Karnataka Elections 2023: ಪ್ರಧಾನಿ ಮೋದಿ ರೋಡ್ ಶೋ, ಜನರ ಜೊತೆಗಿನ ನೇರ ಸಂಬಂಧದ ಪ್ರಚಾರ

ಕಳೆದ ಮೂರು ತಿಂಗಳಲ್ಲಿ ಏಳು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ, ಹಲವು ಕಡೆ ರೋಡ್ ಶೋ ನಡೆಸಿದ್ದರು. ಚುನಾವಣಾ ತಯಾರಿ ಮಾಡುತ್ತಿರುವಾಗಲೇ ರೋಡ್ ಶೋ ಮಾಡಿ, ಬಿಜೆಪಿ ಹವಾ ಹುಟ್ಟು ಹಾಕಲು ಅವರು ಪ್ರಯತ್ನಿಸಿದ್ದರು.

Karnataka Elections 2023: ಪ್ರಧಾನಿ ಮೋದಿ ರೋಡ್ ಶೋ, ಜನರ ಜೊತೆಗಿನ ನೇರ ಸಂಬಂಧದ ಪ್ರಚಾರ
ಮೋದಿ ರೋಡ್​ ಶೋ (ಸಂಗ್ರಹ ಚಿತ್ರ)
Follow us
|

Updated on:Apr 20, 2023 | 5:02 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಕರ್ನಾಟಕ ವಿಧಾನಸಭೆ ಚುನಾವಣಾ (Karnataka Assembly Elections 2023) ಪ್ರಚಾರಕ್ಕೆ ಅಧಿಕೃತವಾಗಿ ಇಳಿಯಲಿದ್ದಾರೆ ಮತ್ತು ಪಕ್ಷದ ಉಮೇದುವಾರರ ಪರವಾಗಿ, ಖುದ್ದು ಮತ ಕೇಳಲಿದ್ದಾರೆ. ನಾಡಿದ್ದು ಶನಿವಾರದಿಂದ ಪ್ರಾರಂಭವಾಗುವ ಅವರ ಭೇಟಿ ಹಲವಾರು ರೂಪದಲ್ಲಿರುತ್ತದೆ; ಬೃಹತ್ ಬಹಿರಂಗ ಸಭೆ, ರೋಡ್ ಶೋ ಇತ್ಯಾದಿ. ಕಳೆದ ಮೂರು ತಿಂಗಳಲ್ಲಿ ಏಳು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ, ಹಲವು ಕಡೆ ರೋಡ್ ಶೋ ನಡೆಸಿದ್ದರು. ಚುನಾವಣಾ ತಯಾರಿ ಮಾಡುತ್ತಿರುವಾಗಲೇ ರೋಡ್ ಶೋ ಮಾಡಿ, ಬಿಜೆಪಿ ಹವಾ ಹುಟ್ಟು ಹಾಕಲು ಅವರು ಪ್ರಯತ್ನಿಸಿದ್ದರು.

ಅತ್ಯಂತ ಕಠಿಣ ಭದ್ರತೆ ಇರುವ ಗಣ್ಯ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಆದರೂ ಮೋದಿ, ರೋಡ್ ಶೋ ಮಾಡಿ, ಜನರ ಜೊತೆ ಬೆರೆಯಲು ಪ್ರಯತ್ನಿಸುತ್ತಾರೆ. ಈ ಹಿಂದೆ, ಹುಬ್ಬಳ್ಳಿ ಇರಬಹುದು, ಮೈಸೂರು ಇರಬಹುದು ಎಲ್ಲಾ ಕಡೆ ರೋಡ್ ಶೋ ಮಾಡಿದಾಗಲೂ, ಅವರಿಗೆ ಅಭೂತಪೂರ್ವ ಸ್ವಾಗತ ಅವರಿಗೆ ಸಿಕ್ಕಿತ್ತು. ಅಷ್ಟೇ ಅಲ್ಲ, ಅವರು ಸಹ ಅದೇ ರೀತಿಯಲ್ಲಿ ಜನರ ಪ್ರೀತಿಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Karnataka Assembly Elections 2023: ಚುನಾವಣೆಗೆ ಮತದಾರರು ಗಮನ ಸೆಳೆದ ವಿಷಯಗಳೇನು?

ರೋಡ್ ಶೋ ಮೂಲಕ ಪ್ರಚಾರ ಸಾಧ್ಯವೇ? ಸಾಮಾನ್ಯ ನಾಯಕರು ರೋಡ್ ಶೋ ಮಾಡಿದರೆ, ಅವು ಉದ್ದೇಶಿತ ಫಲ ನೀಡಲಿಕ್ಕಿಲ್ಲ. ಆದರೆ, ಮೋದಿ ಹಾಗಲ್ಲ. ಅಲ್ಲೊಂದು ಹವಾ ಹುಟ್ಟಿರುತ್ತೆ. ಚುನಾವಣಾ ಪ್ರಚಾರ ಸಭೆಯಲ್ಲಿ, ನಾಯಕ ವೇದಿಕೆ ಮೇಲೆ ನಿಂತು ಮಾತನಾಡುವುದು ಸರ್ವೇ ಸಾಮಾನ್ಯ. ಪಕ್ಷದ ಬೆಂಬಲಿಗರು ಮತ್ತು ಸಾಮಾನ್ಯ ನಾಗರಿಕರು ಕೆಳಗೆ ಕುಳಿತು ಅಥವಾ ನಿಂತು ಭಾಷಣ ಕೇಳುತ್ತಾರೆ. ಇಲ್ಲಿ, ನಾಯಕ ಮತ್ತು ಕಾರ್ಯಕರ್ತರ ನಡುವೆ ಅಂತರ ಜಾಸ್ತಿ. ನಾಯಕ ಮತ್ತು ಜನರ ನಡುವೆ ಒಂದು ರಾಜಕೀಯ ಸಂಬಂಧ (political equations) ಕಾಣುತ್ತದೆ. ಅದೇ ರೋಡ್​ ಶೋ ನಲ್ಲಿ ಹಾಗಲ್ಲ. ಅಲ್ಲಿ, ನಾಯಕ ರಸ್ತೆಯಲ್ಲಿ ಬರುತ್ತಾರೆ. ವಾಹನದಲ್ಲಿ ಬರುವಾಗ, ಅತೀ ಹತ್ತಿರದಿಂದ ಕೈ ಬೀಸುತ್ತಾರೆ. ಇಲ್ಲಿ, ಓರ್ವ ಫ್ಯಾನ್​ ಮತ್ತು ಅವರ ಆರಾಧ್ಯ ದೈವದ ಸಂಬಂಧವನ್ನು ಕಾಣಬಹುದು. ಈ intimacy ಗೆ ರಾಜಕೀಯ ಲೇಪ ಇದ್ದೇ ಬಿಡುತ್ತದೆ ಎಂದು ಹೇಳಲಾಗದು. ಪ್ರಾಯಶಃ, ಪ್ರಧಾನಿ ಮೋದಿ ಮತ್ತು ಜನರ ನಡುವೆ ಇಂತಹ ಒಂದು ಸಂಬಂಧವನ್ನು ಕಾಣಬಹುದು.

ಈ ಹಿಂದೆ ಬಿಜೆಪಿಯ ಹಲವಾರು ಜವಾಬ್ದಾರಿಯನ್ನು ನಿರ್ವಹಿಸಿರುವ, ವಾಮನ ಆಚಾರ್ಯ ಇದರ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದು ಹೀಗೆ; ನೋಡಿ, ನಮ್ಮ ಜನರಿಗೆ ಮೋದಿ ಮೇಲೆ ಅತೀವ ಪ್ರೀತಿ ಮತ್ತು ವಿಶ್ವಾಸ ಇದೆ. ಹಾಗಾಗಿಯೇ, ಬಿಸಿಲನ್ನು ಲೆಕ್ಕಿಸದೇ ಅವರು, ರಸ್ತೆ ಪಕ್ಕದಲ್ಲಿ ನಿಂತು ಕಾಯತ್ತಾರೆ. ಮೋದಿಯವರ ರೋಡ್ ಶೋ ಕೂಡ ಚುನಾವಣಾ ಪ್ರಚಾರ ಎನ್ನುವುದಕ್ಕೆ ಒಂದು ಕಾರಣ ಇದೆ. ಪ್ರಾಮಾಣಿಕತೆ, ನಿಷ್ಠೆಯಿಂದ ಅವರು ದೇಶದ ಸೇವೆ ಮಾಡುತ್ತಾರೆ ಎಂಬುದು ಜನರಿಗಿರುವ ದೃಢ ನಂಬಿಕೆ. ಹಾಗಾಗಿ ಅವರಿಗೆ ಮೋದಿ ನೋಡಿ ಬರೀ ಖುಷಿ ಆಗಲ್ಲ. ಅವರನ್ನು ನೋಡಿ ಒಂದು ರೀತಿ ಮಂತ್ರಮುಗ್ಧರಾಗುತ್ತಾರೆ. ಆಗ ಏನಾಗುತ್ತೆ ಅಂತ ಕೇಳಬಹುದು? ಯಾವ ಅಭ್ಯರ್ಥಿಯ ಮುಖ ನೋಡಿ ಮತ ಹಾಕೋದು ಬೇಡ, ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕೋಣ ಎಂಬ ನಿರ್ಧಾರಕ್ಕೆ ಜನ ಬರಬಹುದು. ಈ ದೃಷ್ಟಿಕೋನದಿಂದ ಮೋದಿ ಅವರ ರೋಡ್ ಶೋ ಎಲ್ಲ ಕಡೆ ಯಶಸ್ವಿಯಾಗುತ್ತೆ.” ಆಚಾರ್ಯ ಅವರ ಪ್ರಕಾರ ಮೋದಿ ರೋಡ್ ಶೋ ಬಿಜೆಪಿಗೆ ಖಂಡಿತಾ ಸಹಾಯ ಆಗಬಹುದು. ಯಾಕೆಂದರೆ, ತುಂಬಾ ಜನರಿಗೆ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಅವಕಾಶ ಸಿಗಲ್ಲ. ಹಾಗಾಗಿ ಈ ರೋಡ್ ಶೋ, ಅಂತಹ ಜನರನ್ನು ಸೆಳೆಯಲು ಅನುಕೂಲ ಆಗುತ್ತದೆ, ಅಷ್ಟೇ ಅಲ್ಲ, ಅದನ್ನು ಟಿವಿಯಲ್ಲಿ ನೋಡುವ ಜನ ಸಹಪ್ರಭಾವಿತರಾಗುವ ಸಾಧ್ಯತೆ ಇರುತ್ತದೆ ಎಂಬುದು ಆಚಾರ್ಯ ಅವರ ಅಭಿಪ್ರಾಯ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:45 pm, Thu, 20 April 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್