Karkala Election 2023 Winner: ಮತ್ತೆ ಸುನಿಲ್​​ ಕುಮಾರ್ ಕೈಹಿಡಿದ ಕಾರ್ಕಳದ ಜನತೆ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ (Karkala Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಈ ಬಾರಿ ಸುನಿಲ್ ಕುಮಾರ್​​ಗೆ ಕಾಂಗ್ರೆಸ್​​ ಪೈಪೋಟಿ ನೀಡಿತ್ತು. ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.

Karkala Election 2023 Winner: ಮತ್ತೆ ಸುನಿಲ್​​ ಕುಮಾರ್ ಕೈಹಿಡಿದ ಕಾರ್ಕಳದ ಜನತೆ
ಸುನಿಲ್​​ ಕುಮಾರ್

Updated on: May 13, 2023 | 5:31 PM

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದಿದ್ದು. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ (Karkala Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಈ ಬಾರಿ ಸುನಿಲ್ ಕುಮಾರ್​​ಗೆ ಕಾಂಗ್ರೆಸ್​​ ಪೈಪೋಟಿ ನೀಡಿತ್ತು. ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಕಾರ್ಕಳ ಬಿಜೆಪಿಯ ಭದ್ರಕೋಟೆಯು ಹೌದು ಆದರೆ, ಈ ಬಾರಿ ಹಲವು ವಿವಾದಗಳಿಂದ ಹಾಗೂ ಸುನಿಲ್​​ ಕುಮಾರ್​​ ಬಗ್ಗೆ ಕಾರ್ಕಳ ಜನತೆಯಲ್ಲಿ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿರಲ್ಲಿಲ್ಲ ಎಂದು ಹೇಳಲಾಗಿತ್ತು. ಇದರ ಜತೆಗೆ ಕಾರ್ಕಳದಲ್ಲಿ ಸುನಿಲ್​​ ಕುಮಾರ್​ ಅವರ ರಾಜಕೀಯ ಗುರು ಎಂದು ಹೇಳಲಾಗುತ್ತಿದ್ದ, ಶಿವ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಈ ಬಾರಿ ಚುನಾವಣೆಯಲ್ಲಿ ಶಿಷ್ಯನ ಮುಂದೆ ನಿಂತುಕೊಂಡಿದ್ದರು. ಕಾಂಗ್ರೆಸ್​​ ಅಭ್ಯರ್ಥಿ ಕೂಡ ಪ್ರಬಲವಾಗಿದ್ದು, ಸುನಿಲ್​​​ ಕುಮಾರ್​​ಗೆ ಗೆಲ್ಲುವುದು ಕಷ್ಟ ಎಂದು ಹೇಳಲಾಗುತ್ತಿತ್ತು , ಆದರೆ ಈ ಭಾರಿಯು ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಚುನಾವಣೆಗಿಂತ ಈ ಭಾರೀ ಅತ್ಯಂತ ಕಡಿಮೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸುನಿಲ್​​​ ಕುಮಾರ್​​ ಸಚಿವರಾಗಿದ್ದಾಗ ಕಾರ್ಕಳಕ್ಕೆ ಅಥವಾ ಉಡುಪಿಗೆ ಹೇಳಿಕೊಳ್ಳವಷ್ಟು ಅಭಿವೃದ್ಧಿ ಕಾರ್ಯ ಅಥವಾ ಶಾಸಕರಾಗಿದ್ದಾಗ ಇದ್ದ ಖಡಕ್​​​ ನಡೆ ಇರಲಿಲ್ಲ ಎಂಬ ಮಾತು ಕೂಡ ಇತ್ತು. ಒಟ್ಟಾರೆ ಇಂದು ಸುನಿಲ್​​​ ಕುಮಾರ್ ಗುರು-ಶಿಷ್ಯ ಜಿದ್ದಾಜಿದ್ದಿಯಲ್ಲಿ ಶಿಷ್ಯ ಗೆಲುವು ಸಾಧಿಸಿದ್ದಾರೆ.

ಇನ್ನೂ ಸುನಿಲ್​​ ಕುಮಾರ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದದ್ದು ಪ್ರಮೋದ್ ಮುತಾಲಿಕ್​​, ಶಿಷ್ಯನ ವಿರುದ್ಧವೇ ಹಿಂದೂ ಫೈರ್​ ಬ್ರಾಂಡ್​​ ಎನ್ನಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ಸ್ಪರ್ಧಿಸಿದ್ದರು. ಬಿಜೆಪಿ, ಹಿಂದುತ್ವ ಎಂದು ಓಡಾಡಿದ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಯಲ್ಲಿ ರಕ್ಷಣೆ ಇಲ್ಲ, ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಯಾವುದೇ ಕಾನೂನು ಕ್ರಮವಿಲ್ಲ ಎಂದು ಪ್ರಮೋದ್ ಮುತಾಲಿಕ್ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ಸುನಿಲ್​​ ಕುಮಾರ್​ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ತುಂಬಾ ಕಷ್ಟ ಎಂಬ ಮಾತುಗಳು ಇತ್ತು. ಆದರೆ ಈ ಬಾರಿ ಮತ್ತೆ ಗೆಲುವು ಸಾಧಿಸಿದ್ದಾರೆ. ಇನ್ನೂ ಕಾಂಗ್ರೆಸ್​ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಆಪ್ತ ಎಂದು ಹೇಳಲಾಗುತ್ತಿದ್ದ ಉದಯ್​​ ಶೆಟ್ಟಿ ಅವರು ಪೈಪೋಟಿ ನೀಡಿದ್ದರು, ಸುನಿಲ್​​ ಕುಮಾರ್ ಮುಂದೆ ಉದಯ್​​ ಶೆಟ್ಟಿ ಅವರು ಕೂಡ ಪ್ರಬಲ ಅಭ್ಯರ್ಥಿಯಾಗಿದ್ದರು, ಈ ಬಾರಿ ಅವರಿಗೆ ಸೋಲಾಗಿದೆ.

ಇದನ್ನೂ ಓದಿ: Kapu Election 2023 Winner: ಭರ್ಜರಿ ಗೆಲುವು ಸಾಧಿಸಿದ ಗುರ್ಮೆ ಸುರೇಶ್ ಶೆಟ್ಟಿ

ಇನ್ನೂ ಕಾರ್ಕಳದಲ್ಲಿ ಜೆಡಿಎಸ್​​ನಿಂದ ಶ್ರೀಕಾಂತ್ ಕೊಚ್ಚೂರು ಸ್ಪರ್ಧಿಸಿದ್ದು ಸೋತಿದ್ದಾರೆ. ಎಎಪಿಯಿಂದ ಡೇನಿಯಲ್​​ ಕೂಡ ಕಡಿಮೆ ಮತಗಳನ್ನು ಪಡೆದು ಸೋತಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ಮತದಾರ ಮತ್ತೆ ಸುನಿಲ್​​ ಕುಮಾರ್​ ಅವರಿಗೆ ವಿಜಯ ಖಡ್ಗವನ್ನು ಹಾಕಿದ್ದಾನೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ