ರಾಜ್ಯ ವಿಧಾಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. 224 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು (lection Commission of India) ಪ್ರತಿಯೊಬ್ಬ ಮತದಾರನ ಎಪಿಕ್ ಸಂಖ್ಯೆಯನ್ನು (EPIC number) ಬಿಡುಗಡೆ ಮಾಡಿದೆ. ಮತದಾನ ಮಾಡುವುದಕ್ಕಾಗಿ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಜತೆಗೆ, ಮತದಾನ ಮಾಡುವ ಸ್ಥಳ ಎಲ್ಲಿ ಎಂಬುದೂ ಒಳಗೊಂಡಂತೆ ಇತರ ಮಾಹಿತಿಗಳನ್ನು ಎಪಿಕ್ ಸಂಖ್ಯೆಯ ಸಹಾಯದಿಂದ ತಿಳಿಯಬಹುದಾಗಿದೆ. ಈ ಬಾರಿ ಸುಮಾರು 5.05 ಕೋಟಿ ಮತದಾರರು ಇದ್ದು ಈ ಪೈಕಿ 2.50 ಕೋಟಿ ಮಹಿಳಾ ಮತದಾರರಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಚುನಾವಣಾ ಆಯೋಗವು ‘ಚುನಾವಣಾ ಮೊಬೈಲ್ ಆ್ಯಪ್’ ಅಭಿವೃದ್ಧಿಪಡಿಸಿದೆ. ಮತದಾರರ ಅನುಕೂಲಕ್ಕಾಗಿ ಈ ಆ್ಯಪ್ನಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳು ದೊರೆಯುವಂತೆ ಮಾಡಲಾಗಿದೆ. ಮತದಾನದ ಸ್ಥಳ, ಮತದಾನದ ಪ್ರದೇಶಕ್ಕೆ ತೆರಳಲು ಇರುವ ಮಾರ್ಗಗಳು, ಅಭ್ಯರ್ಥಿಗಳ ವಿವರ, ಚುನಾವಣಾ ಅಧಿಕಾರಿಗಳ ವಿವರ, ವಾಹನ ನಿಲುಗಡೆ ವಿವರ ಹಾಗೂ ಇತರ ತುರ್ತು ಸೇವೆಗಳ ಬಗ್ಗೆ ಆ್ಯಪ್ನಲ್ಲಿ ಮಾಹಿತಿ ದೊರೆಯುತ್ತದೆ.
ಇದು ಹೊಸ ಆ್ಯಪ್ ಅಲ್ಲ. ಈ ಹಿಂದಿನ ಚುನಾವಣೆಗಳಲ್ಲೇ ಸುಮಾರು 3 ಲಕ್ಷ ಮತದಾರರು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಚುನಾವಣಾ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಗೆಲುವಿಗಾಗಿ ಪೈಪೋಟಿ ನಡೆಸುತ್ತುರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು, ಚುನಾವಣಾ ಪ್ರಣಾಳಿಕೆಯನ್ನೂ ಘೋಷಣೆ ಮಾಡಿವೆ. ಜನಾದೇಶ ಏನಿರಲಿದೆ ಎಂಬುದಷ್ಟೇ ಈಗ ಕುತೂಹಲದ ವಿಷಯ.
ಇದನ್ನೂ ಓದಿ: New Voter ID Card: ವೋಟರ್ ಐಡಿ ಕಳೆದು ಹೋದರೆ ಡುಪ್ಲಿಕೇಟ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಸ್ಥಾನ ಗಳಿಸಿದ್ದವು. ಕಾಂಗ್ರೆಸ್ ಬಹುಮತ ಗಳಿಸದಿದ್ದರೂ ಒಂದು ವರ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿತ್ತು. ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Mon, 8 May 23