ ಎನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಡ್ಡಿ, ಇನ್ನು ಸಮಯವಿದೆ ಎಲ್ಲದಕ್ಕೆ ಉತ್ತರ ಸಿಗುತ್ತೆ. ಆವತ್ತು ನಿಮಗೆ ಸಮಾಧಾನ ಆಗಬಹುದು. ರಾಜ್ಯದಲ್ಲಿ ಅಭಿವೃದ್ಧಿ ಪರ ಚರ್ಚೆಗೆ ಜನ ಮನ್ನಣೆ ಕೊಡುತ್ತಾರೆ ಎಂದರು.
ಸಿದ್ದು ವಿರುದ್ದದ ಸಚಿವ ಅಶ್ವಥ್ ನಾರಯಣ್ ಹೊಡೆದು ಹಾಕಿ ಎನ್ನುವ ಪದ ಬಳಕೆ ಬಗ್ಗೆ ಮಾತನಾಡಿದ ರಡ್ಡಿ, ಯಾರೇ ಏನೇ ಮಾತಾಡಿದ್ರು ಜನ ತೀರ್ಮಾನ ಮಾಡ್ತಾರೆ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಾನು ನನ್ನ ಪಕ್ಷ ಹಾಗೂ ಕೆಲಸದ ಬಗ್ಗೆ ಮಾತನಾಡುತ್ತೇನೆ. ಹಿಂದೂ-ಮುಸ್ಲಿಂ ಯಾವ ಭೇದ ಭಾವ ಇರಬಾರದು. ಅದೇ ತರಹ ನಾನು ಹೋಗುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ಗಣಿ ಧಣಿ ಜನಾರ್ದನ ರೆಡ್ಡಿ ಯಾವು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ರಾಜಕೀಯ ಕಾರ್ಯತಂತ್ರಗಳನ್ನು ನಡೆಸಿದ್ದಾರೆ. ಅಲ್ಲದೇ ಪಕ್ಷದಿಂದ ಪಾದಯಾತ್ರೆ ಮಾಡುವ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ಪಕ್ಷದ ಪ್ರಾಣಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ರೈತರಿಗೆ ಆದ್ಯತೆ ನೀಡಿದ್ದಾರೆ.
ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂ ಜಿಲ್ಲೆಗಳ ಮೇಲೆ ಹೆಚ್ಚಾಗಿ ಕಣ್ಣಿಟ್ಟಿರುವ ರೆಡ್ಡಿ, ಮೊನ್ನೇ ಅಷ್ಟೇ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಎಂಟ್ರಿಕೊಟ್ಟಿದ್ದರು. ಕ್ಷೇತ್ರದಲ್ಲಿ ಪತ್ನಿ ಅರುಣಾಲಕ್ಷ್ಮೀ ಜತೆ ಪಾದಯಾತ್ರೆ ನಡೆಸಿದ್ದು, ಸುಮಾರು 15 ಕಿ.ಲೋ ಮೀಟರ್ ಹೆಜ್ಜೆ ಹಾಕಿದ ಜನಾರ್ದನ ರೆಡ್ಡಿ, ಬಳಿಕ ರೈತ ದಂಪತಿಗಳ ಪಾದಪೂಜೆ ಮಾಡಿದ್ರು.. ಯಾತ್ರೆಯುದ್ದಕ್ಕೂ ಹತ್ತಾರು ಕಸರತ್ತು ಮಾಡಿದ್ರು.. ರೆಡ್ಡಿ ಸಮುದಾಯವನ್ನ ಟಾರ್ಗೆಟ್ ಮಾಡ್ಕೊಂಡು ಸವಾರಿ ಮಾಡಿದ್ದರು.
ಒಟ್ಟಿನಲ್ಲಿ ಹೊಸ ಪಕ್ಷದೊಂದಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರೆಡ್ಡಿ ಗೇಮ್ ಪ್ಲ್ಯಾನ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.