Modi Speech In Mysuru: ಭಾರತದಿಂದ ಕರ್ನಾಟಕ ಪ್ರತ್ಯೇಕಿಸುವ ನೀತಿಯನ್ನು ಕನ್ನಡಿಗರು ಸಹಿಸಬೇಡಿ: ಪ್ರಧಾನಿ ಮೋದಿ

ಮೈಸೂರು ಜಿಲ್ಲೆಯ ನಂಜನಗೂಡಿನ ಎಲಚಗೆರೆಬೋರೆ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಭಾರತದಿಂದ ಕರ್ನಾಟಕ ಪ್ರತ್ಯೇಕಿಸುವ ನೀತಿಯನ್ನು ಕನ್ನಡಿಗರು ಸಹಿಸಬೇಡಿ ಎಂದು ಹೇಳಿದ್ದಾರೆ.

Modi Speech In Mysuru: ಭಾರತದಿಂದ ಕರ್ನಾಟಕ ಪ್ರತ್ಯೇಕಿಸುವ ನೀತಿಯನ್ನು ಕನ್ನಡಿಗರು ಸಹಿಸಬೇಡಿ: ಪ್ರಧಾನಿ ಮೋದಿ
ಮೈಸೂರಿನ ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Follow us
Rakesh Nayak Manchi
|

Updated on: May 07, 2023 | 8:03 PM

ಮೈಸೂರು: ಜಿಲ್ಲೆಯ ನಂಜನಗೂಡಿನ ಎಲಚಗೆರೆಬೋರೆ ಬಿಜೆಪಿ (BJP) ಸಮಾವೇಶದಲ್ಲಿ ಭಾರತ ಮಾತೆಗೆ ಹಾಗೂ ಭಜರಂಗ ಬಲಿಗೆ ಜಯ ಘೋಷಗಳನ್ನು ಹಾಕಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ದಕ್ಷಿಣ ಕಾಶಿ ನಂಜನಗೂಡಿ ಜನತೆಗೆ ನನ್ನ ನಮಸ್ಕಾರಗಳು, ಚಾಮುಂಡೇಶ್ವರಿ ದೇವಿಯ ಸನ್ನಿದಿಗೆ ಬಂದಿರೋದು ಬನ್ನ ಸೌಭಾಗ್ಯ. ಮಲೆ ಮಹದೇಶ್ವರ ಸ್ವಾಮಿ ಹಾಗೂ ಸುತ್ತೂರು ಮಠ ಆದಿ ಚುಂಚನಗಿರಿ ಮಠ, ದೇವನೂರು ಮಲ್ಲೇಶ ಮಠಕ್ಕೆ, ಕಪಿಲಾ‌ನದಿಗೆ ಪ್ರಣಾಮಗಳನ್ನು ಸಲ್ಲಿಸಿದರು.

ಕರ್ನಾಟಕದ ಜನಕ್ಕೆ ಹೊಸ ಇತಿಹಾಸ ಬರೆಯುವ ಚುನಾವಣೆ ಇದಾಗಿದೆ. ಇದು ಕರ್ನಾಟಕ ನಂಬರ್ 1 ಮಾಡುವ ಚುನಾವಣೆಯಾಗಿದೆ. ಈ ಬಾರಿ ಜನರು ಡಬಲ್ ಇಂಜಿನ್ ಸರ್ಕಾರ ಬಗ್ಗೆ ಭರವಸೆ ಇಟ್ಟಿದ್ದಾರೆ. ಕರ್ನಾಟಕದ ಮೂಲೆ‌ ಮೂಲೆಯಲ್ಲಿ ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂಬ ಒಂದೇ ಮಾತು ಒಂದೇ ಕೂಗು ಕೇಳಿಬರುತ್ತಿದೆ. ಸಹೋದರ ಸಹೋದರಿಯರೇ ಡಬಲ್ ಇಂಜಿನ್ ಸರ್ಕಾರ ಡಬಲ್ ಸೇವಾ ಮನೋಭಾವದಿಂದ ಎರಡು ಪಟ್ಟು ವೇಗವಾಗಿ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಜೆಡಿಎಸ್ ಸರ್ಕಾರ ಇದ್ದಾಗ ಇದರ ಲಾಭ ಕರ್ನಾಟಕಕ್ಕೆ ಸಿಗಲಿಲ್ಲ. ಆದರೆ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಪ್ರಮುಖವಾಗಿ ಎರಡು ಲಾಭವಿದೆ. ಡಬಲ್ ಇಂಜಿನ್ ಸರ್ಕಾರ ಆದ ಮೇಲೆ‌ ಹೆಚ್ಚಿನ ಬಂಡವಾಳ ಹೂಡಿಕೆ ಬಂದಿದೆ. ದೇಶದ ಜೊತೆಗೆ ಕರ್ನಾಟಕ ವೇಗದ ಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು. ವಿಶ್ವದಲ್ಲಿ ಅರ್ಥವ್ಯವಸ್ಥೆಯಲ್ಲಿ ಭಾರತ ಟಾಪ್ 5ನೇ ಸ್ಥಾನದಲ್ಲಿದೆ. ಇದರು ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿದೆ. ಭಾರತಕ್ಕೆ ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಮೊಬೈಲ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವಿಶ್ವದ ಪ್ರಮುಖ ಮೊಬೈಲ್​ ಕಂಪನಿಗಳು ಕರ್ನಾಟಕಕ್ಕೆ ಬರುತ್ತಿವೆ. ಇಂತಹ ಅಭಿವೃದ್ಧಿ ಪ್ರತಿಯೊಬ್ಬ ಕನ್ನಡೀಗರಿಗೆ ಹೆಮ್ಮೆಯ ವಿಷಯವಾಗಿದೆ. ಆದರೆ ಕಾಂಗ್ರೆಸ್​, ಜೆಡಿಎಸ್​ನವರು ಹೆಮ್ಮೆ ಪಡುವುದಿಲ್ಲ ಎಂದರು.

ಏಷ್ಯಾದ ದೊಡ್ಡ ಹೆಲಿಕಾಪ್ಟರ್​​ ತಯಾರಿಕ ನಿರ್ಮಾಣ ಘಟಕವನ್ನು ಕರ್ನಾಟಕದ ತುಮಕೂರಿನಲ್ಲಿ ಸ್ಥಾಪಿಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆ ತಂದಿದ್ದೇವೆ. ಕರ್ನಾಟಕ ಸ್ಟಾರ್ಟ್​ಪ್​ಗಳ ರಾಜಧಾನಿಯಾಗಬೇಕೆಂಬುದು ನಮ್ಮ ಕನಸು. 9 ವರ್ಷಗಳಲ್ಲಿ 1600 ಕಿ.ಮೀ ರೈಲ್ವೆ ವಿದ್ಯುದ್ದೀಕರಣ ಮಾಡಿದ್ದೇವೆ. ದೇಶದಲ್ಲಿ ಹೊಸ ಹೆದ್ದಾರಿಗಳನ್ನು ನಿರ್ಮಾಣ ಮಾಡಿದ್ದೇವೆ ಎಂದರು.

ಇದನ್ನೂ ಓದಿ: Modi Speech In Shivamogga: ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್​ ಕಂಟಕ: ಪ್ರಧಾನಿ ಮೋದಿ

ಕಾಂಗ್ರೆಸ್​ನವರು ಹಣ ಲೂಟಿ ಮಾಡಿಕೊಂಡು ಆರಾಮವಾಗಿ ಇದ್ದರು. ಬಡವರ ಹೆಸರಿನಲ್ಲಿ ಕಾಂಗ್ರೆಸ್​ನವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಈಗಲೂ ಅದೇ ಹೆಸರಿನಲ್ಲಿ ಚುನಾವಣೆಯಲ್ಲಿ ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಮೋದಿ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಆಗುತ್ತಿದೆ. ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಆಧುನೀಕರಣ ತಂದಿದ್ದೇವೆ ಎಂದರು.

ಕಾಂಗ್ರೆಸ್​ ಸರ್ಕಾರದಲ್ಲಿ 85 ಪರ್ಸೆಂಟ್ ಕಮಿಷನ್ ದಂಧೆ

ಕಾಂಗ್ರೆಸ್​ ಸರ್ಕಾರದಲ್ಲಿ 85 ಪರ್ಸೆಂಟ್ ಕಮಿಷನ್ ದಂಧೆ ನಡೆಯುತ್ತಿತ್ತು. ಇದನ್ನು ನಾನು ಹೇಳಿಲ್ಲ, ಕಾಂಗ್ರೆಸ್​ನ ಪ್ರಧಾನಿಯೇ ಹೇಳಿದ್ದರು. ಕೇಂದ್ರದಿಂದ ಅನುದಾನ ಕಳಿಸಿದ್ರೆ ಎಲ್ಲವೂ ನುಂಗುತ್ತಿದ್ದರು. ಫಲಾನುಭವಿಗಳಿಗೆ ತಲುಪಬೇಕಿದ್ದ ಹಣ ಕಾಂಗ್ರೆಸ್​ನವರೇ ತಿನ್ನುತ್ತಿದ್ದರು ಎಂದು ಮೋದಿ ಹೇಳಿದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಕರ್ನಾಟಕದ ಅಭಿವೃದ್ಧಿಗಾಗಿ ಜಾರಿಗೊಳಿಸಲಾಗಿದೆ ಎಂದರು.

ಸೂಚನೆಗಳಿಗೆ ವ್ಯಂಗ್ಯವಾಡಿದ ಕಾಂಗ್ರೆಸ್​ಗೆ ಮೋದಿ ಟಾಂಗ್

ಕೊವಿಡ್​ ಸಂದರ್ಭದಲ್ಲಿ ಕಾಂಗ್ರೆಸ್​​ನವರು ಕುಹಕವಾಡುತ್ತಿದ್ದರು. ಇಮ್ಯೂನಿಟಿ ಬಗ್ಗೆ ಕೆಲವು ಸಲಹೆ ನೀಡಿದರೆ ವ್ಯಂಗ್ಯವಾಡಿದ್ದರು. ರೈತರು ಬೆಳೆದ ಮಸಾಲೆಯ ಪದಾರ್ಥಗಳ ಬಗ್ಗೆ ಸಲಹೆ ನೀಡಲಾಹಿತ್ತು. ಕಾಂಗ್ರೆಸ್​ನವರು ಕರ್ನಾಟಕದ ರೈತರಿಗೆ ಅನುಮಾನ ಮಾಡಿದ್ದರು. ಕೆಲವು ದಿನಗಳ ಹಿಂದೆ ಬಂಡೀಪುರ ಅಭಯಾರಣ್ಯಕ್ಕೆ ಬಂದಿದ್ದೆ. ಕರ್ನಾಟಕದ ಸಾಮರ್ಥ್ಯ ವಿಶ್ವಕ್ಕೆ ಪರಿಚಯಿಸಲು ಬಂದಿದ್ದೆ. ಈ ಬಗ್ಗೆಯೂ ಕಾಂಗ್ರೆಸ್​ ನಾಯಕರು ನನ್ನ ವಿರುದ್ಧ ವ್ಯಂಗ್ಯವಾಡಿದ್ದರು. ಇದೀಗ ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್​ ಪ್ರಣಾಲಿಕೆಯಲ್ಲಿ ಹೇಳಿದೆ. ಇಂತಹ ಕಾಂಗ್ರೆಸ್​ಪಕ್ಷವನ್ನು ಯಾವುದೇ ಕಾರಣಕ್ಕೂ ಕ್ಷಮಿಸಬೇಡಿ ಎಂದು ಮೋದಿ ಹೇಳಿದರು.

ಭಯೋತ್ಪಾದಕರ ಮೇಲೆ ಕಾಂಗ್ರೆಸ್​​ನವರ ಆಶೀರ್ವಾದ ಇದೆ: ಮೋದಿ

ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ. ಹಿಂದುಳಿದ ವರ್ಗದವರಿಗೂ ಕಾಂಗ್ರೆಸ್​ನವರು ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ ಮೋದಿ, ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ. ಕಾಂಗ್ರೆಸ್​​ ಇದ್ದರೇ ದೇಶದಲ್ಲಿ ಉಗ್ರರು ಬಾಲ ಬಿಚ್ಚುತ್ತಾರೆ. ಭಯೋತ್ಪಾದಕರ ಮೇಲೆ ಕಾಂಗ್ರೆಸ್​​ನವರ ಆಶೀರ್ವಾದ ಇದೆ ಎಂದು ಆರೋಪಿಸಿದರು.

ಗಾಂಧಿ ಕುಟುಂಬದ ವಿರುದ್ಧ ಮೋದಿ ಗುಡುಗು

ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ನನ್ನ ದೇಶದಲ್ಲಿ ಗಾಂಧಿ ಕುಟುಂಬ ವಿದೇಶಿ ಶಕ್ತಿಗೆ ಅವಕಾಶ ನೀಡಿದೆ. ಗೌಪ್ಯವಾಗಿ ವಿದೇಶಿ ಶಕ್ತಿಗಳಿಗೆ ಭಾರತದಲ್ಲಿ ಅವಕಾಶ ನೀಡುತ್ತಾರೆ. ಇಂತಹ ವಿಚಾರಗಳನ್ನು ನಾನು ಎಂದಿಗೂ ಸಹಿಸುವುದಿಲ್ಲ. ನಾನು ತುಂಬಾ ನೋವಿನಿಮದ ಈ ಮಾತು ಹೇಳುತ್ತಿದ್ದೇನೆ. ನನ್ನ ಭಾರತದಲ್ಲಿ ವಿದೇಶಿಯವರ ಮೂಗು ತೂರಿಸುವುದು ಬೇಕಾಗಿಲ್ಲ. ನನ್ನ ದೇಶ ಸುರಕ್ಷಿತವಾಗಿದೆ ಎಂದರು.

ಕರ್ನಾಟಕ ಪ್ರತ್ಯೇಕತೆಯನ್ನು ಸಹಿಸಬೇಡಿ: ಮೋದಿ ಮನವಿ

ಕರ್ನಾಟಕವನ್ನು ದೇಶದಿಂದ ಪ್ರತ್ಯೇಕ ಎಂದು ಪರಿಗಣಿಸುತ್ತಾರೆ. ಕರ್ನಾಟಕವನ್ನು ವಿಂಗಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಅಸಮಾಧಾನ ಹೊರಹಾಕಿದ ಮೋದಿ, ಕರ್ನಾಟಕ ಭಾರತದ ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರಕವಿ ಕುವೆಂಪು ಅವರೇ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕನ್ನಡೀಗರು ಇಂತಹ ನೀತಿಗಳನ್ನು ಸಹಿಸಬೇಡಿ. ಪ್ರತಿ ಕನ್ನಡಿಗರು ಇಂತಹ ವಿಚ್ಛದ್ರಕಾರಿ ಕಾಂಗ್ರೆಸ್ ಬಗ್ಗೆ ಎಚ್ಚರವಾಗಿರಿ ಎಂದರು.

ಸಮಾಜವನ್ನು ವಿಂಗಡಿಸುವುದೇ ಕಾಂಗ್ರೆಸ್​ ಪಕ್ಷದ ಇತಿಹಾಸವಾಗಿದೆ. ಕಾಂಗ್ರೆಸ್​​ನ ಇಂತಹ ಕೆಟ್ಟ ಉದ್ದೇಶಗಳನ್ನು ಎಂದಿಗೂ ಕ್ಷಮಿಸಬೇಡಿ. ಆ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಸಮಯ ಈಗ ಬಂದಿದೆ ಎಂದು ಹೇಳಿದ ಮೋದಿ, ಮೇ 10ರಂದು ನಿಮ್ಮ ಅಮೂಲ್ಯವಾದ ಮತ ಕಮಲದ ಗುರುತಿಗೆ ನೀಡಿ. ಭಾರತ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯುತ್ತೇವೆ. ದೇಶದ ಜೊತೆಗೆ ಕರ್ನಾಟಕ ಅಭಿವೃದ್ಧಿಯಲ್ಲಿ ನಂಬರ್​ 1 ರಾಜ್ಯ ಮಾಡುತ್ತೇವೆ. ನಂಬರ್​ 1 ಕರ್ನಾಟಕ ಅಂದರೆ ಎಲ್ಲ ಸಮುದಾಯಗಳ ಅಭಿವೃದ್ಧಿ, ಮಹಿಳೆಯರು, ಯುವಕರಿಗೆ ಉದ್ಯೋಗ ಸೃಷ್ಟಿ, ಸ್ಟಾರ್ಟ್​​ಪ್, ಶಿಕ್ಷಣ. ರಸ್ತೆ, ಮೆಟ್ರೋ, ಮೂಲಸೌಕರ್ಯ, ಮೆಟ್ರೋ, ಟಿಜಿಟಲ್ ಕ್ಷೇತ್ರದಲ್ಲಿ ನಂಬರ್ 1 ಮಾಡಲಾಗುವುದು. ಹೀಗಾಗಿ ನಿಮ್ಮ ಅಮೂಲ್ಯವಾದ ಮತ ಬಿಜೆಪಿಗೆ ನೀಡಿ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ