
Kanakapura Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದ್ದಿದೆ. ಕನಕಪುರ ಬಂಡೆ ಡಿಕೆ ಶಿವಕುಮಾರ್ 1 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಆರ್ ಅಶೋಕ್ಗೆ ತೀವ್ರ ಮುಖಭಂಗವಾಗಿದೆ. ಕನಕಪುರ ವಿಧಾನಸಭಾ ಕ್ಷೇತ್ರದಿಂದ (Kanakapura Assembly Constituency) ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಸ್ಪರ್ಧಿಸಿದ್ದಾರೆ. ಕನಕಪುರ ಡಿಕೆ ಶಿವಕುಮಾರ್ ಸಾಮ್ರಾಜ್ಯ. ಸಾತನೂರಿನಿಂದ ಕನಕಪುರಕ್ಕೆ ಬಂದ ಡಿ.ಕೆ. ಶಿವಕುಮಾರ್ 2008ರಿಂದ ಇಲ್ಲಿಯವರೆಗೂ ಪ್ರತಿ ಚುನಾವಣೆಯಲ್ಲೂ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಸಿಎಂ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಶಿರಸಿ, ಉಡುಪಿಯಲ್ಲಿ ಚಂಡಿಕಾ ಯಾಗದ ಮೂಲಕ ಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋಗಿದ್ದರು.
ಡಿಕೆ ಶಿವಕುಮಾರ್ ಅವರನ್ನು ಮಣಿಸಲು ಬಿಜೆಪಿ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದೆ. ಡಿಕೆ ಶಿವಕುಮಾರ್ ಸ್ಪರ್ಧಿಸುವ ಕನಕಪುರದಿಂದ ಸಚಿವರೂ ಆಗಿರುವ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್ ಅಶೋಕ್ ಕಣಕ್ಕಿಳಿದಿದ್ದಾರೆ. ಪದ್ಮನಾಭ ನಗರದಲ್ಲಿ ತಮ್ಮದ್ದೇ ಪ್ರಭಲ್ಯ ಹೊಂದಿರುವ ಆರ್ ಅಶೋಕ್ ಡಿಕೆಶಿ ವಿರುದ್ಧ ನಿಲ್ಲುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಹಿಂದೆ ಪ್ರಚಾರದ ವೇಳೆ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದರು. ಕನಕಪುರದಲ್ಲಿ ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದಿದ್ದರು.
Published On - 1:29 am, Sat, 13 May 23