ರಾಹುಲ್ ಗಾಂಧಿ ಭೇಟಿ ನೀಡುವಲ್ಲಿ ಗೆಲ್ಲುತ್ತೇವೆ, ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸುವೆ: ಸಿಸಿ ಪಾಟೀಲ್​ಗೆ ನಲಪಾಡ್ ಸವಾಲ್

|

Updated on: Apr 23, 2023 | 4:20 PM

ಎಲ್ಲೆಲ್ಲಿ ರಾಹುಲ್ ಗಾಂಧಿ ಬರುತ್ತಾರೆ ಅಲ್ಲೆಲ್ಲ ದೊಡ್ಡಮಟ್ಟದಲ್ಲಿ ಗೆಲ್ಲುತ್ತೇವೆ. ಒಂದು ವೇಳೆ ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸುತ್ತೇನೆ ಎಂದು ಸಿಸಿ ಪಾಟೀಲ್​ಗೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ ಸವಾಲ್ ಹಾಕಿದ್ದಾರೆ.

ರಾಹುಲ್ ಗಾಂಧಿ ಭೇಟಿ ನೀಡುವಲ್ಲಿ ಗೆಲ್ಲುತ್ತೇವೆ, ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸುವೆ: ಸಿಸಿ ಪಾಟೀಲ್​ಗೆ ನಲಪಾಡ್ ಸವಾಲ್
ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್
Follow us on

ಗದಗ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಶಕ್ತಿ ಸಚಿವ ಸಿಸಿ ಪಾಟೀಲ್ ಸಾಹೇಬರಿಗೆ ಗೊತ್ತಿಲ್ಲ. ನೆನಪಿಟ್ಟುಕೊಳ್ಳಿ ಎಲ್ಲೆಲ್ಲಿ ರಾಹುಲ್ ಗಾಂಧಿ ಬರುತ್ತಾರೆ ಅಲ್ಲೆಲ್ಲ ದೊಡ್ಡಮಟ್ಟದಲ್ಲಿ ಗೆಲ್ಲುತ್ತೇವೆ. ಒಂದು ವೇಳೆ ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸುತ್ತೇನೆ ಎಂದು ಸಿಸಿ ಪಾಟೀಲ್​ಗೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ (Nalapad)​ ಸವಾಲ್ ಹಾಕಿದ್ದಾರೆ. ಗದಗನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಬಿಜೆಪಿಗೆ ಗೆಲುವು ಎಂಬ ಲೇವಡಿ ವಿಚಾರವಾಗಿ ತಿರುಗೇಟು ನೀಡಿದರು. ಯೂತ್ ಕಾಂಗ್ರೆಸ್​ನಿಂದ ಟಿಕೆಟ್ ಕೊಡಿಸುವಲ್ಲಿ ನಲಪಾಡ್ ವಿಫಲ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ವಿನೋದ್ ಅಸೂಟಿಗೆ ಸರಕಾರದಲ್ಲಿ ಚೇರ್ಮನ್ ಸೀಟ್ ಕೊಡುವ ಭರವಸೆ ನೀಡಲಾಗಿದೆ. ಬೇರೆ ಕಡೆ ಗೆಲ್ಲುವ ಅವಕಾಶ ಇದ್ದಲ್ಲಿ ಯುವಕರಿಗೆ ಟಿಕೆಟ್ ಕೊಡಲಾಗಿದೆ ಎಂದು ತಿಳಿಸಿದರು.

ಟಿಕೆಟ್ ಕೊಡೋದು ಮುಖ್ಯ ಅಲ್ಲ, ಗೆಲ್ಲುವುದು ಮುಖ್ಯ ಇದೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಜಗದೀಶ್ ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್ ಮತ್ತಷ್ಟು ಬಲ ಬಂದಿದೆ. 224 ಸೀಟ್​ನಲ್ಲಿ ಒಬ್ಬ ಮುಸ್ಲಿಂರಿಗೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಬಿಜೆಪಿಯಲ್ಲಿ ಯಾರೂ ಮುಸಲ್ಮಾನರು ಇಲ್ವಾ ಅಂತ ಪ್ರಶ್ನೆ ಮಾಡಿದ್ದು, ಈ ಬಗ್ಗೆ ಯಾರೂ ಮಾತನಾಡೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಚಿತ್ತರಗಿ ಶ್ರೀ, ಪೇಚಿಗೆ ಸಿಲುಕಿದ ಸಂಘಟಕರು

ರಾಹುಲ್ ಗಾಂಧಿ ಬಂದು ಹೋಗುವುದರಿಂದ ನಮ್ಮ ಬಲ ಹೆಚ್ಚುತ್ತದೆ: ಎಚ್​.ಕೆ ಪಾಟೀಲ್

ಕಾಂಗ್ರೆಸ್ ಅಭ್ಯರ್ಥಿ ಎಚ್​.ಕೆ ಪಾಟೀಲ್​ ಮಾತನಾಡಿ, ರಾಹುಲ್ ಗಾಂಧಿ ಬಂದು ಹೋಗುವುದರಿಂದ ನಮ್ಮ ಬಲ ಹೆಚ್ಚುತ್ತದೆ. ನಮ್ಮ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಬಂದು ಹೋದ ಮೇಲೆ ಹಲವಾರು ಗೆಲುವು ಆಗಿವೆ. ಈ ರೀತಿ ಅಪಪ್ರಚಾರ ಮಾಡುತ್ತಿರುವ ಕೆಲವು ಶಕ್ತಿಗಳು ಇವೆ. ಆ ಶಕ್ತಿಗಳಿಗೆ ಬರುವ ದಿವಸದಲ್ಲಿ ನಿರಾಶೆ ಉಂಟಾಗುತ್ತದೆ. ಬಸವಣ್ಣನವರ ಜಯಂತಿ ದಿವಸ ಅದೇ ಮಾತು ಆಡುವವರಿಗೆ ನಾವೇನು ಅನ್ನಬೇಕು ಬಸವಣ್ಣನೇ ಬುದ್ದಿ ಕೊಡಬೇಕು ಎಂದು ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಮೋದಿ, ಯೋಗಿ ಪ್ರಚಾರದಿಂದ ಜೆಡಿಎಸ್​ಗೆ ಯಾವುದೇ ಎಫೆಕ್ಟ್ ಆಗಲ್ಲ: ಹೆಚ್​ಡಿ ದೇವೇಗೌಡ

ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಸನ್ಮಾನ

ಬಸವ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿ ಗೌರಿವಸಲಾಯಿತು. ವಿಜಯಾನಂದ ಕಾಶಪ್ಪನವರ್ ದಂಪತಿ ರಾಹುಲ್ ಗಾಂಧಿಗೆ ಬೆಳ್ಳಿಯ ಬಸವಣ್ಣ ಪ್ರತಿಮೆ ನೀಡಿ ಗೌರವಿಸಿದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲ ಗಣ್ಯರಿಗೂ ಸನ್ಮಾನ ಮಾಡಿ ಸತ್ಕಾರ ಮಾಡಲಾಯಿತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Sun, 23 April 23