ಈ ಚುನಾವಣೆ ನಂತರ ಕಾಂಗ್ರೆಸ್, ಜೆಡಿಎಸ್ ಪಕ್ಷ ಇರುವುದಿಲ್ಲ ಎಂದ ಸಚಿವ ಆರ್ ಅಶೋಕ್
ಈ ಚುನಾವಣೆ ನಂತರ ಕಾಂಗ್ರೆಸ್, ಜೆಡಿಎಸ್ ಪಕ್ಷ ಇರುವುದಿಲ್ಲ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಂಡ್ಯ: ಈ ಚುನಾವಣೆ ನಂತರ ಕಾಂಗ್ರೆಸ್, ಜೆಡಿಎಸ್ ಪಕ್ಷ ಇರುವುದಿಲ್ಲ ಎಂದು ಸಚಿವ ಆರ್.ಅಶೋಕ್ (R Ashoka) ಕಿಡಿಕಾರಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಿಳೆಯರಿಗೆ ಮಾಸಿಕ 2,000 ರೂ. ಕೊಡ್ತೀವಿ ಅಂತಾ ಹೇಳಿದ್ದಾರೆ. ಎಲ್ಲಾ ಕಡೆ ಚೆಕ್ಗಳನ್ನು ಕೊಡುತ್ತಾ ಇದ್ದಾರೆ. ಕನಕಪುರದಲ್ಲಿ ಹೆಣ್ಣು ಮಗಳು ಕಾಗದ ತೆಗೆದುಕೊಂಡು ಬಂದ್ದರು. ಅಣ್ಣ ಈ ಚೆಕ್ ಇಟ್ಟುಕೊಂಡು 2 ಸಾವಿರ ಹಣ ಕೊಡು ಅಂದ್ದರು. ಅದಕ್ಕೆ ನಾನು ಹೇಳಿದೆ ಅಮ್ಮಾ ನೀನು ಬ್ಯಾಂಕ್ಗೆ ಹೋಗು. ಇಲ್ಲ ಅಂದ್ರೆ ಮಾರ್ವಾಡಿ ಬಳಿ ಹೋಗು ಅಂದೆ ಎಂದು ಹೇಳಿದರು.
ಉಚಿತ ವಿದ್ಯುತ್ ನೀಡುತ್ತೇವೆ ಎಂದು ಕೆಪಿಸಿಸಿ ಅಧಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ರಕ್ತ ಬೇಡ, ಹಿಂದೆ ಸಚಿವರಾಗಿದ್ದಾಗ 500 ಯೂನಿಟ್ ವಿದ್ಯುತ್ ನೀಡುತ್ತೇವೆ ಅಂತಾ ಪೆನ್ನಿನಿಂದ ಬರೀಬೇಕಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ.
ಮತದಾರರು ಅಂದರೆ ಪ್ರಬುದ್ಧರು: ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಸಚ್ಚೀದಾನಂದ ಆಶೀರ್ವಾದ ಮಾಡಿ ಅಂತ ವಿನಂತಿಸುತ್ತೇನೆ. ಮತದಾರರು ಅಂದರೆ ಪ್ರಬುದ್ಧರು. ಪ್ರತಿಯೊಂದನ್ನು ಪ್ರಶ್ನಿಸುವ ಹಕ್ಕು ನಿಮಗೆ ಪ್ರಜಾಪ್ರಭುತ್ವ ಕೊಟ್ಟಿದೆ. ಮನೆಯನ್ನು ನಡೆಸುವವರು ಮಹಿಳೆಯರು. ಸಂಸದೆ, ನಟಿ ಆಗಿದ್ರೂ ನಿಮ್ಮ ಥರಾನೇ ಮಹಿಳೆ. ನಾನೂ ಒಬ್ಬರ ಪತ್ನಿ ಆಗಿದ್ದೆ, ಒಬ್ಬ ಮಗನ ತಾಯಿ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆ ಏನು, ತಾಯಿ ಬಿಟ್ಟು ಮಗಳು ಹೇಗೆ ಜೀವನಮಾಡುತ್ತಾರೆ ಅನ್ನೋದು ನನಗೆ ಗೊತ್ತಿದೆ ಎಂದರು.
ಇದನ್ನೂ ಓದಿ: ಮತ್ತೆ ಮುಸ್ಲಿಂ ಮೀಸಲಾತಿ ಬೇಕಾ?: ಉಡುಪಿಯಲ್ಲಿ ಅಮಿತ್ ಶಾ ಪ್ರಶ್ನೆ
ಇವರೇನು ಇವರಿಗೇನು ಗೊತ್ತಾಗುತ್ತೆ ಅನ್ನೋದು ಸುಳ್ಳು. ಅಂಬರೀಷ್ ನನಗೆ ಎಲ್ಲಾ ಕಲಿಸಿ ಕೊಟ್ಟು ಹೋಗಿದ್ದಾರೆ. ಕಷ್ಟ ಅಂತ ಬಂದವರಿಗೆ ಸಹಾಯ ಹೇಗೆ ಮಾಡಬೇಕು ಅನ್ನೋದು ಅವರಿಂದ ಕಲಿತಿದೀನಿ. ರಾಜಕಾರಣ ಮುಖ್ಯ ಅಲ್ಲ, ಜನರ ಸಂಬಂಧ ಹೇಗೆ ಉಳಿಸಿಕೊಂಡು, ಬೆಳಸಿಕೊಂಡು ಹೋಗಬೇಕು. ವೋಟ್ ಯಾರಿಗೆ ಹಾಕಬೇಕು, ಅನ್ನೋದಕ್ಕಿಂತ ಯಾರು ಸ್ಪಂದಿಸುತ್ತಾರೆ ಅನ್ನೊದು ಮುಖ್ಯ ಎಂದು ಹೇಳಿದರು.
ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷ ದಾಳಿ
ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದರು. ಈಗ ಸುಮಲತಾ ಬಗ್ಗೆ ನಾನು ಮಾತಾಡಲ್ಲ ಅನ್ನೋದು ತಂತ್ರ. ಇದು ಚುನಾವಣಗೆಗಾಗಿ ಮಾತ್ರ. ಮೇ 10 ಮುಗಿದ ನಂತ್ರ ಅವರ ರೂಪ ನೋಡ್ತೀರ. ಬರೆದಿಟ್ಟುಕೊಳ್ಳಿ, ಇದು ಚುನಾವಣೆಗೋಸ್ಕರ ಮಾತ್ರ ಮಾತಾಡಲ್ಲ ಅಂದಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಜೀವನ ಸುಧಾರಿಸಲಿದೆ: ಪ್ರಿಯಾಂಕಾ ಗಾಂಧಿ
ಪ್ರಧಾನಿ ಮೋದಿ ಸರ್ಕಾರ ವಿಶ್ವದಲ್ಲೆ ಗಮನ ಸೆಳೆದಿದೆ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ ಮಾತನಾಡಿ, ಜನಸಭೆಗಾಗಿ ಮೊದಲ ಬಾರಿಗೆ ಇಲ್ಲಿ ಬಂದಿದ್ದೇನೆ. ಈ ಭೂಮಿ, ನಾಲ್ವಡಿ ಕೃಷ್ಣರಾಜ ಗೌಡ, ಮೈಸೂರು ಮಹಾರಾಜ, ಉರಿಗೌಡ ನಂಜೇಗೌಡರ ಪುಣ್ಯ ಭೂಮಿ ಹಾಗೂ ಅಂಬರೀಶ್ ರವರ ಭೂಮಿ ಆಗಿದೆ. 2018 ರಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ನಂತರ ಯಡಿಯೂರಪ್ಪ ಕೆಲವು ದಿನಗಳಕಾಲ ಮುಖ್ಯಮಂತ್ರಿ ಆಗಿದ್ರು, ನಂತರ ಕುಮಾರಸ್ವಾಮಿ ಮಖ್ಯಮಂತ್ರಿ ಆದರು. ಸ್ಪಷ್ಟ ಬಹುಮತ ಸಿಗದ ಕಾರಣ ಸರಕಾರ ರಚನೆ ಆಗಿರಲಿಲ್ಲ ಎಂದರು.
ನೀವು ಬಿಜೆಪಿ ಸರಕಾರ ಆಡಳಿತ ನೋಡಿದ್ದೀರಿ. ಇಡೀ ವಿಶ್ವದಲ್ಲಿ ಬಿಜೆಪಿ ಸರಕಾರದ ಬಗ್ಗೆ ಮೋದಿಯವರ ಸರಕಾರದ ಬಗ್ಗೆ ಗಮನ ಹರಿದಿದೆ. ಈ ಹಿಂದೆ ಯುಪಿಎ ಸರಕಾರದ ಮೇಲೆ ಭ್ರಷ್ಟಾಚಾರ ಆರೋಪಗಳಿದ್ದವು. ಆದರೆ ಮೋದಿ ಸರಕಾರ ಒಂದೇ ಒಂದು ಭ್ರಷ್ಟಾಚಾರ ಕಪ್ಪುಚುಕ್ಕೆ ಇಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 pm, Sat, 29 April 23