Karnataka Assembly Election 2023: ಏ.24 ರಿಂದ ಮಲ್ಲಿಕಾರ್ಜುನ್​ ಖರ್ಗೆ ಮಂಗಳೂರು ಪ್ರವಾಸ, ಇಲ್ಲಿದೆ ವೇಳಾಪಟ್ಟಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ನಾಳೆ (ಏ.24) ರಂದ ಮಂಗಳೂರಿಗೆ ಭೇಟಿ ನೀಡುತ್ತಿದ್ದು, ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

Karnataka Assembly Election 2023: ಏ.24 ರಿಂದ ಮಲ್ಲಿಕಾರ್ಜುನ್​ ಖರ್ಗೆ ಮಂಗಳೂರು ಪ್ರವಾಸ, ಇಲ್ಲಿದೆ ವೇಳಾಪಟ್ಟಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ
Follow us
ವಿವೇಕ ಬಿರಾದಾರ
|

Updated on: Apr 23, 2023 | 3:47 PM

ಮಂಗಳೂರು: ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ (Mallikarjun Kharge) ರಾಜ್ಯ ಸುತ್ತುತ್ತಿದ್ದು, ಪಕ್ಷ ಸಂಘಟನೆ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ನಾಳೆ (ಏ.24) ಸಂಜೆ 5.30ಕ್ಕೆ ಮಂಗಳೂರಿಗೆ (Mangaluru) ಭೇಟಿ ನೀಡಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮರುದಿನ (ಏ.25) ರಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸುತ್ತಾರೆ. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಜಾನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Mangalore Airport: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರು ಪಾರ್ಕಿಂಗ್​ಗೆ ವಿನೂತನ ಯೋಜನೆ ಜಾರಿ

ಅಂದು ಸಂಜೆ ಮಂಗಳೂರಿನ ಟಿಎಮ್​ಎ ಪೈ ಹಾಲ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಏ.27 ರಂದು ಉಡುಪಿಯಲ್ಲಿ ಬೆಳಿಗ್ಗೆ ನಡೆಯುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಭಾಗಿಯಾಗುತ್ತಾರೆ. ನಂತರ ಸಂಜೆ 5 ಗಂಟೆಗೆ ಮಂಗಳೂರಿನಲ್ಲಿ ನಡೆಯುವ ರೋಡ್ ಶೋದಲ್ಲಿ ಪಾಲ್ಗೊಳ್ಳುತ್ತಾರೆ.

ಈ ರೋಡ್​ ಶೋ ನಗರದ ಕಲೆಕ್ಟರ್ಸ್ ಗೇಟ್ ನಿಂದ ನೆಹರು ಮೈದಾನದವರೆಗೆ ನಡೆಯಲಿದೆ. ಸುಮಾರು 2 ಕಿ.ಮೀ ದೂರದವರೆಗೆ ನಡೆಯಲಿರುವ ರೋಡ್ ಶೋನಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ