ತಂದೆಗೆ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಬಿಜೆಪಿ ಅಭ್ಯರ್ಥಿ ಪುತ್ರ: FIR ದಾಖಲು
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರೊಬ್ಬರ ಪುತ್ರ ಬಂದೂಕಿನಿಂದ ಗಾಳಿಯಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರೊಬ್ಬರ ಪುತ್ರ ಬಂದೂಕಿನಿಂದ ಗಾಳಿಯಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು (firing) ಹಾರಿಸಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಫ್ಐಆರ್ ದಾಖಲಿಸಲಾಗಿದೆ ಎದು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಎಸ್ ಪಾಟೀಲ್ (Vijugouda S Patil) ಅವರ ಪುತ್ರ ಸಮರ್ಥ್ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಪರಿಯನ್ನು ಸಂಭ್ರಮಿಸಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಮರ್ಥ್ ತನ್ನ ಹ್ಯಾಂಡ್ ಗನ್ನಿಂದ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಸಮರ್ಥ್ ತನ್ನ ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದನ್ನು ಸಂಭ್ರಮಿಸಲು ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಈ ಘಟನೆ ಏಪ್ರಿಲ್ 12 ರಂದು ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಉಚಿತ ಕೊಡುಗೆಗಳು ಅಂತಿಮವಲ್ಲ ಎಂದ ಬರಗೂರು ರಾಮಚಂದ್ರಪ್ಪ; ಏನಿದರ ಮರ್ಮ?
ಎಫ್ಐಆರ್ ದಾಖಲು
ಈ ಬಗ್ಗೆ ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆ ಸಹ ಪ್ರಾರಂಭಿಸಲಾಗಿದೆ ಎಂದು ಅಲೋಕ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
FIR has been registered and further legal action is being taken.
Initiating process of arms license cancellation too https://t.co/GaxV38Jfi4
— alok kumar (@alokkumar6994) May 4, 2023
ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ವಾಗ್ದಾಳಿ
ಈ ಕುರಿತಾಗಿ ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ವಾಗ್ದಾಳಿ ಮಾಡಿದ್ದು, ಅಭಿವೃದ್ಧಿ ಹಾಗೂ ಕಣ್ಣೀರಿನ ಮದ್ಯ ಚುನಾವಣೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಗುಂಡಾಗಿರಿ ಮಾಡುತ್ತಾ ವೇದಿಕೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕಣ್ಣೀರು ಹಾಕುವ ವ್ಯಕ್ತಿಯನ್ನು ನಂಬಬಾರದು. ಎದುರಾಳಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಮೊಸಳೆ ಕಣ್ಣೀರು ಹಾಕುತ್ತಾ ಹೋಗುತ್ತಿದ್ದಾರೆ. ಅವರ ಮೊಸಳೆ ಕಣ್ಣೀರನ್ನು ಯಾರು ನಂಬಬಾರದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕಿಚ್ಚು ಹತ್ತಿದ ಬಜರಂಗದಳ ಬ್ಯಾನ್ ವಿಚಾರ; ಕಾಂಗ್ರೆಸ್ ಸಮೀಕ್ಷೆ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ
ಬಿಜೆಪಿ ಟಿಕೆಟ್ ಘೋಷಣೆಯಾದ ಕೂಡಲೇ ಇವರು ಸಂಭವಿಸಿದ ಪರ್ಯಾಯ ವಿಚಿತ್ರವಾಗಿತ್ತು. ಟಿವಿ ಪರದೆ ಮುಂದೆ ವಿಜುಗೌಡ ವಿಚಿತ್ರ ಸಂಭ್ರಮ ಮಾಡಿದ್ದರು. ಅವರ ಪುತ್ರ ಸಮರ್ಥ ಪಿಸ್ತೂಲ್ನಿಂದ ಮೂರು ಸುತ್ತು ಗುಂಡು ಗಾಳಿಯಲ್ಲಿ ಹಾರಿಸಿದ್ದಾರೆ. ಇದು ಮೋದಿ ಅವರಿಗೆ ಅಮೀತ್ ಶಾ, ಬಿಎಲ್ ಸಂತೋಷ್ ಅವರಿಗೆ ಕಾಣಿಸುವುದಿಲ್ವಾ ಎಂದಿದ್ದಾರೆ.
ಪ್ರಧಾನಿ ಮೋದಿ ಪ್ರಶ್ನೆ ಮಾಡಿದ ಸಂಗಮೇಶ
ಇವರಿಗೆ ಟಿಕೆಟ್ ಕೊಟ್ಟಿದ್ದು ಯಾವ ಆಧಾರದ ಮೇಲೆ. ಮೋದಿ ಅವರೇ ಇಂಥ ಗುಂಡಾ ಪ್ರವೃತ್ತಿಯ ವಿಜುಗೌಡ ಪಾಟೀಲಗೆ ಯಾಕೆ ಟಿಕೆಟ್ ಕೊಟ್ಟಿದಿದ್ದಾರೆ ಎಂದು ಪ್ರಶ್ನಿಸಿದರು. ನಮ್ಮ ಕ್ಷೇತ್ರ ಬಿಹಾರ ಆಗಬಾರದು, ಗುಂಡು ಹಾರಿಸೋ ಕ್ಷೇತ್ರವಾಗಬಾರದು. ಆತಂಕಕಾರಿ ಆದ ವಾತಾವರಣ ನಮ್ಮ ಕ್ಷೇತ್ರದಲ್ಲಿ ಉಂಟಾಗಬಾರದು. ಎಂ.ಬಿ ಪಾಟೀಲ್ ಅಭಿವೃದ್ಧಿ ಬಿಟ್ಟು ಬೇರೆ ಏನೂ ಮಾಡಿಲ್ಲ. ಅಭಿವೃದ್ಧಿಗೆ ಮತ್ತೊಂದು ಹೆಸರು ಎಂಬಿ ಪಾಟೀಲ್ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Thu, 4 May 23