AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನವಾಗಿ ಆಯ್ಕೆಯಾದ ಶೇ.55ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರು, 97% ಕೋಟ್ಯಾಧಿಪತಿಗಳು: ಯಾವ ಪಕ್ಷದವರ ಮೇಲೆ ಎಷ್ಟು ಕೇಸು?

ಹೊಸದಾಗಿ ಚುನಾಯಿತರಾದ ಕರ್ನಾಟಕದ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಇನ್ನು ಅನೇಕ ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಹಾಗಾದ್ರೆ, ನೂತನ ಯಾವ-ಯಾವ ಪಕ್ಷಗಳ ಶಾಸಕರ ಮೇಲೆ ಕೇಸ್​ ಎಷ್ಟಿವೆ? ಎಷ್ಟು ಶಾಸಕರು ಕೋಟ್ಯಾಧಿಪತಿಗಳು? ಇಲ್ಲಿದೆ ವಿವರ.

ನೂತನವಾಗಿ ಆಯ್ಕೆಯಾದ ಶೇ.55ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರು, 97% ಕೋಟ್ಯಾಧಿಪತಿಗಳು: ಯಾವ ಪಕ್ಷದವರ ಮೇಲೆ ಎಷ್ಟು ಕೇಸು?
ವಿಧಾನಸೌಧ
ರಮೇಶ್ ಬಿ. ಜವಳಗೇರಾ
|

Updated on: May 17, 2023 | 8:13 AM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Elections Result 2023) ಪ್ರಕಟವಾಗಿದ್ದು, ಈ ಬಾರಿ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ (Congress)  ಬಹುಮತ ಪಡೆದುಕೊಂಡಿದೆ, ಇನ್ನು ಬಿಜೆಪಿ(BJP) 66 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಜೆಡಿಎಸ್(JDS) 19 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿದೆ. ಇ್ನನು  ಪ್ರಸಕ್ತ 16ನೇ ವಿಧಾನಸಭೆಗೆ ಆಯ್ಕೆಯಾಗಿರುವ 224 ಶಾಸಕರ ಪೈಕಿ 122 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ (criminal Cases). ಕಳೆದ ಚುನಾವಣೆಯಲ್ಲಿ ಆಯ್ಕೆಯಾದವರಿಗಿಂತ ಈ ಬಾರಿಗಿಂತ  ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಹೆಚ್ಚು ಶಾಸಕರು ವಿಧಾನಸಭೆಗೆ ಪ್ರವೇಶಿಸಿದ್ದಾರೆ ಎಂದು ‘ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರಿಫಾಮ್ಸ್‌ರ್‍’ (ಎಡಿಆರ್‌) ಸಂಸ್ಥೆಯ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು-ಸೋಲು ಕಂಡವರು

2018ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಶಾಸಕರ ಪೈಕಿ 77 ಮಂದಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರು. ಅಲ್ಲದೇ 54 ಶಾಸಕರು ಗಂಭೀರ ಸ್ವರೂಪದ ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದರು. ಪ್ರಸ್ತುತ ಆಯ್ಕೆಯಾಗಿರುವ ಶಾಸಕರ ಪೈಕಿ 122 ಮಂದಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇನ್ನು, ಗಂಭೀರ ಕ್ರಿಮಿನಲ್‌ ಮೊಕದ್ದಮೆ ಘೋಷಣೆ ಮಾಡಿಕೊಂಡವರೂ ಈ ಬಾರಿ ಹೆಚ್ಚಿದ್ದಾರೆ. 71 ಮಂದಿ ಗಂಭೀರ ಸ್ವರೂಪದ ಕ್ರಿಮಿನಲ್‌ ಮೊಕದ್ದಮೆ ಘೋಷಣೆ ಮಾಡಿಕೊಂಡಿದ್ದಾರೆ.

ಕೊಲೆಗೆ ಸಂಬಂಧಿಸಿದ ಪ್ರಕರಣ ತಮ್ಮ ವಿರುದ್ಧ ದಾಖಲಾಗಿರುವ ಬಗ್ಗೆ ಒಬ್ಬ ಶಾಸಕರು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದರೆ, ಮೂವರು ಶಾಸಕರು ಕೊಲೆ ಯತ್ನ ಪ್ರಕರಣಗಳು ತಮ್ಮ ವಿರುದ್ಧ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. 7 ವಿಜೇತ ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಪಟ್ಟಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಏಳು ವಿಜೇತ ಅಭ್ಯರ್ಥಿಗಳ ಪೈಕಿ ಒಬ್ಬರು ಅತ್ಯಾಚಾರ ಸಂಬಂಧ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

ಯಾವ ಪಕ್ಷದವರ ಮೇಲೆ ಎಷ್ಟು ಕೇಸು?

ಕ್ರಿಮಿನಲ್‌ ಪ್ರಕರಣ ಸಂಬಂಧ ಪಕ್ಷವಾರು ಗಮನಿಸಿದರೆ ಕಾಂಗ್ರೆಸ್‌ನಿಂದ ವಿಜೇತರಾದ 134 ಅಭ್ಯರ್ಥಿಗಳಲ್ಲಿ 78, ಬಿಜೆಪಿಯಿಂದ ಗೆಲುವು ಸಾಧಿಸಿರುವ 66 ಅಭ್ಯರ್ಥಿಗಳ ಪೈಕಿ 34 ಮತ್ತು ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ 19 ಮಂದಿ ಪೈಕಿ 9 ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿವೆ. ಇನ್ನು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವಿಜೇತ ಅಭ್ಯರ್ಥಿಯು ಸಹ ಕ್ರಿಮಿನಲ್‌ ಮೊಕದ್ದಮೆ ಇರುವ ಬಗ್ಗೆ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

224 ಶಾಸಕರ ಪೈಕಿ 217 ಶಾಸಕರು ಕೋಟ್ಯಧೀಶರು

ಇನ್ನು ಈ ಬಾರಿಯ ವಿಧಾನಸಭೆಗೆ ಪ್ರವೇಶಿಸುವ 224 ವಿಜೇತರಲ್ಲಿ 217 ಮಂದಿ ಕೋಟ್ಯಧೀಶರಾಗಿದ್ದಾರೆ. ಕಾಂಗ್ರೆಸ್‌ನಿಂದ 132, ಬಿಜೆಪಿಯಿಂದ 66, ಜೆಡಿಎಸ್‌ನಿಂದ 18 ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಸರ್ವೋದಯ ಪಕ್ಷ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ತಲಾ ಒಬ್ಬರು ಹಾಗೂ ಇಬ್ಬರು ಸ್ವತಂತ್ರ ವಿಜೇತ ಅಭ್ಯರ್ಥಿಗಳು ಒಂದು ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅತಿ ಹೆಚ್ಚು ಆಸ್ತಿ ಹೊಂದಿದ್ದು, 1413 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ ಗೌರಿಬಿದನೂರು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಇದ್ದಾರೆ. 1267 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ನ ಪ್ರಿಯಾಕೃಷ್ಣ 1156 ಕೋಟಿ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

ಕಡಿಮೆ ಆಸ್ತಿ ಮೌಲ್ಯ ಹೊಂದಿರುವವರು

ಇನ್ನು ಕಡಿಮೆ ಆಸ್ತಿ ಮೌಲ್ಯ ಹೊಂದಿರುವವರಲ್ಲಿ ಸುಳ್ಯ ಕ್ಷೇತ್ರದ ಬಿಜೆಪಿಯ ವಿಜೇತ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುಂಚೂಣಿಯಲ್ಲಿದ್ದಾರೆ. ಕೇವಲ 28 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್‌.ಶ್ರೀವತ್ಸ 48 ಲಕ್ಷ ರೂ. ಮತ್ತು ಮುಧೋಳ ಕ್ಷೇತ್ರದ ಆರ್‌.ಬಿ. ತಿಮ್ಮಾಪುರ ಅವರು 58 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್