Malur Election Results: ಮಾಲೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕೆ.ಎಸ್.ಮಂಜುನಾಥಗೌಡ, ಜಿ.ಇ.ರಾಮೇಗೌಡ ಹಾಗೂ ವಿಜಯ್ ಕುಮಾರ್ ನಡುವೆ ಬಿಗ್ ಫೈಟ್
Malur Assembly Election Result 2023 Live Counting Updates: ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಎಸ್.ಮಂಜುನಾಥಗೌಡ, ಜೆಡಿಎಸ್ ನಿಂದ ಜಿ.ಇ.ರಾಮೇಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ (Malur Assembly Constituency) ಕಾಂಗ್ರೆಸ್ನಿಂದ ಹಾಲಿ ಶಾಸಕ ಕೆ.ವೈ.ನಂಜೇಗೌಡ, ಬಿಜೆಪಿಯಿಂದ ಮಾಜಿ ಶಾಸಕ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಕೆ.ಎಸ್.ಮಂಜುನಾಥಗೌಡ ಹಾಗೂ ಜೆಡಿಎಸ್ ನಿಂದ ಜಿ.ಇ.ರಾಮೇಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಯಲ್ಲಿ ಅತಿ ಹೆಚ್ಚು ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ನಡೆಯುವ ಕ್ಷೇತ್ರ ಮಾಲೂರು, ಮಾಲೂರು ಇಟ್ಟಿಗೆ ಹಾಗೂ ಹೆಂಚಿನ ಕಾರ್ಖಾನೆಗೆ ಪ್ರಸಿದ್ದಿ ಪಡೆದಿದ್ದ ಕ್ಷೇತ್ರ ಅದರ ಜೊತೆಗೆ ಮಾಲೂರಿನಲ್ಲಿ ವಿಶ್ವಪ್ರಸಿದ್ದ ಶಿಲ್ಪಕಲೆಯ ತವರೂರು ಎಂದೇ ಕರೆಯುವ ಶಿವಾರಪಟ್ಟಣ ಬಹಳ ಪ್ರಸಿದ್ದಿಯಾದ ಗ್ರಾಮ ಇಲ್ಲಿ ಕೆತ್ತಲ್ಪಡುವ ಶಿಲ್ಪಗಳಿಗೆ ದೇಶ ವಿದೇಗಳಿಂದಲೂ ಬೇಡಿಕೆ ಇದೆ. ಇನ್ನು ಇದರ ಜೊತೆಗೆ ಮಾಲೂರಿನಲ್ಲಿ ಕಲ್ಲುಗಣಿಗಾರಿಕೆ ಬಹಳ ಜೋರಾಗಿದ್ದು ಕ್ರಶರ್ ಉದ್ಯಮ ಮಾಲೂರಿನಲ್ಲಿ ಬಹಳ ಸದ್ದು ಮಾಡುತ್ತಿದೆ.ಬೆಂಗಳೂರಿಗೆ ಬಹಳ ಹತ್ತಿರವಿರುವ ಕಾರಣ ಮಾಲೂರು ಕ್ಷೇತ್ರದ ಬಹುಬಾಗದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಹಾಗೂ ಕೈಗಾರಿಕಾ ವಲಯ ಹೆಚ್ಚಾಗಿ ಅಭಿವೃದ್ದಿ ಹೊಂದಿದ್ದು ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆಗಳು ಜೋರಾಗಿರುತ್ತದೆ. ಕ್ಷೇತ್ರದ ಸ್ವಲ್ಪ ಭಾಗದ ಜನರು ಕೃಷಿಯಲ್ಲಿ ತೊಡಗಿದ್ದರೆ ಬಹಳಷ್ಟು ಜನ ಕೈಗಾರಿಕೆಯಲ್ಲಿ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.
ಮಾಲೂರು ಕ್ಷೇತ್ರದಲ್ಲಿ ಒಟ್ಟು 186838 ಮಂದಿ ಮತದಾರರಿದ್ದಾರೆ, ಇದರಲ್ಲಿ ಪುರುಷ ಮತದಾರರು 93228, ಮಹಿಳಾ ಮತದಾರರು 93603 ಜನರಿದ್ದಾರೆ. ಮಾಲೂರು ಕ್ಷೇತ್ರ ವ್ಯಾಪ್ತಿಗೆ ನಾಲ್ಕು ಹೋಬಳಿಗಳು ಬರುತ್ತವೆ ಮಾಲೂರು ಪಟ್ಟಣ, ಲಕ್ಕೂರು, ಮಾಲೂರು ಕಸಬಾ, ಮಾಸ್ತಿ, ಹಾಗೂ ಟೇಕಲ್ ಹೋಬಳಿಗಳು ಈಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಸಮುದಾಯಗಳ ಜನಸಂಖ್ಯೆ ಆಧಾರದಲ್ಲಿ ಒಕ್ಕಲಿಗ ಮೊದಲನೇ ಸ್ಥಾನ, ಹಿಂದುಳಿದ ವರ್ಗ 2ನೇ ಸ್ಥಾನ, ಮೂರನೇ ಸ್ಥಾನದಲ್ಲಿ ಮುಸ್ಲಿಂ ಹಾಗೂ ಎಸ್‌ಟಿ ಸಮುದಾಯದ ಮತದಾರರಿದ್ದಾರೆ. ಲಕ್ಕೂರು ಹೋಬಳಿಯಲ್ಲಿ ಎಸ್‌ಸಿ, ಒಕ್ಕಲಿಗರು, ಹಿಂದುಳಿದ ವರ್ಗದವರು, ಕಸಬಾ ಹೋಬಳಿಯಲ್ಲಿ ಹಿಂದುಳಿದವರ್ಗ, ಒಕ್ಕಲಿಗರು, ಎಸ್‌ಸಿ, ಮಾಸ್ತಿ ಹೋಬಳಿಯಲ್ಲಿ ಎಸ್‌ಸಿ, ಒಕ್ಕಲಿಗರು, ಟೇಕಲ್ ಹೋಬಳಿಯಲ್ಲಿ ಒಕ್ಕಲಿಗರು, ಎಸ್‌ಸಿ, ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮುದಾಯಗಳ ಜನಸಂಖ್ಯೆ ಆಧಾರದ ಮೇಲೆ ರಾಜಕೀಯ ಪಕ್ಷಗಳು, ಗೆಲುವು ಸಾಧಿಸಲು ತಮ್ಮದೇ ರಣತಂತ್ರವನ್ನು ಹೂಡುತ್ತವೆ.
ಮಾಲೂರು ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳಿಗೂ ಜನ ಮನ್ನಣೆ ನೀಡಿದ್ದಾರೆ 1957ರಲ್ಲಿ ಕಾಂಗ್ರೆಸ್‌ನ ಎಚ್.ಸಿ.ಲಿಂಗಾರೆಡ್ಡಿ, 1962ರಲ್ಲಿ ಪಕ್ಷೇತರ ಎಸ್.ವಿ.ರಾಮೇಗೌಡ, 1967ರಲ್ಲಿ ಕಾಂಗ್ರೆಸ್‌ನ ಎಚ್.ಸಿ.ಎಲ್.ರೆಡ್ಡಿ,1972ರಲ್ಲಿ ಕಾಂಗ್ರೆಸ್‌ನ ಎ.ವಿ.ಮುನಿಸ್ವಾಮಿ, 1978ರಲ್ಲಿ ಐಎನ್‌ಸಿ(ಐ) ಪಿ.ಎನ್.ರೆಡ್ಡಿ, 1983ರಲ್ಲಿ ಕಾಂಗ್ರೆಸ್‌ನ ಎ.ನಾಗರಾಜು, 1985ರಲ್ಲಿ ಜೆಎನ್‌ಪಿ ಎಚ್.ಬಿ. ದ್ಯಾವಿರಪ್ಪ, 1989ರಲ್ಲಿ ಕಾಂಗ್ರೆಸ್ ಎ. ನಾಗರಾಜು,1994ರಲ್ಲಿ ಜನತಾದಳ ಎಚ್.ಬಿ.ದ್ಯಾವಿರಪ್ಪ, 1999ರಲ್ಲಿ ಕಾಂಗ್ರೆಸ್‌ನ ಎ.ನಾಗರಾಜು,2004, 2008ನೇ ಸಾಲಿನಲ್ಲಿ ಬಿಜೆಪಿಯ ಎಸ್.ಎನ್. ಕೃಷ್ಣಯ್ಯಶೆಟ್ಟಿ, 2013 ರಲ್ಲಿ ಜೆಡಿಎಸ್ ಕೆ.ಎಸ್.ಮಂಜುನಾಥಗೌಡ ಹಾಗೂ 2018 ರಲ್ಲಿ ಕಾಂಗ್ರೇಸ್ನ ಕೆ.ವೈ.ನಂಜೇಗೌಡ ಆಯ್ಕೆಯಾಗಿದ್ದಾರೆ. ಹೀಗಿರುವಾಗ ಮಾಲೂರು ವಿಧಾನ ಸಭಾ ಕ್ಷೇತ್ರದ ಮತದಾರ ಯಾರನ್ನು ಆಯ್ಕೆ ಮಾಡಿದ್ದಾನೆ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.
Published On - 12:50 am, Sat, 13 May 23