ಸತೀಶ್​ ಜಾರಕಿಹೊಳಿ, ಲಕ್ಷ್ಮಣ ಸವದಿ ತಮ್ಮೊಂದಿಗೆ ಶಿಷ್ಯರನ್ನು ಗೆಲ್ಲಿಸಿದ್ದು ಹೇಗೆ? ಇಲ್ಲಿದೆ ಬೆಳಗಾವಿ ಸಾಹುಕಾರರ ರಣತಂತ್ರ

ಸೋಲಿಸುತ್ತೇವೆ ಅಂತ ಓಡಾಡುತ್ತಿದ್ದ ಎದುರಾಳಿಗಳಿಗೆ ಸೋಲಿನ ಭಯ ಎನು ಅನ್ನೋದನ್ನ ತೋರಿಸುವುದಷ್ಟೇ ಅಲ್ಲದೇ ತಮ್ಮೊಂದಿಗೆ ತಮ್ಮ ಶಿಷ್ಯರನ್ನೂ ಗೆಲ್ಲಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದಾರೆ. ಎದುರಾಳಿಗಳಿಗೆ ನಡುಕ ಹುಟ್ಟಿಸಿ ಗೆದ್ದು ಬೀಗಿದ ಕಾಂಗ್ರೆಸ್​ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ಸಕ್ಸಸ್ ಆಗಿದ್ದು ಹೇಗೆ? ಇಲ್ಲಿದೆ ಸ್ಟೋರಿ

ಸತೀಶ್​ ಜಾರಕಿಹೊಳಿ, ಲಕ್ಷ್ಮಣ ಸವದಿ ತಮ್ಮೊಂದಿಗೆ ಶಿಷ್ಯರನ್ನು ಗೆಲ್ಲಿಸಿದ್ದು ಹೇಗೆ? ಇಲ್ಲಿದೆ ಬೆಳಗಾವಿ ಸಾಹುಕಾರರ ರಣತಂತ್ರ
ಲಕ್ಷ್ಮಣ ಸವದಿ (ಎಡಚಿತ್ರ) ರಮೇಶ್​ ಜಾರಕಿಹೊಳಿ (ಬಲಚಿತ್ರ)
Follow us
ವಿವೇಕ ಬಿರಾದಾರ
|

Updated on: May 17, 2023 | 7:42 AM

ಬೆಳಗಾವಿ: ಚುನಾವಣಾ ಫಲಿಂತಾಶ (Karnataka Election Result) ಬಂದು ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕರದ ಗದ್ದುಗೆ ಏರಲು ತಯಾರಿ ನಡೆಸಿದೆ. ಇದೇ ಸಂದರ್ಭದಲ್ಲಿ ಬೆಳಗಾವಿ (Belagavi) ಜಿಲ್ಲೆಯಲ್ಲಿ ಇಬ್ಬರು ಮಾಸ್ಟರ್ ಮೈಂಡ್ ಕಾರ್ಯದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಸೋಲಿಸುತ್ತೇವೆ ಅಂತ ಓಡಾಡುತ್ತಿದ್ದ ಎದುರಾಳಿಗಳಿಗೆ ಸೋಲಿನ ಭಯ ಎನು ಅನ್ನೋದನ್ನ ತೋರಿಸುವುದಷ್ಟೇ ಅಲ್ಲದೇ ತಮ್ಮೊಂದಿಗೆ ತಮ್ಮ ಶಿಷ್ಯರನ್ನೂ ಗೆಲ್ಲಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಎದುರಾಳಿಗಳಿಗೆ ನಡುಕ ಹುಟ್ಟಿಸಿ ಗೆದ್ದು ಬೀಗಿದ ಕಾಂಗ್ರೆಸ್​ ನಾಯಕರಾದ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮಣ ಸವದಿ (Laxman Savadi) ಸಕ್ಸಸ್ ಆಗಿದ್ದು ಹೇಗೆ? ಎಷ್ಟು ಜನ ನಾಯಕರಿಗೆ ಸೋಲಿನ ಭಯ ಹುಟ್ಟಿಸಿದ್ರು ಅಂತೀರಾ ಈ ಸ್ಟೋರಿ ನೋಡಿ.

ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬರನ್ನೊಬ್ಬರು ಸೋಲಿಸಲು ಸಾಕಷ್ಟು ರಣತಂತ್ರಗಳು ಶುರುವಾದವು. ಹಿಂದೂ ಪದ ಅಶ್ಲೀಲ ಅಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯನ್ನ ಸೋಲಿಸಲೇಬೇಕು ಅಂತ ಹಠಕ್ಕೆ ಬಿದ್ದಿದ್ದ ಬಿಜೆಪಿ ನಾಯಕರು ಸಾಕಷ್ಟು ರಣತಂತ್ರ ಮಾಡಿ ಅನೇಕ ನಾಯಕರನ್ನು ಸತೀಶ್ ಜಾರಕಿಹೊಳಿಯವರ ಕ್ಷೇತ್ರ ಯಮಕನಮರಡಿಗೆ ಕರೆಸಿ ಪ್ರಚಾರ ಮಾಡಿಸಿ ಹಿಂದುತ್ವದ ದಾಳ ಉರುಳಿಸಿದ್ದರು. ಮುಖ್ಯವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕಿ ಶಶಿಕಲಾ ಜೊಲ್ಲೆ, ಶಾಸಕ ಅಭಯ್ ಪಾಟೀಲ್ ಈ ಕ್ಷೇತ್ರದಲ್ಲಿ ನಿರಂತರವಾಗಿ ಸಂಚಾರ ನಡೆಸಿ ಹಿಂದುತ್ವದ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು. ಆದರೆ ಈ ಎಲ್ಲ ನಾಯಕರ ಪ್ಲ್ಯಾನ್ ಮಾತ್ರ ವರ್ಕೌಟ್ ಆಗಲಿಲ್ಲ, ಇದಕ್ಕೆ ಸುಮ್ಮನಿರದ ಸತೀಶ್ ಜಾರಕಿಹೊಳಿ ಮಾತ್ರ ಮಾಸ್ಟರ್ ಪ್ಲ್ಯಾನ್ ಮಾಡಿ ತಮಗೆ ಸೋಲಿಸಲು ಬಂದ ನಾಯಕರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಕರ್ನಾಟಕ ಸಿಎಂ ಕುರ್ಚಿ ಫೈಟ್: ಇಂದೇ ಘೋಷಣೆ, ಎಲ್ಲರ ಚಿತ್ತ ದೆಹಲಿಯತ್ತ

ಹೌದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಣತಂತ್ರ ಹೂಡಿ ವಿಜಯಪುರ ನಗರದಲ್ಲಿ ಖುದ್ದು ಪ್ರಚಾರ ನಡೆಸಿ ಕೊನೆಯಲ್ಲಿ ಯತ್ನಾಳ್ ಅವರನ್ನ ಕೆಲವೇ ಮತಗಳಲ್ಲಿ ಗೆಲ್ಲುವಂತ ಪರಿಸ್ಥಿತಿ ನಿರ್ಮಿಸಿ ಸೋಲಿನ ಭಯ ಹುಟ್ಟಿಸಿದ್ದರೇ ಇತ್ತ ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆಯವರು ಕೂಡ ಕೆಲವೆ ಮತಗಳಿಂದ ಗೆದ್ದರು. ಅಲ್ಲದೇ ಇತ್ತ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ್ ಪಾಟೀಲ್​ಗೂ ಸೋಲಿನ ಭೀತಿ, ಭಯ ಹೇಗಿರುತ್ತೆ ಅನ್ನೋದನ್ನ ತೋರಿಸುವುದರಲ್ಲಿ ಸತೀಶ್ ಜಾರಕೊಹೊಳಿ ಅವರು ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಶಿಷ್ಯಂದಿರನ್ನು ಕ್ಷೇತ್ರದಲ್ಲಿ ಗೆಲ್ಲಿಸುವಲ್ಲಿ ಸತೀಶ್ ಜಾರಕೊಹೊಳಿ ಯಶಸ್ವಿಯಾಗಿದ್ದಾರೆ. ಸವದತ್ತಿಯಲ್ಲಿ ವಿಶ್ವಾಸ್ ವೈದ್ಯ, ಉತ್ತರ ಕ್ಷೇತ್ರದಲ್ಲಿ ಆಸೀಪ್ ಸೇಠ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಈ ಮೂಲಕ ತಾವು ಮನಸ್ಸು ಮಾಡಿದರೇ ಚುನಾವಣೆಯಲ್ಲಿ ತಮ್ಮವರನ್ನು ಗೆಲ್ಲಿಸುವ ಶಕ್ತಿ ಇದೆ ವಿರೋಧ ಕಟ್ಟಿಕೊಂಡರೇ ಸೋಲಿನ ರುಚಿ ತೋರಿಸುವ ಸಾಮರ್ಥ್ಯ ಇದೆ ಎಂದು ಸಂದೇಶ ರವಾನೆ ಮಾಡಿದ್ದಾರೆ.

ಇನ್ನೂ ಒಂದು ಕಡೆ ಸತೀಶ್ ಜಾರಕಿಹೊಳಿ ಪ್ಲ್ಯಾನ್ ಮಾಡಿ ಎದುರಾಳಿಗಳಿಗೆ ತಮ್ಮನ್ನ ವಿರೋಧ ಕಟ್ಟಿಕೊಂಡರೇ ಎನಾಗುತ್ತೆ ಅನ್ನೋದನ್ನ ಬಿಸಿ ಮುಟ್ಟಿಸಿದರೇ ಇತ್ತ ಇನ್ನೊಬ್ಬ ನಾಯಕ ಲಕ್ಷ್ಮಣ ಸವದಿ ಕೂಡ ಎದುರಾಳಿಗಳಿಗೆ ಮಣ್ಣು ಮುಕ್ಕಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಬಿಜೆಪಿಯಿಂದ ಹೊರ ಬಂದ ಲಕ್ಷ್ಮಣ ಸವದಿ ಕಾಂಗ್ರೆಸ್​ದಿಂದ ಅಥಣಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ತಾವು ಗೆಲ್ಲುವುದಷ್ಟೇ ಅಲ್ಲದೆ ತಮ್ಮೊಂದಿಗೆ ಇನ್ನಿಬ್ಬರನ್ನೂ ಗೆಲ್ಲಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದಾರೆ.

ಕಾಗವಾಡದಲ್ಲಿ ರಾಜು ಕಾಗೆ ಹಾಗೂ ಕುಡಚಿಯಲ್ಲಿ ಮಹೇಂದ್ರ ತಮ್ಮಣ್ಣವರ್ ಅವರನ್ನ ಗೆಲ್ಲಿಸಿ ತಾವು ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಇತ್ತ ಎದುರಾಳಿ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿಯವರನ್ನು ಸೋಲಿಸಲು ಸಾಕಷ್ಟು ತಂತ್ರಗಳನ್ನ ಮಾಡಿದ್ದರೂ ಅದಕ್ಕೆ ತಣ್ಣೀರೆರಚುವ ಕೆಲಸ ಮಾಡಿ, ಸೈಲೆಂಟ್ ಆಗಿದ್ದುಕೊಂಡೇ ತಮ್ಮ ಕ್ಷೇತ್ರದಲ್ಲಿ ಗೆದ್ದು ಇನ್ನೆರೆಡು ಕ್ಷೇತ್ರದಲ್ಲಿ ತಮ್ಮವರನ್ನು ಗೆಲ್ಲಿಸುವುದರಲ್ಲಿ ಲಕ್ಷ್ಮಣ ಸವದಿ ಯಶಸ್ಸು ಕಂಡರು. ಈ ಮೂಲಕ ರಮೇಶ್ ಜಾರಕಿಹೊಳಿಗೆ ಸರಿಯಾದ ತಿರುಗೇಟು ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಒಂದು ಕಡೆ ಸತೀಶ್ ಜಾರಕಿಹೊಳಿಯನ್ನು ಸೋಲಿಸಲು ಹೊರಟವರಿಗೆ ಸತೀಶ್ ಜಾರಕಿಹೊಳಿ ತಮ್ಮ ಮಾಸ್ಟರ್ ಪ್ಲ್ಯಾನ್ ಮೂಲಕ ಸೋಲಿನ ಭಯ ಹುಟ್ಟಿಸುವುದಷ್ಟೇ ಅಲ್ಲದೆ ಶಿಷ್ಯರನ್ನು ಗೆಲ್ಲಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಲಕ್ಷ್ಮಣ ಸವದಿ ಕೂಡ ತಾವು ಗೆಲ್ಲುವುದಷ್ಟೇ ಅಲ್ಲದೆ ತನ್ನಿಬ್ಬರು ಆಪ್ತರನ್ನ ಗೆಲ್ಲಿಸಿ ರಮೇಶ್​ ಜಾರಕಿಹೊಳಿಯವರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಎನೇ ಇರಲಿ ಇಬ್ಬರು ನಾಯಕರ ಕಾರ್ಯವೈಖರಿ ಎದುರಾಳಿಗಳಿಗೆ ನಡುಕ ಹುಟ್ಟುವಂತೆ ಮಾಡಿದ್ರೆ, ಜಿಲ್ಲೆಯಲ್ಲಿ ಮೇಲುಗೈ ಸಾಧಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ.

ಸಹದೇವ ಮಾನೆ ಟಿವಿ9 ಬೆಳಗಾವಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ