Kagawad Election Results: ಕಾಗವಾಡ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್ನ ರಾಜು ಕಾಗೆಯನ್ನು ಸೋಲಿಸಿದ ಶ್ರೀಮಂತ್ ಪಾಟೀಲ
Kagawad Assembly Election Results 2023 Live Counting Updates: ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 2000ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ ಭರಮಗೌಡ ಅಲಗೌಡ (ರಾಜು) ಕಾಗೆ ಗೆದ್ದಿದ್ದು, ನಂತರದ ಚುನಾವಣೆಗಳಲ್ಲಿ ಅಂದರೆ 2004, 2008 ಮತ್ತು 2013ರಲ್ಲಿ ಭರಮಗೌಡ ಅಲಗೌಡ (ರಾಜು) ಕಾಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.

Kagawad Assembly Election Results 2023: ಈ ಬಾರಿಯ ವಿದಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ ಗೆಲುವು ಸಾದಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ರಾಜು ಕಾಗೆ ವಿರುದ್ಧ ಇಲ್ಲಿ ನೇರ ಹಣಾಹಣಿ ನಡೆದಿತ್ತು. 2013ರಲ್ಲಿ ರಚನೆಯಾದ ಹೊಸ ತಾಲೂಕು ಕಾಗವಾಡ (Kagawad Constituency). ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು. 1983ರ ಚುನಾವಣೆಯ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತು. ಇದುವರೆಗೂ 13 ವಿಧಾನಸಭಾ ಚುನಾವಣೆ ಮತ್ತು ಎರಡು ಉಪಚುನಾವಣೆಗಳನ್ನು ಕಂಡಿರುವ ಕಾಗವಾಡ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಶಾಸಕ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ ಪ್ರತಿನಿಧಿ ಆಗಿದ್ದಾರೆ.
1962ರಿಂದ 1983ರವರೆಗೆ ಎರಡು ದಶಕಗಳ ಕಾಲ ಕಾಗವಾಡ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1962ರಲ್ಲಿ ನಡೆದ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಶಂಕರಗೌಡ ವೀರನಗೌಡ ಪಾಟೀಲ, 1967ರಲ್ಲಿ ಚಂಪಾಬಾಯಿ ಬೋಗಲೆ, 1972ರಲ್ಲಿ ಆರ್.ಡಿ. ಕಿತ್ತೂರ, 1978ರಲ್ಲಿ ಎ.ಬಿ ಜಕನೂರ ಈ ಕ್ಷೇತ್ರವನ್ನು ಪ್ರತಿನಿಧೀಕರಿಸಿದ್ದರು. ನಂತರ 1983ರಲ್ಲಿ ಜೆಎನ್ ಪಿಯ ವಿ.ಎನ್ . ಪಾಟೀಲ, 19885ರಲ್ಲಿ ವಿ.ಎನ್ ಪಾಟೀಲ, 1989ರಲ್ಲಿ ಕಾಂಗ್ರೆಸ್ ಪಕ್ಷದ ಎ.ಬಿ ಜಕನೂರ, 1994 ಜನತಾದಳದ ಮೋಹನ ಶಹಾ, 1999ರಲ್ಲಿ ಕಾಂಗ್ರೆಸ್ ಪಕ್ಷದ ಪರಸಗೌಡ ಅಪ್ಪಗೌಡ ಪಾಟೀಲ ಗೆದ್ದಿದ್ದರು.
2000ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ ಭರಮಗೌಡ ಅಲಗೌಡ (ರಾಜು) ಕಾಗೆ ಗೆದ್ದಿದ್ದು, ನಂತರದ ಚುನಾವಣೆಗಳಲ್ಲಿ ಅಂದರೆ 2004, 2008 ಮತ್ತು 2013ರಲ್ಲಿ ಭರಮಗೌಡ ಅಲಗೌಡ (ರಾಜು) ಕಾಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2018ರಲ್ಲಿ ಶ್ರೀಮಂತ್ ಬಾಳಾಸಾಹೇಬ್ ಪಾಟೀಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದು, 2019ರ ಉಪಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಈ ಬಾರಿ ಎಎಪಿಯ ಗುರಪ್ಪ ಎಂ ಮಗದುಮ್, ಬಿಜೆಪಿಯ ಶ್ರೀಮಂತ್ ಬಾಳಾಸಾಹೇಬ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದಿಂದಭರಮಗೌಡ ಅಲಗೌಡ (ರಾಜು) ಕಾಗೆ ಮತ್ತು ಜೆ ಡಿ (ಎಸ್)ನ ಮಲ್ಲಿಕಾರ್ಜುನ್ ಎಸ್ ಗುಂಜಿಗನ್ವಿ ನಡುವೆ ಪೈಪೋಟಿ ನಡೆಯಲಿದೆ.
Published On - 2:02 am, Sat, 13 May 23