Moodbidri Election 2023 Winner: ಉಮಾನಾಥ್ ಕೊಟ್ಯಾನ್ ಭರ್ಜರಿ ಗೆಲುವು, ಮಿಥನ್​​ ರೈ ಸೋಲು

| Updated By: ಅಕ್ಷಯ್​ ಪಲ್ಲಮಜಲು​​

Updated on: May 13, 2023 | 6:44 PM

ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಭಾರೀ ಪೈಫೋಟಿ ಇತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ್ಯ ಇದ್ದು, ಉಮಾನಾಥ್ ಕೊಟ್ಯಾನ್ ಬಿಜೆಪಿಯಿಂದ ಗೆದ್ದಿದ್ದಾರೆ

Moodbidri Election 2023 Winner: ಉಮಾನಾಥ್ ಕೊಟ್ಯಾನ್ ಭರ್ಜರಿ ಗೆಲುವು, ಮಿಥನ್​​ ರೈ ಸೋಲು
ಉಮಾನಾಥ್ ಕೊಟ್ಯಾನ್
Follow us on

ಮೂಡಬಿದ್ರೆ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ (Moodbidri Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಭಾರೀ ಪೈಫೋಟಿ ಇತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ್ಯ ಇದ್ದು, ಉಮಾನಾಥ್ ಕೊಟ್ಯಾನ್ ಬಿಜೆಪಿಯಿಂದ ಗೆದ್ದಿದ್ದಾರೆ, ಕಳೆದ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲುವು ಸಾಧಿಸಿದ್ದರು. ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅವರ ಮುಂದೆ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಹೆಚ್ಚು ಮತಗಳನ್ನು ತಂದಿದ್ದರು, ಆದರೆ ಶಾಸಕರಾದ ನಂತರ ಜನರಿಗೆ ಸರಿಯಾದ ಸ್ಪಂದನೆ ನೀಡಿಲ್ಲ ಎಂಬ ಆರೋಪಗಳು ಇತ್ತು. ಇದರ ಜತೆಗೆ ಬಿಜೆಪಿ ವಿರುದ್ಧ ಕೂಡ ಉಮಾನಾಥ್ ಕೊಟ್ಯಾನ್ ಮಾತನಾಡಿದರು, ಆದರೆ ಬಿಜೆಪಿ ಮತ್ತೆ ಗೆದ್ದಿದ್ದಾರೆ. ಇದೀಗ ಜನ ಈ ಬಾರಿ ಅವರಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ.

ಇನ್ನೂ ಉಮಾನಾಥ್ ಕೊಟ್ಯಾನ್​​ಗೆ ಪ್ರಬಲ ಮುಂದೆ ಕಾಂಗ್ರೆಸ್​​ನ ಎಂ ಮಿಥನ್​​ ರೈ ಅವರು ಈ ಹಿಂದೆ ಲೋಕಸಭೆಯಲ್ಲೂ ಸ್ಪರ್ಧಿಸಿ ನಳಿನ್​​ ಕುಮಾರ್​ ಕಟೀಲ್ ಮುಂದೆ ಸೋತಿದ್ದರು. ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ನಿಂತು ಸೋತಿದ್ದಾರೆ. ಎಂ ಮಿಥನ್​​ ರೈ ಅವರು ಬಂಟ ಸಮುದಾಯದಲ್ಲಿ ಒಬ್ಬ ಚುಟುವಟಿಕೆಯುತ ವ್ಯಕ್ತಿ ಕೂಡ ಹೌದು, ಇದರ ಜತೆಗೆ ಎಂ ಮಿಥನ್​​ ರೈ ಅವರಿಗೆ ಮೂಡಬಿದ್ರೆ ಜನರಲ್ಲಿ ಹೇಳಿಕೊಳ್ಳವಷ್ಟು ಒಳ್ಳೆಯ ಅಭಿಪ್ರಾಯವಿಲ್ಲ, ಏಕೆಂದರೆ ಉಡುಪಿ ಮಠದ ಬಗ್ಗೆ ನೀಡಿದ ಹೇಳಿಕೆ. ಇವರಿಗೆ ಈ ಬಾರಿ ಗೆಲುವಿಗೆ ಮತ್ತೆ ಅಡ್ಡಿಯಾಗಿದೆ.

ಇನ್ನೂ ಜೆಡಿಎಸ್​​ ಅಭ್ಯರ್ಥಿಯಾಗಿ ಅಮರಶ್ರೀ ಸೋತಿದ್ದಾರೆ. ಇಲ್ಲಿ ಜೆಡಿಎಸ್​​ ಪ್ರಬಲವಾಗಿಲ್ಲ ಎಂದು ಹೇಳಲಾಗಿದೆ. ಇನ್ನೂ ಆಪ್​​​ನಿಂದ ವಿಜಯನಾಥ ವಿಠಲ ಶೆಟ್ಟಿ ಸ್ಪರ್ಧಿಸಿ ಸೋತಿದ್ದಾರೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ