AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಕಿಂಗ್ ಪಿನ್ ರುದ್ರಗೌಡ್ ಪಾಟೀಲ್​​​ಗೆ ಮಣೆ ಹಾಕಿದ್ರಾ ಜನಾರ್ಧನ ರೆಡ್ಡಿ? ಕೆಆರ್​ಪಿಪಿಯಿಂದ ಟಿಕೆಟ್​ ಸಾಧ್ಯತೆ

ರುದ್ರಗೌಡ ಪಾಟೀಲ್​ಗೆ ಮಾಜಿ ಸಚಿವ ಗಾಲಿಜನಾರ್ಧನ ರೆಡ್ಡಿ ಕೆಆರ್​​ಪಿಪಿ ಪಕ್ಷದಿಂದ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಟಿಕೆಟ್​ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

PSI Recruitment Scam: ಕಿಂಗ್ ಪಿನ್ ರುದ್ರಗೌಡ್ ಪಾಟೀಲ್​​​ಗೆ ಮಣೆ ಹಾಕಿದ್ರಾ ಜನಾರ್ಧನ ರೆಡ್ಡಿ?  ಕೆಆರ್​ಪಿಪಿಯಿಂದ ಟಿಕೆಟ್​ ಸಾಧ್ಯತೆ
ಆರೋಪಿ ರುದ್ರಗೌಡ ಪಾಟೀಲ್​
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 04, 2023 | 3:48 PM

Share

ಕಲಬುರಗಿ: ರಾಜ್ಯದಲ್ಲಿ ತೀರ್ವ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಅಕ್ರಮ ನೇಮಕಾತಿ (PSI Recruitment Scam) ಪ್ರಕರಣದ ತನಿಖೆ ಇನ್ನು ಮುಗಿದಿಲ್ಲ. ಆದರೆ ಅಕ್ರಮದ ಪ್ರಮುಖ ಕಿಂಗ್ ಪಿನ್​ಗಳಲ್ಲಿ ಓರ್ವ ರುದ್ರಗೌಡ್ ಪಾಟೀಲ್ (Rudragouda Patil), ಇದೀಗ ವಿಧಾನಸಭೆ ಮೇಲೆ ಕಣ್ಣು ಹಾಕಿದ್ದಾನೆ. ಬರುವ ವಿಧಾನಸಭಾ ಚುನಾವಣೆಯಲ್ಲಿ (Assembly Election), ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿದ್ದು, ಟಿಕೆಟ್​ ನೀಡುವಂತೆ ಈ ಹಿಂದೆ ಕಾಂಗ್ರೆಸ್​ಗೆ (Congress) ಮನವಿ ಮಾಡಿದ್ದನು. ಇದೀಗ ರುದ್ರಗೌಡ ಪಾಟೀಲ್​ಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಕೆಆರ್​​ಪಿಪಿ (KRPP) ಪಕ್ಷದಿಂದ ಜಿಲ್ಲೆಯ ಅಫಜಲಪುರ ಕ್ಷೇತ್ರದ ಟಿಕೆಟ್​ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ನೇಮಕಾತಿ ಅಕ್ರಮದಲ್ಲಿ ಜೈಲಿನಲ್ಲಿರೋ ರುದ್ರಗೌಡ ಪಾಟೀಲ್, ಜಾಮೀನು ಸಿಗದೆ ಇದ್ದರೇ ಜೈಲಿನಲ್ಲಿದ್ದುಕೊಂಡೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಜನಾರ್ಧನ ರೆಡ್ಡಿ ಎಪ್ರಿಲ್ 10 ರಂದು ಅಫಜಲಪುರಕ್ಕೆ ಹೋಗಲಿದ್ದು, ಅಂದು ರುದ್ರಗೌಡ ಪಾಟೀಲ್ ಸಹೋದರ ಮತ್ತು ಬೆಂಬಲಿಗರು ಕೆಆರ್​ಪಿಪಿ ಪಕ್ಷ ಸೇರಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಕೆಲ ತಿಂಗಳ ಹಿಂದೆ ರುದ್ರಗೌಡ ಪಾಟೀಲ್​ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ: ಕಾಂಗ್ರೆಸ್-ದಳ ಟಿಕೆಟ್ ಫೈನಲ್, ಬಿಜೆಪಿ ಟಿಕೆಟ್​ಗಾಗಿ ಮುಂದುವರಿದಿದೆ ಸರ್ಕಸ್!

ಯಾರು ಈ ರುದ್ರಗೌಡ ಪಾಟೀಲ್​

ರುದ್ರಗೌಡ ಪಾಟೀಲ್​ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿ ಕೆಲಸ ಮಾಡಿದ್ದನು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದನು. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದನು. ಅಲ್ಲದೆ ಕ್ಷೇತ್ರದ ತುಂಬೆಲ್ಲಾ ಓಡಾಡಿಕೊಂಡು ತಮ್ಮ ಸಮುದಾಯ ಸೇರಿದಂತೆ ಕ್ಷೇತ್ರದಲ್ಲಿ ಯುವ ಪಡೆ ಕಟ್ಟಿಕೊಂಡು ಚುನಾವಣೆಗೆ ಅಖಾಡ ಸಿದ್ದಮಾಡಿಕೊಂಡಿದ್ದನು. ಈ ಸಮಯದಲ್ಲಿಯೇ ಪಿಎಸ್ಐ ಕೇಸ್ ಉರುಳು ರುದ್ರಗೌಡ್ ಪಾಟೀಲ್​​ಗೆ ಸುತ್ತುಕೊಂಡಿತು. ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿದ್ದದರಿಂದ, ಸಿಐಡಿ ಅಧಿಕಾರಿಗಳು ರುದ್ರಗೌಡ್ ನನ್ನು ಬಂಧಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Published On - 2:05 pm, Tue, 4 April 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ