Karnataka Government Formation Live News Updates Today:ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಗದ್ದುಗೆಗಾಗಿ ಜಟಾಪಟಿ ನಡೆಯುತ್ತಿದೆ. ಅತ್ತ ದೆಹಲಿಯಲ್ಲಿ ಸಿಎಂ ಸ್ಥಾನದ ಜಟಾಪಟಿ ನಡೀತಿದ್ರೆ, ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದು ಸಿಎಂ ಕೂಗು ಎಬ್ಬಿಸಿದ್ದಾರೆ. ಇದ್ರ ಜೊತೆಗೆ ಡಿಸಿಎಂ ಪಟ್ಟಕ್ಕಾಗಿಯೂ ಕೂಡಾ ನಾಯಕರ ಬೆಂಬಲಿಗರು ಒತ್ತಡ ತಂತ್ರ ಅನುಸರಿಸೋಕೆ ಶುರು ಮಾಡಿದ್ದಾರೆ. ಬಹುಮತದಿಂದ ಗೆದ್ದು ಬೀಗಿದ ಕಾಂಗ್ರೆಸ್ ಆಡಳಿತ ಶುರು ಮಾಡುವಲ್ಲಿ ವಿಳಂಬ ಮಾಡುತ್ತಿದೆ. ಪಕ್ಷದೊಳಗಿರುವ ಜಗಳ ಆಚೆ ತೋರಿಸುತ್ತಿದೆ. ಇದರಿಂದ ಜನರಲ್ಲಿಯೂ ಕಾಂಗ್ರೆಸ್ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗುತ್ತಿದೆ. ಮತ್ತೊಂದೆಡೆ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತುಕಥೆ ನಡೆಸಿ ಸಿಎಂ ಸ್ಥಾನ ಅಂತಿಮಕ್ಕೆ ಕಸರತ್ತು ಮಾಡುತ್ತಿದ್ದಾರೆ. ಸದ್ಯ ಈಗ ಗದ್ದುಗೆ ಕಗ್ಗಂಟು ಬಗೆ ಹರಿಸೋಕೆ ಕಾಂಗ್ರೆಸ್ ಹೈಕಮಾಂಡ್ 30:30 ಸೂತ್ರ ಉಪಯೋಗಿಸಲು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಡಿಕೆ ಶಿವಕುಮಾರ್ ಒಪ್ಪುತ್ತಿಲ್ಲ. ಸದ್ಯ ಮಧ್ಯಾಹ್ನ ಸಭೆ ನಡೆಸಿ ಸಿಎಂ ಘೋಷಣೆ ಮಾಡುವ ಸಾಧ್ಯತೆ ಇದೆ. ರಾಜಕೀಯದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ರನ್ನು ನವದೆಹಲಿಯಲ್ಲಿ ಸಿದ್ದರಾಮಯ್ಯ ಭೇಟಿಯಾಗಿದ್ದು, ಚರ್ಚೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್ ಜತೆ ಸಿದ್ದರಾಮಯ್ಯ, ಸುರ್ಜೇವಾಲ ಮಾತುಕತೆ ಮಾಡಿದ್ದಾರೆ.
ರಾಮನಗರ: ಬಿಜೆಪಿಯಲ್ಲಿ ನನ್ನದು 4ನೇ ಸೋಲು ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು. ನಾನು ಗೆಲುವು ಸಾಧಿಸಲು ಬೇರೆ ಪಕ್ಷಗಳಿಗೆ ಹೋಗಬಹುದಿತ್ತು. ಸಾಕಷ್ಟು ಅಭಿಪ್ರಾಯವನ್ನ ಕ್ಷೇತ್ರದ ಮುಖಂಡರು ನನಗೆ ತಿಳಿಸಿದ್ರು. ಒಂದು ಸಮುದಾಯ ಮತ ಹಾಕದಿರುವುದರಿಂದ ಸೋಲಿಗೆ ಕಾರಣವಾಗಿದೆ. ಒಕ್ಕಲಿಗರು HD ದೇವೇಗೌಡ, HD ಕುಮಾರಸ್ವಾಮಿ ಮಾತಿಗೆ ಮರಳಾಗಿ ಮತಹಾಕಿದ್ದಾರೆ ಎಂದರು.
ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆವು ಎಂದು ಮಾಜಿ ಸಚಿವ, ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಟ್ವೀಟ್ ಮಾಡಿದ್ದಾರೆ. 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲ. ನಮ್ಮ ಸಮಸ್ಯೆ ಬಗೆಹರಿಸುವ ಸ್ಥಾನದಲ್ಲಿ ಸಿದ್ದರಾಮಯ್ಯಗೆ ವಿನಂತಿಸಿದ್ದಾರೆ.
ದೆಹಲಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ನಿವಾಸಕ್ಕೆ ಡಿಕೆ ಶಿವಕುಮಾರ್ ಬುಧವಾರ ಭೇಟಿ ನೀಡಿದ್ದಾರೆ. ರಾಘವೇಂದ್ರ ಹಿಟ್ನಾಳ್, ವಿನಯ್ ಕುಲಕರ್ಣಿ ಮತ್ತಿತರರು ಆಗಮಿಸಿದ್ದರು.
ನವದೆಹಲಿಯ ರಾಜಾಜಿ ಮಾರ್ಗ್ 10ರಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಎಂ.ಬಿ.ಪಾಟೀಲ್ ಭೇಟಿ ನೀಡಿದ್ದಾರೆ. M.B.ಪಾಟೀಲ್ ಜತೆ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಲಿದ್ದಾರೆ.
ರಾಮನಗರ: ಕ್ಷೇತ್ರದ ಬಿಜೆಪಿ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ ಎಂದು ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಹೇಳಿದ್ದಾರೆ. ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಸೋಲಿನ ಬಗ್ಗೆ ಬಹಳ ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಇನ್ನೂ 25 ವರ್ಷಗಳ ಕಾಲ ನಾವೆಲ್ಲಾ ರಾಜಕೀಯ ಮಾಡೋಣಾ, ರಾಜಕೀಯದಲ್ಲಿ ಬಹಳಷ್ಟು ಏರಿಳಿತ ಕಂಡಿದ್ದೇನೆ ಎಂದರು.
ರಾಮನಗರ: ಡಿಕೆ ಶಿವಕುಮಾರ್ ಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಂಬಲಿಗರಿಂದ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಭಾವಚಿತ್ರ ಹಿಡಿಡು ಡಿಕೆ ಸಿಎಂ ಮಾಡಲಿ ಎಂದು ಅಭಿಮಾನಿಗಳು ಘೋಷಣೆ ಮಾಡಿದ್ದಾರೆ.
ತರಾತುರಿಯಲ್ಲಿ ಸಿಎಂ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ದು, ಮುಂದಿನ 48 ಗಂಟೆ ಕಾಲ ಸಿಎಂ ಅಭ್ಯರ್ಥಿ ಘೋಷಣೆ ವಿಳಂಬವಾಗಲಿದೆ. ಹೈಕಮಾಂಡ್ ಮುಂದಿನ 2 ದಿನ ಕೇವಲ ಸಲಹೆ ಸ್ವೀಕರಿಸಲಿದೆ. ಸಲಹೆ ಆಧರಿಸಿ ಸಮಾಲೋಚನೆ ನಡೆಸಲಿದ್ದು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ನನಗೆ ಪೂರ್ಣ ಐದು ವರ್ಷಗಳ ಅಧಿಕಾರ ಅವಧಿ ನೀಡಬೇಕು ಎಂದು ಹೈಕಮಾಂಡ್ ನಾಯಕರ ಮುಂದೆ ಡಿ.ಕೆ.ಶಿವಕುಮಾರ್ ವಾದ ಮಾಡಿದ್ದಾರೆ. ಯಾವುದೇ ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿಗೆ ಇಲ್ಲ. ಈವರೆಗೆ ಅಧಿಕಾರ ಹಂಚಿಕೆಯ ಸೂತ್ರ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.
ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಎಐಸಿಸಿ ಘೋಷಣೆಗೂ ಮೊದಲೇ ಹೇಳಿಕೆ ನೀಡಿದ್ದವರಿಗೆ ನೋಟಿಸ್ ನೀಡುವುದಾಗಿ ರಣದೀಪ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದಿದ್ದ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಅಶೋಕ್ ಪಟ್ಟಣ್ಗೆ ನೋಟಿಸ್ ನೀಡುವಂತೆ ಸುರ್ಜೇವಾಲ ಸೂಚನೆ ನಿಡಿದ್ದಾರೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪೈಪೋಟಿ ಹಿನ್ನೆಲೆ ಇಂದು ಸಂಜೆ ಹೈಕಮಾಂಡ್ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ಸಭೆಯಲ್ಲಿ ವೇಣುಗೋಪಾಲ್, ಸುರ್ಜೇವಾಲ ಭಾಗಿಯಾಗಲಿದ್ದು, ಖರ್ಗೆ ನೇತೃತ್ವದ ಸಭೆಗೆ ರಾಜ್ಯ ನಾಯಕರಿಗೂ ಆಹ್ವಾನ ಸಾಧ್ಯತೆ ಇದೆ.
ನಾನು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ, ಅಧಿಕಾರಕ್ಕೆ ತಂದಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾತನಾಡಿದ ಅವರು, ನನಗೆ ಸಿಎಂ ಆಗಲು ಅವಕಾಶ ನೀಡದಿದ್ದರೆ ನೀವೇ ಸಿಎಂ ಆಗಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಆಗ್ರಹ ಮಾಡಿದ್ದಾರೆ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಸೋತಿದ್ದೆವು. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ ಎಂದರು.
ಹಾಸನ: ನನಗೆ ಮತ ನೀಡಿದ ಹಾಸನ ಕ್ಷೇತ್ರದ ಜನತೆಗೆ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಧನ್ಯವಾದ ಹೇಳಿದ್ದಾರೆ. ನನಗೆ ಶಕ್ತಿ ತುಂಬಿದ ಎಲ್ಲರಿಗೂ ಧನ್ಯವಾದ ಹೇಳ್ತೇನೆ. ಈ ಚುನಾವಣೆ ಹೇಗೆ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸ್ಫೂರ್ತಿದಾಯಕವಾಗಿ ಈ ಫಲಿತಾಂಶವನ್ನು ತೆಗೆದುಕೊಂಡಿದ್ದೇನೆ ಎಂದರು.
ಮತ್ತೆ ಸಿದ್ದರಾಮಯ್ಯ ಸಿಎಂ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ವಿದೇಶದಲ್ಲಿ ಸಿದ್ದು ಅಭಿಮಾನಿಗಳಿಂದ ಹಾಲೆಂಡ್ ರೋರಮೊನ್ಡ್ ಮೊರ್ಗನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಿದ್ದರಾಮಯ್ಯರವರು 2ನೇ ಭಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕು ಎಂದು ಉದ್ಯಮಿ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಅಶೋಕ್ ಹಟ್ಟಿ ನೇತೃತ್ವದಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ವಿಶೇಷ ಪೂಜೆ
ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದು, ಸಿದ್ದರಾಮಯ್ಯ ಬೆಂಬಲಿಗರು ಮಾಧ್ಯಮಗಳಿಗೆ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಖರ್ಗೆ ನಿವಾಸದಲ್ಲಿ ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಆಧಾರದಲ್ಲಿ ನಾಳೆ ಪ್ರಮಾಣ ವಚನ ಅಂತೀರಾ? ರಾಜ್ಯಪಾಲರ ಲಭ್ಯತೆ ಇದೆಯೋ ಇಲ್ವೋ ಎಂಬುದೇ ಖಚಿತತೆ ಇಲ್ಲ.
ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಯಾವುದೇ ಅಂತಿಮವಾಗಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ನಾಳೆ ಅಥವಾ ನಾಡಿದ್ದು ನೂತನ ಸಿಎಂ ಘೋಷಣೆ ಸಾಧ್ಯತೆ ಇದೆ ಎಂದು ಹೇಳಿದರು.
ಮೈಸೂರು: ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಟಿವಿ9ಗೆ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿದರು. ಇದುವರೆಗೂ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋಗಿಲ್ಲ. ಮೊದಲ ಬಾರಿಗೆ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರುವುದು ಖುಷಿ ಆಗಿದೆ ಎಂದರು.
ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಕಸರತ್ತು ಮುಂದುವರೆದಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ 50,000 ಜನರಿಗೆ ವ್ಯವಸ್ಥೆ ಮಾಡಿದ್ದು, ಗಣ್ಯರು, ಶಾಸಕರು, ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
ಬೆಂಗಳೂರು: ಸಿದ್ದರಾಮಯ್ಯಗೆ ಹಿಂದೆ ಆಡಳಿತ ನೀಡಿದ ಅನುಭವ ಇದೆ ಎಂದು ನಗರದಲ್ಲಿ ಟಿವಿ9ಗೆ ಸತೀಶ್ ಜಾರಕಿಹೊಳಿ ಹೇಳಿದರು. ಈ ಬಾರಿಯೂ ಸರಾಗವಾಗಿ ಆಡಳಿತ ನಡೆಯಲಿದೆ. ಸಿದ್ದರಾಮಯ್ಯ ಕಾರ್ಯಕ್ರಮದ ವೈಖರಿ ಮತ್ತೆ ರಿಪೀಟ್ ಆಗಲಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೂ ಅನುಕೂಲ ಆಗುವ ವಿಶ್ವಾಸವಿದೆ. ಡಿ.ಕೆ.ಶಿವಕುಮಾರ್ ಡಿಸಿಎಂ ಆಗಬಹುದು, ಆಗದೇ ಇರಬಹುದು. ನಾವೆಲ್ಲಾ ಅಧಿಕಾರ ಇದ್ದರೂ, ಇರದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ರಾಹುಲ್ ಗಾಂಧಿ ಭೇಟಿಯಾಗಿ ದೆಹಲಿಯ ಜನ್ಪತ್ 10ರಲ್ಲಿರುವ ಸೋನಿಯಾ ಗಾಂಧಿ ನಿವಾಸದಿಂದ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ತೆರಳಿದ್ದಾರೆ. ಇಲ್ಲಿಂದ ಸೀದ ನವದೆಹಲಿಯ ರಾಜಾಜಿ ಮಾರ್ಗ್ 10ರಲ್ಲಿರುವ ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ್ದಾರೆ.
2013 ಮೇ 13 ರಂದು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಪ್ರತಿಜ್ಞಾ ವಿಧಿ ಬೋಧಿಸಿದ್ದರು. ಅಂದು ಮೊದಲ ಬಾರಿ ವಿಧಾನಸೌಧ ಮುಂಭಾಗ ಹಾಗೂ ರಾಜಭವನ ಹೊರತುಪಡಿಸಿ, ಬೇರೆಡೆ ಮುಖ್ಯಮಂತ್ರಿಯ ಪದಗ್ರಹಣ ಸಮಾರಂಭ ನಡೆದಿತ್ತು. ಅಂದು ಕ್ರೀಡಾಂಗಣ ಸಿದ್ದರಾಮಯ್ಯ ಅವರ ಅಭಿಮಾನಿಗಳಿಂದ ತುಂಬಿತುಳುಕಿತ್ತು.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಘೋಷಣೆ ಸಾಧ್ಯತೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತವರು ಜಿಲ್ಲೆಯಲ್ಲಿ ಫುಲ್ ಹೈಅಲರ್ಟ್ ಮಾಡಲಾಗಿದೆ. ರಾಮನಗರ ಜಿಲ್ಲೆಯ ಪೊಲೀಸರಿಗೆ ಅಲರ್ಟ್ ಆಗಿರಲು ಸೂಚನೆ ನೀಡಿಲಾಗಿದೆ. ರಾಮನಗರ ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ. ಡಿಕೆಶಿಗೆ ಸಿಎಂ ಸ್ಥಾನ ತಪ್ಪುವ ಸಾಧ್ಯತೆ ಹಿನ್ನೆಲೆ ಗಲಾಟೆ ಆಗುತ್ತೆ ಎಂದು ಮುಂಜಾಗ್ರತಾ ಕ್ರಮವಾಗಿ ರಾಮನಗರಕ್ಕೆ ಬೆಂಗಳೂರು, ಮೈಸೂರಿನಿಂದ 6 ಕೆಎಸ್ಆರ್ಪಿ ತುಕಡಿ ಆಗಮಿಸಿದೆ.
ಸಿಎಂ ಸ್ಥಾನ ಸಿದ್ದರಾಮಯ್ಯಗೆ ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಅನುಭವ ಇದೆ. ಕಳೆದ ಬಾರಿಯಂತೆ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ. ಜನರಿಗೂ ಪಕ್ಷಕ್ಕೆ ಅನುಕೂಲ ಆಗುವ ವಿಶ್ವಾಸವಿದೆ. ಸೀಕ್ರೆಟ್ ಬ್ಯಾಲೆಟ್ ಮಾನದಂಡದ ಮೇಲೆ ಸಿದ್ದರಾಮಯ್ಯ ಆಯ್ಕೆ ನಡೆದಿದೆ. ಡಿಕೆ ಶಿವಕುಮಾರ್ ಡಿಸಿಎಂ ಇರಬಹುದು, ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಲೋಕಸಭೆ ಚುನಾವಣೆ ಕೂಡ ಮಾಡ್ತೇವೆ. ನಾನೂ ಕೂಡ ಡಿಸಿಎಂ ಕ್ಲೇಮ್ ಮಾಡ್ತೇನೆ. ಬೇರೆ ಸಮುದಾಯಕ್ಕೆ ಡಿಸಿಎಂ ಕೊಟ್ಟರೆ ಕ್ಲೇಮ್ ಮಾಡ್ತೀನಿ. ವೈಯಕ್ತಿಕವಾಗಿ ಡಿಸಿಎಂ ಬೇಡ, ಸಚಿವನಾಗಿಯೇ ಇರ್ತೀನಿ. ಡಿಕೆ ಶಿವಕುಮಾರ್ ಕೆಲಸ ಕೊಡುಗೆ ಬಹಳ ಇದೆ. ಸಮಾಧಾನಕರ ರೀತಿಯಲ್ಲೇ ಸಂಧಾನ ಆಗಿದೆ ಅವರ ಮಧ್ಯೆ. ಒಬ್ಬರೇ ಸಿಎಂ-ಡಿಸಿಎಂ ಇದ್ದರೆ ಒಳ್ಳೆಯದು ಎಂದರು
ನಾಳೆ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಅಧಿಕಾರಿಗಳು, ಪೊಲೀಸರು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಅಭಿಮಾನಿ ಸತೀಶ್ ಸಿದ್ದರಾಮಯ್ಯ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಉತ್ತಮ ನಾಯಕ. ಅವರ ಸೇವೆ, ರಾಜ್ಯದಲ್ಲಿ ಜಾರಿಗೊಳಿಸಿರುವ ಯೋಜನೆಯೇ ನನಗೆ ಪ್ರೇರಣೆ. ಎರಡೂವರೆ ವರ್ಷದ ಹಿಂದೆ ಟ್ಯಾಟ್ಯೂ ಹಾಕಿಸಿಕೊಂಡಿದ್ದೆ. ಟ್ಯಾಟ್ಯೂ ನೋಡಿ ಸಿದ್ದರಾಮಯ್ಯ ಸರ್ ಬೈದ್ರು. ಹೇಯ್ ಏನೊ ಇದು, ಹಿಂಗೆಲ್ಲ ಹಾಕಿಸಿಕೊಳ್ಳಬೇಡ ಅಂದ್ರು. ಎರಡು ಏಟು ನನ್ನ ಭುಜದ ಮೇಲೆ ಹೊಡೆದ್ರು. ನಮ್ಮ ಮನೆಯವರು ಸ್ನೇಹಿತರು ಎಲ್ಲರೂ ಖುಷಿ ಪಟ್ರು. ಮತ್ತೆ ಸಿಎಂ ಆದ್ರೆ ಹಲವು ಹಲವು ಯೋಜನೆಗಳನ್ನ ಜಾರಿಗೆ ತರುತ್ತಾರೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕು ಎಂದು ಅಭಿಮಾನಿ ಸತೀಶ್ ಖುಷಿ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಡಾ. ಸುಧಾಕರ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸುಧಾಕರ್ ಅವರೇ ಹೇಳಬೇಕು. ಇದರ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಬಾಲಗ್ರಹ ಪೀಡಿತವಾಗಿದೆ. ಕಾಂಗ್ರೆಸ್ ನಲ್ಲಿ ಸಿಎಂ ಯಾರಾಗ್ತಾರೆ ನೋಡೋಣ. ಯಾರು ಸಿಎಂ ಆಗ್ತಾರೆ ಅನ್ನುವುದರ ಮೇಲೆ ನಾವು ಸ್ಟ್ರಾಟಜಿ ಮಾಡುತ್ತೇವೆ ಎಂದರು.
ರಾಹುಲ್ ಗಾಂಧಿ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ್ದಾರೆ. ನವದೆಹಲಿಯ ಜನ್ಪತ್ನಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಬಂದಿಳಿದಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫೈನಲ್ ಆಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಹೆಸರು ಘೋಷಣೆ ಮಾಡುತ್ತಾರೆ. ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಮಾತುಕತೆ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಕನ್ಫರ್ಮ್ ಆಗಿದೆ. ನಾವೆಲ್ಲ ಸಿದ್ದರಾಮಯ್ಯಗೆ ಶುಭಾಶಯ ತಿಳಿಸಿದ್ದೇವೆ. ಸಿದ್ದರಾಮಯ್ಯ ಕೂಡ ತುಂಬಾ ಖುಷಿಯಾಗಿದ್ದಾರೆ. ಯಾವಾಗ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಕೂಡ ನಾಯಕರನ್ನು ಭೇಟಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಟಿವಿ9ಗೆ ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್ ತಿಳಿಸಿದ್ರು.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಭಾವಚಿತ್ರ ಹಿಡಿದು ಪ್ರೊಟೆಸ್ಟ್ ಮಾಡಲಾಗುತ್ತಿದೆ. ‘ಕೊಡಲೆಬೇಕು ಕೊಡಲೆಬೇಕು ಡಿಸಿಎಂ ಕೊಡಲೆಬೇಕು’ ಎಂದು ಘೋಷಣೆ ಕೂಗಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಕ್ಷೇತ್ರ ಗೆಲ್ಲಲು ಸತೀಶ್ ಜಾರಕಿಹೊಳಿ ಕಾರಣ. ಹೀಗಾಗಿ ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡದಿದ್ರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ, ಡಿಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಅಧ್ಯಕ್ಷ ಹುದ್ದೆ ಜೊತೆ ಎರಡು ಪ್ರಮುಖ ಖಾತೆಗಳಿಗೆ ಡಿಕೆಶಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇಂಧನ ಮತ್ತು ನೀರಾವರಿ ಮೇಲೆ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅಭಿಮಾನಿಗಳು ನಿವಾಸದ ಬಳಿ ಬರುವ ಮುನ್ಸೂಚನೆ ಹಿನ್ನಲೆ ಭದ್ರತೆ ಹೆಚ್ಚಿಸಲಾಗಿದೆ. ಒಂದು ಕೆಎಸ್ಆರ್ಪಿ ವ್ಯಾನ್, 70 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕುಮಾರಕೃಪಾ ಬಳಿ ಇರುವ ಸಿದ್ದು ಸರ್ಕಾರಿ ನಿವಾಸದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಬಹುತೇಕ ಪಕ್ಕಾ ಆಗಿದೆ. ಕಾಂಗ್ರೆಸ್ ಹೈಕಮಾಂಡ್ನಿಂದ ಅಧಿಕೃತ ಘೋಷಣೆ ಬಾಕಿ ಇದ್ದು ರಾಹುಲ್ ಗಾಂಧಿ ಭೇಟಿ ಬಳಿಕ ಅಧಿಕೃತ ಘೋಷಣೆ ಸಾಧ್ಯತೆ. ರಾಹುಲ್ ಗಾಂಧಿಯವರು ಸಿದ್ದರಾಮಯ್ಯ, ಡಿಕೆಶಿ ಜತೆ ಮಾತುಕತೆ ನಡೆಸಿ ಚರ್ಚೆ ಬಳಿಕ ಘೋಷಣೆ ಸಾಧ್ಯತೆ.
ಕಾಂಗ್ರೆಸ್ ಶಾಸಕರನ್ನು BJP ನಾಯಕರು ಸಂಪರ್ಕಿಸುವ ಸಾಧ್ಯತೆ ಇದೆಯಂದು ಸುರ್ಜೇವಾಲ ಜತೆ ಸಿದ್ದರಾಮಯ್ಯ ಚರ್ಚೆ ವೇಳೆ ವಿಚಾರ ಪ್ರಸ್ತಾಪ ಮಾಡಲಾಗಿದೆ. ಹೀಗಾಗಿ ರಣದೀಪ್ ಸುರ್ಜೇವಾಲ ಬೀದರ್ನಿಂದ ಚಾಮರಾಜನಗರವರೆಗೂ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈಗಾಗಲೇ ಅನೇಕ ಶಾಸಕರನ್ನು ಬಿಜೆಪಿ ಸಂಪರ್ಕಿಸಿರುವ ಮಾಹಿತಿ ಸಿಕ್ಕಿದ್ದು ನಾವು ಮೈಮರೆತರೆ ಯಾವುದೇ ಸಮಸ್ಯೆ ಎದುರಾಗಬಹುದು ಎಂದು ಸಿದ್ದರಾಮಯ್ಯ, ಡಿಕೆಶಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ.
ಮೇ18ರ ಮಧ್ಯಾಹ್ನ 3.30 ಕ್ಕೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ನಾಳೆ ತಪ್ಪಿದರೆ ಶನಿವಾರ ಕಾರ್ಯಕ್ರಮ ನಿಗದಿ ಮಾಡುವ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆಗಳಾಗುತ್ತಿವೆ. ಶುಕ್ರವಾರ ಅಮಾವಾಸ್ಯೆ ಇರುವ ಹಿನ್ನಲೆ ಪ್ರಮಾಣ ವಚನ ಬೇಡ ಎಂಬ ಬಗ್ಗೆ ಕೆಲವರು ಸಲಹೆ ನೀಡಿದ್ದಾರೆ. ಈಗಾಗಲೇ ತಯಾರಿ ಬಗ್ಗೆ ನಾಯಕರಿಂದ ಸೂಚನೆ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿರುವ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಈಶ್ವರ ಖಂಡ್ರೆ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ಸಿಗಬೇಕೆಂದು ಅಭಿಮಾನಿಗಳು ಮೈಲಾರ ಮಲ್ಲಣ್ಣನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಈಶ್ವರ ಖಂಡ್ರೆ ಡಿಸಿಎಂ ಆಗಲೆಂದು ದೇವರ ಮೊರೆ ಹೋಗಿದ್ದಾರೆ.
ಮಾಜಿ ಸಚಿವ ಡಾ.ಕೆ.ಸುಧಾಕರ್ ಸಮ್ಮಿಶ್ರ ಸರ್ಕಾರ ಪತನ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪರೋಕ್ಷ ಕಾರಣ ಎಂಬಂತೆ ಟ್ವೀಟ್ ಮಾಡುವ ಮೂಲಕ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ? ಎಂದು ಟ್ವೀಟರ್ನಲ್ಲಿ ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣನಾ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸುಧಾಕರ್#CoalitionGovernment #DrKSudhakar #Siddaramaiah #KarnatakaCMhttps://t.co/oxHsDy6K2y
— TV9 Kannada (@tv9kannada) May 17, 2023
BJP ಸರ್ಕಾರ ತಂದ ಮೀಸಲಾತಿ ಕೈಬಿಡುವ ಪ್ರಯತ್ನ ಮಾಡಬಾರದು ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಈಗ ಘೋಷಿಸಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮುಂದಾಗಲಿ. ಚುನಾವಣೆಯಲ್ಲಿ ಯಾರು ಏನು ಮಾತಾಡಿದ್ದಾರೆ ಎಂಬುದು ಗೊತ್ತಿಲ್ಲ. ಸರ್ಕಾರ ಸಮಾಜದ ಋಣ ತೀರಿಸುವತ್ತ ಗಮನ ಹರಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ರಾಯಚೂರಿನಲ್ಲಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಮುಂದಿನ 5 ವರ್ಷ ಉತ್ತಮ ಆಡಳಿತ ನೀಡಲಿ. ಕ್ರಿಯಾಶೀಲ ವ್ಯಕ್ತಿ ಈಶ್ವರ್ ಖಂಡ್ರೆಗೆ ಡಿಸಿಎಂ ಸ್ಥಾನ ನೀಡಬೇಕು. ನಾವು ಯಾವುದೇ ಜಾತಿ ಆಧಾರದ ಮೇಲೆ ಸ್ಥಾನಮಾನ ಕೇಳ್ತಿಲ್ಲ. ಅರ್ಹತೆಯ ಆಧಾರದ ಮೇಲೆ ಡಿಸಿಎಂ ಸ್ಥಾನವನ್ನು ಕೇಳಿದ್ದೇವೆ. ಹಾಗೆ ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಭಾಗದ ಜನರ ಕೊಡುಗೆ ಇದೆ ಎಂದು ರಾಯಚೂರಿನಲ್ಲಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಕರ್ನಾಟಕ ನೂತನ ಸಿಎಂ ಆಯ್ಕೆ ವಿಚಾರ ಟ್ರೋಲ್‌ಗಳಿಗೆ ಆಹಾರವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರು ಪೋಸ್ಟ್ ಹಾಕಿ ಟ್ರೋಲ್ ಮಾಡಲಾಗುತ್ತಿದೆ. ‘ಜಲ್ದಿ ಸರ್ಕಾರ ಸ್ಟಾರ್ಟ್ ಮಾಡ್ರಿಪಾ ಜನ ವೋಟ್ ಹಾಕಿರೋದು ಉಚಿತ ಭಾಗ್ಯ ಪಡಿಯೋಕೆ’ ಯಾರು ಸಿಎಂ ಆಗ್ತೀರಿ ಅಂತಾ ನೋಡೋಕಲ್ಲ ಅಂತಾ ಪೋಸ್ಟ್ ಹಾಕಲಾಗುತ್ತಿದೆ. ‘ಗ್ಯಾರಂಟಿಗೆ ಗೋರಂಟಿ ಹಚ್ಚಿಕೊಂಡು ಕರುನಾಡು ಕಾಯ್ತಿದೆ’ ಅಂತಾ ನೆಟ್ಟಿಗರು ಪೋಸ್ಟ್ ಹಾಕುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ಹರಿಹಾಯುತ್ತಿದ್ದಾರೆ. ಲಿಂಗಾಯತರನ್ನು ಬಿಜೆಪಿ ಮೇಲೆ ಎತ್ತಿ ಕಟ್ಟಿದ ಕಾಂಗ್ರೆಸಿಗರೇ ಅತಿಹೆಚ್ಚು ಸ್ಥಾನ ಗೆದ್ದಿರುವ ಲಿಂಗಾಯತರನ್ನು ಸಿಎಂ ಮಾಡಿ ಆಗುತ್ತಾ? ಎಂದು ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಸಿಎಂ ಸ್ಥಾನಕ್ಕಾಗಿ ಉಂಟಾಗಿರುವ ಕಗ್ಗಂಟು ಬಗೆ ಹರಿಸೋಕೆ ಹೈಕಮಾಂಡ್ 30:30 ಸೂತ್ರ ಉಪಯೋಗಿಸೋಕೆ ಚಿಂತಿಸಿದ್ದಾರೆ. ಅಧಿಕಾರ ಹಂಚಿಕ ಮೂಲಕ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಮಾಧಾನಕ್ಕೆ ಯತ್ನಿಸುತ್ತಿದ್ದಾರೆ. ಉಭಯ ನಾಯಕರಿಗೆ ತಲಾ 30 ತಿಂಗಳು ಆಡಳಿತ ನಡೆಸಲು ಅವಕಾಶ ನೀಡಲು ಮುಂದಾಗಿದ್ದಾರೆ. ಆದರೆ ಅಧಿಕಾರ ಹಂಚಿಕೆಗೆ ಡಿಕೆ ಶಿವಕುಮಾರ್ ಒಪ್ಪುತ್ತಿಲ್ಲ. ಅತ್ತ ಸಿದ್ದರಾಮಯ್ಯ ರಿಂದಲೂ ಅಧಿಕಾರ ಹಂಚಿಕೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಆಯ್ಕೆ ಇನ್ನಷ್ಟು ಕಗ್ಗಂಟಾಗಿದೆ. ಪ್ರತ್ಯೇಕವಾಗಿ ಇನ್ನೊಮ್ಮೆ ಸಭೆ ನಡೆಸಿ ಮಾತುಕತೆ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪೈಪೋಟಿ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ವರಿಷ್ಠರು ಯಾರನ್ನು ಸಿಎಂ ಮಾಡುತ್ತಾರೋ ಮಾಡಲಿ. ಆದರೆ ಪಂಚಮಸಾಲಿ ಸಮುದಾಯದ ಒಬ್ಬರಿಗೆ ಡಿಸಿಎಂ ಸ್ಥಾನ ನೀಡಲಿ ಎಂದು ಕೂಡಲಸಂಗಮದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಬೇಡಿಕೆ ಇಟ್ಟಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ ಇಬ್ಬರೂ ಶ್ರೀಪೀಠದ ಸಂಪರ್ಕದಲ್ಲಿದ್ದಾರೆ. ಪಂಚಮಸಾಲಿ ಸಮುದಾಯದ ಒಬ್ಬರಿಗೆ ಡಿಸಿಎಂ ಸ್ಥಾನ ನೀಡಲಿ. ಪಂಚಮಸಾಲಿ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡ್ಬೇಕು. ಶಾಸಕ ವಿಜಯಾನಂದ ಕಾಶಪ್ಪನವರ್ಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಟ್ಟುಬಿಡದೆ ಹಠ ಹಿಡಿದಿದ್ದು ಈ ಬಗ್ಗೆ ತೀರ್ಮಾನಿಸಲು ನವದೆಹಲಿಯಲ್ಲಿ ಬೆಳಗ್ಗೆ 11 ಗಂಟೆಗೆ ಫೈನಲ್ ಮೀಟಿಂಗ್ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
Published On - 9:41 am, Wed, 17 May 23