ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಜೀವನ ಸುಧಾರಿಸಲಿದೆ: ಪ್ರಿಯಾಂಕಾ ಗಾಂಧಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರ ಸಮಸ್ಯೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು. ಜಿಲ್ಲೆಯ ಕುಂದಗೋಳದಲ್ಲಿ ರೋಡ್‌ಶೋ ವೇಳೆ ಮಾತನಾಡಿದರು.
ಧಾರವಾಡ: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರ ಸಮಸ್ಯೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದರು. ಜಿಲ್ಲೆಯ ಕುಂದಗೋಳದಲ್ಲಿ ರೋಡ್‌ಶೋ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಮನೆಗೂ ಗ್ಯಾರಂಟಿ ಕಾರ್ಡ್ ಕೊಟ್ಟಿದೆ. ಮನೆಯ ಯಜಮಾನಿಗೆ 2,000 ರೂ. ಕೊಡುವ ಭರವಸೆ ನೀಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಜೀವನ ಸುಧಾರಿಸಲಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯನ್ನು ಮತ್ತೆ ಜಾರಿ ಮಾಡುತ್ತೇವೆ. ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡುತ್ತೇವೆ. ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲ್ಲಿಸಿ ಎಂದು ಹೇಳಿದರು.
ಕಲೆ, ಸಂಸ್ಕೃತಿಗೆ ಧಾರವಾಡ ಬಹಳ ಕೊಡುಗೆ ನೀಡಿದೆ
ಈ ನಾಡಿಗೆ ಬಂದು ನನಗೆ ಖುಷಿ ಆಗುತ್ತಿದೆ. ಬಸವೇಶ್ವರ, ಸವಾಯಿ ಗಂಧರ್ವ ಚನ್ನಮ್ಮನ ನಾಡು ಇದು. ನಾನು ಸಿದ್ಧೇಶ್ವರ ಸ್ವಾಮೀಜಿಗಳಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ದೇಶದ ಸಾಹಿತ್ಯ, ಕಲೆ, ಸಂಸ್ಕೃತಿಗೆ ಧಾರವಾಡ ಬಹಳ ಕೊಡುಗೆ ಕೊಟ್ಟಿದೆ. ಕೃಷಿ ವಿಷಯದಲ್ಲಿ ಅನ್ಯಾಯಗಳು ಆದಾಗ ಈ ಭಾಗದ ರೈತರು ಹೋರಾಟಗಳನ್ನು ಮಾಡಿದ್ದಾರೆ ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿ ಅವನ್ಯಾವ ನಾಯಕರೀ?: ರಾಯಚೂರಿನಲ್ಲಿ ಗುಡುಗಿದ ಯಡಿಯೂರಪ್ಪ
ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಮತಯಾಚನೆ
ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ಬಂದಿಳಿದ್ದ ಪ್ರಿಯಾಂಕಾ ಗಾಂಧಿ ಹೆಲಿಪ್ಯಾಡ್‌ನಲ್ಲಿ ಇಳಿದ ತಕ್ಷಣ ಜನರತ್ತ ಕೈಬಿಸಿದರು. ಜನಗಳ ಮಧ್ಯೆ ತೆರಳಿ ಕೈಕುಲುಕಿದರು. ನಂತರ ರೋಡ್‌ಶೋನಲ್ಲಿ ಭಾಗಿಯಾದರು. ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದಿಂದ ಆರಂಭವಾದ ರೋಡ್‌ಶೋ, ಗಾಳಿ ಮರೆಮ್ಮ ದೇವಿ ವೃತ್ತದವರೆಗೂ ನಡೆದಿದ್ದು, ರೋಡ್‌ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಮತಯಾಚನೆ ಮಾಡಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜೊತೆ ಪ್ರಿಯಾಂಕಾ ಗಾಂಧಿ ಸಭೆ
ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಧಾರವಾಡಕ್ಕೆ ಆಗಮಿಸಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗಾಗಿ ಗೆಲುವಿಗಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದು, ಶೆಟ್ಟರ್ ಗೆಲುವಿಗಾಗಿ ಖಾಸಗಿ ಹೋಟೆಲ್‌ನಲ್ಲಿ ಸಭೆ ಮಾಡಿದರು. ವೀರಶೈವ ಲಿಂಗಾಯತ ಮುಖಂಡರು, ಪಕ್ಷದ ಪ್ರಮುಖರೊಂದಿಗೆ ಸಭೆ ಮಾಡಿದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಟ್ಟಿ ಹಾಕಲು ಮಾಸ್ಟರ್ ಪ್ಲ್ಯಾನ ಮಾಡಲಾಗಿದೆ.
ಇದನ್ನೂ ಓದಿ: PM Modi in Karnataka: ಸಮಾಜ ಒಡೆಯುವ ಕಾಂಗ್ರೆಸ್ ಅನ್ನು ಕ್ಷಮಿಸಬೇಡಿ; ಪ್ರಧಾನಿ ಮೋದಿ
2023ಕ್ಕೆ ಕಾಂಗ್ರೆಸ್ ಸರ್ಕಾರವೇ ಬರುತ್ತೆ: ಕೋನರೆಡ್ಡಿ
ಮಹದಾಯಿ ಕಳಸಾ ಬಂಡೂರಿ ನೀರು ಕುಡಿದು ಸಾಯುವ ತೀರ್ಮಾನ ಮಾಡಿದವನು ನಾನು. ನಿಮ್ಮ ಹಾಗೆ ಸುಳ್ಳು ಹೇಳುವುದಿಲ್ಲ ಎಂದು ನವಲಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೋನರೆಡ್ಡಿ ಹೇಳಿದರು. ನಿನ್ನೆ ಮಹದಾಯಿ ಬಗ್ಗೆ ಮಾತನಾಡಿದ್ದ ಅಮಿತ್ ಶಾ ಹೇಳಿಕೆ ತಿರುಗೇಟು ನೀಡಿದರು. 2023ಕ್ಕೆ ಕಾಂಗ್ರೆಸ್ ಸರ್ಕಾರವೇ ಬರುತ್ತೆ. ನಮ್ಮ ಸರ್ಕಾರದಲ್ಲಿಯೇ ಮಹದಾಯಿ ನೀರು ತರುತ್ತೇವೆ ಎಂದು ವಾಗ್ದಾಳಿ ಮಾಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ