ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಾಂಕ ನಿಗದಿಯಾಗಿದೆ. ಇದೇ ಮೇ.10ರಂದು ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ.13ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಸರ್ಕಾರ ಚುನಾವಣೆ ಕಾರ್ಯಗಳಿಗೆ ಪಡೆಯುವ ವಾಹನಗಳಿಗೆ ದರ ನಿಗದಿ ಮಾಡಿದೆ. ಈ ಸಂಬಂಧ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಜೊತೆಯಲ್ಲಿ ಸಭೆ ಮಾಡಿದ್ದು, ಸರ್ಕಾರಿ, ಖಾಸಗಿ, ಗೂಡ್ಸ್, ಟ್ಯಾಕ್ಸಿಗಳಿಗೆ ಸರ್ಕಾರದಿಂದ ಬಾಡಿಗೆ ದರ ಫಿಕ್ಸ್ ಮಾಡಲಾಗಿದೆ. ಆ ಸಭೆಯಲ್ಲಿ ಪೆಟ್ರೋಲ್, ಡೀಸೆಲ್, ಭತ್ಯೆ, ಬಿಡಿ ಭಾಗಗಳ ದರ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಎನ್ ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ, ಬಿಎಂಟಿಸಿ ಬಸ್ ಹಾಗೂ ಖಾಸಗಿ ಬಸ್ ಗಳಿಗೆ ಬಾಡಿಗೆ ದರಗಳನ್ನು ನಿಗದಿ ಮಾಡದಲಾಗಿದ್ದು, ಬಸ್ ದರ ಈ ಕೆಳಗಿನಂತಿದೆ.
ಆದರೆ ಇದಕ್ಕೆ ಕ್ಯಾಬ್ ಮಾಲೀಕರು ಮತ್ತು ಚಾಲಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾರಣ ಕಳೆದ ಬಾರಿ ಎಲೆಕ್ಷನ್ ಸಂದರ್ಭದಲ್ಲಿ ನಿಗದಿ ಮಾಡಿದ್ದ ದರವನ್ನು ಈ ಬಾರಿಯ ಎಲೆಕ್ಷನ್ ನಲ್ಲಿಯೂ ನಿಗದಿ ಮಾಡಿದ್ದಾರೆ. ಕಳೆದ ಬಾರಿಯ ಎಲೆಕ್ಷನ್ಗೂ ಈ ಬಾರಿಯ ಎಲೆಕ್ಷನ್ಗೂ ಡಿಸೇಲ್ನಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಸುಮಾರು 15 ರಿಂದ 20 ರುಪಾಯಿ ಅಷ್ಟು ವ್ಯತ್ಯಾಸವಿದೆ. ಹಾಗಾಗಿ ದಯವಿಟ್ಟು ದರವನ್ನು ಮರು ಪರಿಶೀಲನೆ ಮಾಡಿ ಇವತ್ತಿನ ಡಿಸೇಲ್ ದರಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ದರವನ್ನು ನಿಗದಿ ಮಾಡಬೇಕು.
ಕಳೆದ ಬಾರಿಯ ಎಲೆಕ್ಷನ್ ವೇಳೆ ಬಾಡಿಗೆಗೆ ಪಡೆದಿದ್ದ ಕ್ಯಾಬ್ಗಳ ಮಾಲೀಕರಿಗೆ ಸಾಕಷ್ಟು ಸತಾಯಿಸಿ ಹಣ ನೀಡಿದ್ದಾರೆ. ಸುಮಾರು ಮೂರು ತಿಂಗಳು ಅಲೆದಾಡಿದ ಮೇಲೆ ಹಣ ಪಾವತಿ ಮಾಡಲಾಗಿದೆ. ಕ್ಯಾಬ್ ಬಾಡಿಗೆ ಯಿಂದ ಬರುವ ಹಣವನ್ನು ನಂಬಿಕೊಂಡು ಬ್ಯಾಂಕ್ ಲೋನ್ ಫೈನಾನ್ಸ್ ಮೂಲಕ ಇಎಂಐ ಕಟ್ಟಬೇಕಾಗಿರುತ್ತದೆ. ದಯವಿಟ್ಟು ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ವಾಹನಗಳನ್ನು ಯೂಸ್ ಮಾಡಿಕೊಳ್ಳಬೇಡಿ. ನಮ್ಮ ವಾಹನಗಳನ್ನು ಕೇಳಲು ಬರಬೇಡಿ ಎಂದು ಮನವಿ ಮಾಡಿದ್ರೆ, ಮತ್ತೊಂದು ಕಡೆ ಸರ್ಕಾರಿ ಇಲಾಖೆಯಲ್ಲಿ ಸಾವಿರಾರು ವಾಹನಗಳಿವೆ ಅವುಗಳನ್ನು ಬಳಸಿಕೊಳ್ಳಿ ಅದನ್ನು ಬಿಟ್ಟು ಎಲೆಕ್ಷನ್ ಕಾರಣ ಕೊಟ್ಟು ಖಾಸಗಿ ವಾಹನಗಳನ್ನು ಟ್ರಾವೆಲ್ಸ್ ವಾಹನಗಳನ್ನು ಬಲವಂತವಾಗಿ ತೆಗೆದುಕೊಳ್ಳುವುದು ಸರಿಯಲ. ಇದರಿಂದ ನಮ್ಮ ಬದುಕು ಬೀದಿಗೆ ಬರುತ್ತದೆ ಕಳೆದ ಬಾರಿಯ ಎಲೆಕ್ಷನ್ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ನೂರಾರು ವಾಹನಗಳನ್ನು ರೋಡ್ನಲ್ಲಿ ಅಡ್ಡ ಹಾಕಿ ಹೆದರಿಸಿ ಬೆದರಿಸಿ ನಿಮ್ಮ ವಾಹನಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕ್ತಿವಿ ಎಂದು ಪಡೆದುಕೊಂಡಿದ್ದಾರೆ. ಈ ಬಾರಿ ಹಾಗೆ ಮಾಡಿದ್ರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು
Published On - 12:33 pm, Thu, 30 March 23