Raichur: ಮಾನ್ವಿಯಲ್ಲಿ ಕಿಚ್ಚ ಸುದೀಪ್ ರೋಡ್ ಶೋ ವೇಳೆ ಮೊಬೈಲ್ ಕಳ್ಳನಿಗೆ ಬಿತ್ತು ಗೂಸಾ
ನಟ ಸುದೀಪ್ ರೋಡ್ಶೋ ವೇಳೆ ಮೊಬೈಲ್ ಕದಿಯಲು ಯತ್ನಿಸಿದ ಯುವಕನ್ನು ಹಿಡಿದ ಜನರು ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾನ್ವಿ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ್ (BV Nayak) ಪರ ನಟ ಕಿಚ್ಚ ಸುದೀಪ್ (Kichcha Sudeep) ಅವರು ಭರ್ಜರಿ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಜನರು ಭಾಗಿಯಾಗ್ಗಿದ್ದನ್ನು ಕಂಡ ಯುವಕನೋರ್ವ ಮೊಬೈಲ್ ಕಳ್ಳತನ (Theft Attempt) ಮಾಡಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಹೊಡೆತಗಳನ್ನು ತಿಂದಿದ್ದಾನೆ. ಸಾವಿರಾರು ಜನರು ನೆರೆದಿದ್ದ ವೇಳೆ ಜೇಬಿಗೆ ಕೈಹಾಕುತ್ತಿದ್ದಂತೆ ಕಳ್ಳನನ್ನು ಹಿಡಿದ ಜನರು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.
ಮಾನ್ವಿ ಪಟ್ಟಣದಲ್ಲಿ ನಟ ಸುದೀಪ್ ರೋಡ್ಶೋ ಹಿನ್ನೆಲೆ ನಟನನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಸಾವಿರಾರು ಜನರ ಮಧ್ಯೆ ಕೈಬೀಸುತ್ತಾ ರೋಡ್ ಶೋ ನಡೆಸಿದ ಸುದೀಪ್ ಮತಯಾಚನೆಯೂ ನಡೆಸಿದರು. ಸಂಚಾರ ನಿರತ ಬಸ್ಗಳ ಮೇಲೆರಿದ ಅಭಿಮಾನಿಗಳಿಂದ ಹರ್ಷೋದ್ಗಾರ ವ್ಯಕ್ತವಾಯಿತು. ಡಿಜೆ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಬಿಜೆಪಿ ಅಭ್ಯರ್ಥಿಯಿಂದ ಮಾತು ತೆಗೆದುಕೊಂಡ ಸುದೀಪ್
ರೋಡ್ ಶೋ ವೇಳೆ ಮಾತನಾಡಿದ ಸುದೀಪ್ ಅವರು ಮಾನ್ವಿ ಬಿಜೆಪಿ ಅಭ್ಯರ್ಥಿ ಬಿವಿ ನಾಯಕ್ ಅವರಿಂದ ಮಾತು ತೆಗೆದುಕೊಂಡರು. ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಮೊದಲು ಮಾತು ಕೊಡಿ ಎಂದು ಸುದೀಪ್ ಹೇಳಿದಾಗ ಮಾತುಕೊಟ್ಟ ನಾಯಕ್, ನಾನು ನಿಮ್ಮ ಮೇಲೆ ಪ್ರಮಾಣ ಮಾಡುತ್ತೇನೆ, ನಿಮ್ಮ ಸೇವೆ ಮಾಡುತ್ತೇನೆ ಅಂತ ಸುದೀಪ್ ಹಾಗೂ ಜನರಿಗೆ ತಿಳಿಸಿದರು.
ಇದನ್ನೂ ಓದಿ: Kichcha Sudep: ಕಿಚ್ಚ ಹೋದಲೆಲ್ಲ ಜನಸಾಗರ; ಸುದೀಪ್ ಕ್ರೇಜ್ ಹೇಗಿದೆ ನೋಡಿ..
ನಿಮ್ಮಲ್ಲೊಂದೇ ಮನವಿ ನೀವು ಗೆದ್ದ ಮೇಲೆ, ನನ್ನ ಸ್ನೇಹಿತರನ್ನ (ಅಭಿಮಾನಿಗಳು) ಮರೀಬೇಡಿ, ಅವರು ಕೆಲಸ ಮಾಡದೇ ಇದ್ದರೇ ನನಗೆ ಹೇಳಿ. ನಾನು ಕೆಲಸ ಮಾಡಿಸುತ್ತೇನೆ ಎಂದು ಜನರಿಗೆ ಸುದೀಪ್ ಸೂಚಿಸಿದರು. ಮುಂದುವರೆದು ಮಾತನಾಡಿದ ಅವರು, ಇಷ್ಟು ಅಭಿಮಾನಿಗಳನ್ನು ಹೊಂದಿರುವುದಕ್ಕೆ ಹೆಮ್ಮೆಯಿದೆ. ಕಲಾವಿದ ಆಗಿದ್ದಕ್ಕೆ ಇಷ್ಟು ಅಭಿಮಾನಿ ದಂಡೇ ಬಂದಿದೆ ಅಂತ ಕೈ ಮುಗಿದು ನಮಿಸಿದರು.
ಮದಕರಿ ಡೈಲಾಗ್ ಹೊಡೆದ ಕಿಚ್ಚ ಸುದೀಪ್
ರೋಡ್ ಶೋ ವೇಳೆ ಗೆದ್ದೇ ಗೆಲ್ಲುವೇ ಒಂದು ದಿನ ಗೆಲಲೇ ಬೇಕು ಒಂದು ದಿನ ಎಂದು ಸ್ವಾತಿ ಮುತ್ತು ಸಿನಿಮಾದ ಹಾಡಿನ ಸಾಲು ಹೇಳಿದ ಸುದೀಪ್, ನಾವು ಗೆದ್ದರೆ ನಮ್ಮನ್ನ ಯಾರೂ ಉದುರಿಸಲು ಆಗಲ್ಲ ಎಂದರು. ಇದೇ ವೇಳೆ ಅಭಿಮಾನಿಗಳಿಗಾಗೊ ಮದಕರಿ ಸಿನಿಮಾದ ಡೈಲಾಗ್ ಹೊಡೆದರು. ದೇವರು ತಪ್ಪು ಮಾಡಿ ಎಂಥಥವರನ್ನೇ ಸೃಷ್ಟಿ ಮಾಡುತ್ತಾನೆ, ಖುಷಿಯಾಗಿದ್ದಾಗ ಮಾತ್ರ ನಿಮ್ಮ ಕಿಚ್ಚನನ್ನ ರೆಡಿ ಮಾಡುತ್ತಾನೆ, ಮದಕರಿ, ವೀರ ಮದಕರಿ ಎಂದ ಅಂತ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:48 pm, Thu, 4 May 23