ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Election 2023)ಹಿನ್ನಲೆ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ರೋಡ್ ಶೋ ಮೇ.6 ಮತ್ತು 7 ರಂದು ನಡೆಯಲಿದ್ದು, ಈ ಕುರಿತು ಕಾಂಗ್ರೆಸ್ ದಾರಿಯಲ್ಲಿ ಆ್ಯಂಬುಲೆನ್ಸ್ ತಂದು ಸೀನ್ ಕ್ರಿಯೇಟ್ ಮಾಡಲು ಹೊರಟಿದೆ ಎಂಬ ಶೋಭಾ ಕರಂದ್ಲಾಜೆ(Shobha Karandlaj) ಹೇಳಿಕೆ ವಿಚಾರವಾಗಿ ‘ಕಳೆದ ಬಾರಿ ಮೋದಿ ರೋಡ್ ಶೋ ಆದಾಗ ಆ್ಯಂಬುಲೆನ್ಸ್ ಸಮಸ್ಯೆ ಆಗಿದ್ದು, ಮಾಧ್ಯಮಗಳಲ್ಲಿ ವರದಿಯಾಗಿದೆ. ಜನರಿಗೆ ಸಮಸ್ಯೆ ಆಗಬಾರದು ಎಂದು ನಿನ್ನೆ(ಮೇ.4) ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ(KPCC SpokesPerson) ರಮೇಶ್ ಬಾಬು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಶೋಭಾ ಕರಂದ್ಲಾಜೆ ಅವರು ತುಂಬ ಚೆನ್ನಾಗಿ ಮಾನುಪುಲೇಟ್ ಮಾಡ್ತಾರೆ. ಅದಕ್ಕೆ ಅವರನ್ನು ಚುನಾವಣಾ ಉಸ್ತುವಾರಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಅವರೇ ‘ನೀವು ಕರ್ನಾಟಕ ರಾಜಕಾರಣದಲ್ಲಿ ಸೀತಾಮಾತೆ ಪಾತ್ರ ಮಾಡಿ, ಶೂರ್ಪನಖಿ ಪಾತ್ರ ಮಾಡಬೇಡಿ. ರಾಜ್ಯದ ಜನರಿಗೆ ಏನು ಅನುಕೂಲ ಆಗುತ್ತೋ ಅದನ್ನು ನೀವು ಮಾಡಿ. ರೋಡ್ ಶೋ ನಿಂದ ನಿಮಗೆ ಸಮಸ್ಯೆಯಾಗದೆ ಇರಬಹುದು, ಆದರೆ, ಬೀದಿ ವ್ಯಾಪರಸ್ಥರಿಗೆ ಸಮಸ್ಯೆ ಆಗಲಿದೆ. ಅಂಗಡಿಗಳನ್ನು ಮುಚ್ಚುತ್ತಾರೆ, ಇದರಿಂದ ಜನರಿಗೆ ಸಮಸ್ಯೆ ಆಗಲಿದೆ. ಅವರೊಬ್ಬ ಕ್ಯಾಬಿನೆಟ್ ಸಚಿವರಾಗಿ ಪ್ರಧಾನಮಂತ್ರಿಗಳಿಗೆ ಸಲಹೆ ಕೊಡಲಿ ಪಿಎಂ ಅವರಿಗೆ ಇರುವ ಪ್ರೋಟೋಕಾಲ್ ಬೇರೆ, ರಾಹುಲ್ ಗಾಂಧಿ ಅವರಿಗೆ ಆ ರೀತಿ ಇಲ್ಲ ಎನ್ನುವ ಮೂಲಕ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಚುನಾವಣೆ ಹೊಸ್ತಿಲಲ್ಲೇ ಬೆಂಗಳೂರಿನಲ್ಲಿ ವೋಟರ್ ಐಡಿ ಸಂಗ್ರಹಿಸುತ್ತಿದ್ದ ನಾಲ್ವರು ಪೊಲೀಸ್ ವಶಕ್ಕೆ
ಮೋದಿ ರೋಡ್ ಶೋ ವೇಳೆ ಆಂಬುಲೆನ್ಸ್ಗಳನ್ನ ತರೋದಕ್ಕೆ ಕಾಂಗ್ರೆಸ್ ಸಂಚು; ಶೋಭಾ ಕರಂದ್ಲಾಜೆ ಆರೋಪ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೇನು ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಪ್ರಧಾನಿ ಮೋದಿ ಮೇ.6 ಮತ್ತು 7ರಂದು ಬೆಂಗಳೂರಿನಲ್ಲಿ ರೋಡ್ಶೋ ನಡೆಸಲಿರುವ ಕುರಿತು ಇಂದು(ಮೇ.5) ಬೆಳಿಗ್ಗೆ ‘ ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್ ಷಡ್ಯಂತ್ರ ಮಾಡಿದ್ದು, ಈ ವೇಳೆ ಆಂಬುಲೆನ್ಸ್ಗಳನ್ನ ತರೋದಕ್ಕೆ ಕಾಂಗ್ರೆಸ್ ಸಂಚು ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದರು.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Fri, 5 May 23