ಬಜರಂಗದಳ ನಿಷೇಧಕ್ಕೆ ಬಾರಿ ವಿರೋಧ: ರಾಜ್ಯದೆಲ್ಲೆಡೆ ಮೊಗಳಗಿದ ಹನುಮಾನ್​ ಚಾಲೀಸಾ

ಹಿಂದೂ ಸಂಘಟನೆಗಳು ಇಂದು ಸಂಜೆ 7 ಗಂಟೆಗೆ ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸಾ ಪಠಣೆಗೆ ಕರೆ ನೀಡಿತ್ತು. ಹಾಗಾಗಿ ಅನೇಕ ಜಿಲ್ಲೆಗಳಲ್ಲಿ ಆಂಜನೇಯ ದೇವಾಲಯಗಳಲ್ಲಿ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದ್ದಾರೆ.   

Follow us
ಗಂಗಾಧರ​ ಬ. ಸಾಬೋಜಿ
|

Updated on:May 04, 2023 | 9:12 PM

ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ (Bajrang Dal) ನಿಷೇಧ ಮಾಡುತ್ತೇವೆ ಎಂದು ಹೇಳಿರುವುದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ (Congress) ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ವಿರುದ್ಧ ಕ್ರಮದ ಕುರಿತು ಪ್ರಸ್ತಾವ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ನಿಲುವನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ ಪರ-ವಿರೋಧಗಳು ಕೇಳಿಬರುತ್ತಿವೆ. ಈ ಹಿನ್ನೆಲೆ ಹಿಂದೂ ಸಂಘಟನೆಗಳು ಇಂದು ಸಂಜೆ 7 ಗಂಟೆಗೆ ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸಾ ಪಠಣೆಗೆ ಕರೆ ನೀಡಿತ್ತು. ಹಾಗಾಗಿ ಅನೇಕ ಜಿಲ್ಲೆಗಳಲ್ಲಿ ಆಂಜನೇಯ ದೇವಾಲಯಗಳಲ್ಲಿ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದ್ದಾರೆ.

ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವಂತೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಸಲಹೆಯನ್ನು ವಿರೋಧಿಸಿ ಬಿಜೆಪಿ ಪಕ್ಷದಿಂದ ಗುರುವಾರ ಬೆಂಗಳೂರಿನ ಆಂಜನೇಯ ದೇವಾಲಯದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದಾರೆ. ಮಲ್ಲೇಶ್ವರಂನ ಶ್ರೀರಾಮ ದೇವಾಲಯದಲ್ಲಿ ವಿಶ್ವಹಿಂದೂ ಪರಿಷತ್​ನಿಂದ ಆಯೋಜನೆ ಮಾಡಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಹನುಮಾನ್ ಚಾಲೀಸಾ ಪಠಿಸಿದರು. ಪಠಣಕ್ಕೂ ಮುನ್ನ ಕರಂದ್ಲಾಜೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಸವಾಲಿಗೆ ಹನುಮಾನ್ ಚಾಲೀಸಾ ಮೂಲಕ ಉತ್ತರ: ಶೋಭಾ ಕರಂದ್ಲಾಜೆ  

ಬಳಿಕ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಆಂಜನೇಯ, ರಾಮನ ವಿರೋಧಿಗಳು ನಮಗೆ ಒಂದು ಸವಾಲು ಕೊಟ್ಟಿದ್ದರು. ನಿಮಗೆ ಹನುಮಾನ್ ಚಾಲೀಸಾ ಬರುತ್ತಾ ಅಂತಾ ಕೇಳಿದ್ದರು. ಆಂಜನೇಯ ತಂದೆ ತಾಯಿಯ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದರು. ಇದಕ್ಕಾಗಿ ಇಡೀ ರಾಜ್ಯಾದ್ಯಂತ ಹನುಮಾನ್ ಚಾಲೀಸ್ ಪಠಣ ಮಾಡುತ್ತೀದ್ದೇವೆ. ಇದು ಹನುಮಂತನ ನಾಡು, ಕೊಪ್ಪಳದಲ್ಲಿ ಅಂಜನಾದ್ರಿ ಬೆಟ್ಟ ಕೂಡ ಇದೆ. ಆದರೆ ಇದರ ಬಗ್ಗೆ ತಪ್ಪು ದಾರಿಗೆ ಎಳೆದಿದ್ದಾರೆ. ಹನುಮಾನ್ ಚಾಲೀಸಾ ಮೂಲಕ ಅವರಿಗೆ ಸವಾಲಿನ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್​ ಹಿಂದುತ್ವವನ್ನ ವಿರೋಧ ಮಾಡಿಕೊಂಡೇ ಬಂದಿದೆ: ಚಕ್ರವರ್ತಿ ಸೂಲಿಬೆಲೆ 

ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದು, ಪಿಎಫ್ಐ ಜೊತೆಗೆ ಬಜರಂಗದಳವನ್ನು ತುಲನೆ‌ ಮಾಡಿದ್ದಾರೆ. ಮೊದಲಿನಿಂದಲೂ ಹಿಂದುತ್ವವನ್ನ ವಿರೋಧ ಮಾಡಿಕೊಂಡೇ ಕಾಂಗ್ರೆಸ್ ಬಂದಿದೆ. ನಾವು ಯಾರೂ ಕತ್ತಿಗಳನ್ನ ಹಿಡ್ಕೊಂಡು ಹೊಗಲ್ಲ. ಯಾರನ್ನು ಕತ್ತಿಯಿಂದ ಹೊಡೆಯಲ್ಲ. ಹಾಗಾಗಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ತಂದೆಗೆ ಟಿಕೆಟ್​ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಬಿಜೆಪಿ ಅಭ್ಯರ್ಥಿ ಪುತ್ರ: FIR ದಾಖಲು

ಎಲ್ಲರೂ ಅವರವರ ಊರುಗಳಲ್ಲಿ ದೇವಾಲಯದ ಮುಂದೆ ಪಠಣ ಮಾಡುತ್ತಿದ್ದಾರೆ. ದೇವಾಲಯ ಬಾಗಿಲು ಹಾಕಿದಕ್ಕೆ ವಿರೋಧ ವ್ಯಕ್ತವಾಗಿದೆ. ದೇವಾಲಯದವರ ಮೇಲೆ ಯಾವುದೇ ಕೋಪ ಇಲ್ಲ. ಪೊಲಿಟಿಕಲ್ ಟರ್ನ್ ಪಡೆಯುತೆ ಅಂತ ಹೀಗೆ ಮಾಡಿದ್ದಾರೆ. ಆದರೆ ಇದು ಪೊಲಿಟಿಕಲ್ ಟರ್ನ್ ತಗೊಳೋದು ಅಲ್ಲ. ಕಾಂಗ್ರೆಸ್​ ನವರು ಕಾಲ್ ಮಾಡಿದ್ದಕ್ಕೆ ಹೀಗೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್​ ಅಲ್ಲಿ ದೇವಸ್ಥಾನ ಕಟ್ಟಿಸಿಕೊಡುತ್ತೇನೆ ಅಂತಾರೆ. ಆದರೆ ಇಲ್ಲಿ ದೇವಾಲಯ ಬಾಗಿಲು ಹಾಕಿಸುತ್ತಾರೆ. ಇದು‌ ಒಂದು ತರ ಹಾಸ್ಯಾಸ್ಪದ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಕಾರ್ಯಕರ್ತರು  

ಧಾರವಾಡ ನಗರದ ಲೈಬ್ ಬಜಾರ್ ಹನುಮಂತ ದೇವಸ್ಥಾನದಲ್ಲಿ ಬಜರಂಗ ಕಾರ್ಯಕರ್ತರಿಂದ ಹುಮಾನ್ ಚಾಲಿಸಾ ಪಠಣ‌ ಮಾಡಿದರು. ಬಳಿಕ ಮಾತನಾಡಿದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಅದೇ ರೀತಿಯಾಗಿ ಚಿಕ್ಕಮಗಳೂರು ನಗರದ ರತ್ನಗಿರಿ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ನೂರಾರು ಬಜರಂಗದಳ ಕಾರ್ಯಕರ್ತರಿಂದ ಹನುಮಾನ್ ಚಾಲೀಸಾ ಪಠಿಸಿದ್ದಾರೆ.

ಇದನ್ನೂ ಓದಿ: ಧಾರವಾಡ: ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಆಪ್ತ ಸಹಾಯಕನ ಮನೆ ಮೇಲೆ ಐಟಿ ದಾಳಿ

ಬಜರಂಗದಳ ನಿಷೇಧ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಖಂಡಿಸಿ, ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾರ್ಯಕರ್ತರಿಂದ ಹನುಮಾನ್ ಮಂದಿರ ಎದುರು ಹನುಮಾನ್ ಚಾಲೀಸಾ ಪಠಣ ಮಾಡಿದರು. ರುದ್ರಕೇಸರಿ ಮಠಾಧೀಶ ಶ್ರೀ ಹರಿಗುರು ಮಹಾರಾಜ, ಬಾಪಟ್ ಬೀದಿಯ ನಾಗನಾಥ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹನುಮಾನ್ ಚಾಲೀಸಾ ಪಠಣಕ್ಕೂ ಮುನ್ನ ಓಂಕಾರ, ಜೈ ಶ್ರೀರಾಮ ಘೋಷಣೆ ಹಾಕಿದ್ದು, ಕಾರ್ಯಕ್ರಮದಲ್ಲಿ ವಿಹೆಚ್‌ಪಿ, ಬಜರಂಗದಳದ ನೂರಾರು ಕಾರ್ಯಕರ್ತರು ಭಾಗಿ ಆಗಿದ್ದರು.

ಒಂದು ಗಂಟೆಗಳ ಕಾಲ ಆಂಜನೇಯ ಚಾಲೀಸಾ ಪಠಣೆ ಮಾಡಿದ ಹನುಮ ಭಕ್ತರು

ಮೈಸೂರಿನಲ್ಲಿ ಹಿಂದೂಪರ ಸಂಘಟನೆ ಒಕ್ಕೂಟದಿಂದ ಶಿವರಾಂಪೇಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಲಾಯಿತು. ತ್ರಿಪುರ ಭೈರವಿ ಮಠದ ಕೃಷ್ಣಾ ಮೋಹನಾನಂದ ಗಿರಿ ಗೋಸ್ವಾಮಿ, ಶ್ರೀರಾಮಸೇನೆ ಸಂಚಾಲಕ ಸಂಜಯ್ ಬಜರಂಗದಳದ ಮೈ ಕಾ ಪ್ರೇಮ್ ಕುಮಾರ್ ಮತ್ತು ಯುವತಿಯರು, ಮಹಿಳೆಯರು ಭಾಗಿಯಾಗಿದ್ದು, ಒಂದು ಗಂಟೆಗಳ ಕಾಲ ಆಂಜನೇಯ ಚಾಲೀಸಾ ಪಠಣೆ ಮಾಡಿದರು.

ಅದೇ ರೀತಿಯಾಗಿ ಹುಬ್ಬಳ್ಳಿ, ಚಾಮರಾಜನಗರ, ರಾಯಚೂರು, ಗದಗ, ಚಿಕ್ಕಮಗಳೂರಿನಲ್ಲಿ ಸಹ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹನುಮಾನ್ ಚಾಲೀಸಾ ಪಠಣೆ  ಮಾಡಲಾಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Thu, 4 May 23

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ