ಕೂಡಲಸಂಗಮದಲ್ಲಿ ಬಸವ ಜಯಂತಿ; ಸಮಾಜದಲ್ಲಿ ಕತ್ತಲು ಕವಿದಿರುವಾಗ ಬಸವಣ್ಣ ಬೆಳಕಾಗಿ ಬಂದರು ಎಂದ ರಾಹುಲ್ ಗಾಂಧಿ

ಬಾಗಲಕೋಟೆಯ ಕೂಡಲಸಂಗಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದ್ದಾರೆ. ಅರ್ಚಕರಿಂದ ಹಣೆಗೆ ವಿಭೂತಿ, ಕೊರಳಲ್ಲಿ ಮಾಲೆ ಧರಿಸಿ ಸಂಗಮನಾಥನಿಗೆ ನಮಸ್ಕರಿಸಿದ್ದಾರೆ.

ಕೂಡಲಸಂಗಮದಲ್ಲಿ ಬಸವ ಜಯಂತಿ; ಸಮಾಜದಲ್ಲಿ ಕತ್ತಲು ಕವಿದಿರುವಾಗ ಬಸವಣ್ಣ ಬೆಳಕಾಗಿ ಬಂದರು ಎಂದ ರಾಹುಲ್ ಗಾಂಧಿ
ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ
Follow us
ಆಯೇಷಾ ಬಾನು
|

Updated on:Apr 23, 2023 | 2:52 PM

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು ಕೂಡಲಸಂಗಮದಲ್ಲಿ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದ್ದಾರೆ. ಅರ್ಚಕರಿಂದ ಹಣೆಗೆ ವಿಭೂತಿ, ಕೊರಳಲ್ಲಿ ಮಾಲೆ ಧರಿಸಿ ಸಂಗಮನಾಥನಿಗೆ ನಮಸ್ಕರಿಸಿದ್ದಾರೆ. ಬಸವಣ್ಣನವರ ಐಕ್ಯಮಂಟಪಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ಕೂಡಲ ಸಂಗಮದ ಬಸವ ವೇದಿಕೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ವೇಣುಗೋಪಾಲ್, ಸಿದ್ದರಾಮ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಅಥಣಿ ಗಚ್ಚಿನ ಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಡಾ. ಸಿದ್ದರಾಮ ಸ್ವಾಮೀಜಿ ಭಾಷಣ ಮಾಡುತ್ತ ರಾಹುಲ್ ಗಾಂಧಿಯನ್ನ ಯುವಕರ ಕಣ್ಮಣಿ ಎಂದು ಹೊಗಳಿದರು. ಧರ್ಮಗುರು ಬಸವಣ್ಣ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಬಸವಣ್ಣನವರ ಜೀವನ, ಸಾಧನೆ ಬಗ್ಗೆ ಮಾತನಾಡೋದು ಹೆಮ್ಮೆಯ ಸಂಗತಿ. ಕೂಡಲಸಂಗಮ ನಮ್ಮೆಲ್ಲರ ಶ್ರದ್ಧಾ ಕೇಂದ್ರವಾಗಿದೆ ಎಂದು ಡಾ. ಸಿದ್ದರಾಮ ಸ್ವಾಮೀಜಿ ಅವರು ರಾಹುಲ್ ಗಾಂಧಿಗೆ ತಿಳಿಯಬೇಕು ಎಂದು ಹಿಂದಿಯಲ್ಲಿ ಭಾಷಣ ಮಾಡಿದರು. ಕೂಡಲಸಂಗಮಕ್ಕೆ ಭೇಟಿ ನೀಡಿದ್ರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ. ಮೂಢನಂಬಿಕೆ, ಕಂದಾಚಾರ ದೂರ ಮಾಡಲು ಬಹಳ ದೊಡ್ಡ ಹೆಜ್ಜೆ ಬಸವಣ್ಣ ಇಟ್ಟಿದ್ದರು. ವಚನಗಳು ಲಿಂಗಾಯತ ಧರ್ಮದ ಸಂವಿಧಾನ ಎಂದು ನಂಬಲಾಗುತ್ತೆ. ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ, ಧಾರ್ಮಿಕ ಸ್ಥಾನಮಾನ ಕಲ್ಪಿಸಿಕೊಟ್ಟವರು ಬಸವಣ್ಣನವರು. ಇವರು ವಿನಯವಂತಿಕೆಯಿಂದ ಬಹಳ ದೊಡ್ಡ ನಾಯಕರಾಗಿ ಬೆಳೆದರು. ಲಿಂಗಾಯತ ಧರ್ಮ, ಸಮುದಾಯ, ಸಂಪ್ರದಾಯ ಇರುವವರೆಗೂ ಬಸವಣ್ಣನವರ ಆದರ್ಶಗಳಿರುತ್ತೆ. ನೀವು ನಮ್ಮ ಜನ ನಾಯಕ, ಒಬ್ಬ ಜನ ನಾಯಕರ ಜಯಂತಿಗೆ ದೂರದಿಂದ ಬಂದಿದ್ದಕ್ಕೆ ಧನ್ಯವಾದ ಎಂದು ಸಿದ್ದರಾಮ ಸ್ವಾಮೀಜಿ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಸತ್ಯ ಹೇಳಿದ್ದಕ್ಕೆ ನಾನು ಯಾವುದೇ ಬೆಲೆ ತೆರಲು ಸಿದ್ಧ: ಬಂಗಲೆ ಖಾಲಿ ಮಾಡಿ ಕೀ ಹಸ್ತಾಂತರಿಸಿದ ರಾಹುಲ್ ಗಾಂಧಿ

ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ

ಇನ್ನು ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಕೂಡಲಸಂಗಮಕ್ಕೆ ಬಂದಿರುವುದಕ್ಕೆ ನನಗೆ ಬಹಳ ಸಂತಸವಾಗಿದೆ. ಸಂಸತ್​ ಭವನಕ್ಕೆ ಬಸವಣ್ಣನವರ ಅನುಭವ ಮಂಟಪವೇ ಮಾದರಿ. ಬಸವಣ್ಣನವರ ಬಗ್ಗೆ ಸಿದ್ದರಾಮ ಸ್ವಾಮೀಜಿ ಚೆನ್ನಾಗಿ ಮಾತನಾಡಿದರು. ಬಸವಣ್ಣ ಇಡೀ ಜೀವನದಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದರು. ಬಹಳಷ್ಟು ಜನರಿಗೆ ಸತ್ಯ ಗೊತ್ತಾಗುತ್ತೆ, ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ. ಬಸವಣ್ಣನವರು ಎಂದೂ ಹಿಂಜರಿಯಲಿಲ್ಲ, ಸತ್ಯಕ್ಕಾಗಿ ಮುನ್ನಡೆದರು. ಸಿದ್ದರಾಮ ಸ್ವಾಮೀಜಿ ಮಾತು ಕೇಳಿ ನನಗೆ ಅತೀವ ಸಂತಸವಾಯಿತು. ಎಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿರಿ ಎಂದರು.

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದಿದ್ದು ಬಸವಣ್ಣ. ಸಮಾಜದಲ್ಲಿ ಕತ್ತಲು ಕವಿದಿರುವಾಗ ಬಸವಣ್ಣ ಬೆಳಕಾಗಿ ಬಂದರು. ಬಸವಣ್ಣನವರು 8ನೇ ವಯಸ್ಸಿನಲ್ಲೇ ಉಪನಯನ ನಿರಾಕರಿಸಿದರು. 8ನೇ ವಯಸ್ಸಿನಲ್ಲೇ ಇಂಥಾ ವಿಚಾರ ಹೇಗೆ ಬಂತೆಂದು ಶ್ರೀಗಳನ್ನು ಕೇಳಿದೆ. ಬಸವಣ್ಣನವರು ತಮ್ಮ ಗೆಳೆಯರ ಪರಿಸ್ಥಿತಿ ನೋಡಿ ತಿಳಿದುಕೊಂಡ್ರು. ಬಸವಣ್ಣನವರ ಬಗ್ಗೆ ಪುಸ್ತಕ ಓದಿದ್ದೇನೆ ಮತ್ತು ತಿಳಿದುಕೊಂಡಿದ್ದೇನೆ ಎಂದು ರಾಹುಲ್ ಗಾಂಧಿ ಬಸವಣ್ಣನವರ ಕುರಿತು ಮಾತನಾಡಿದ್ರು.

ದಾಸೋಹ ಭವನದಲ್ಲಿ ಸಾಮೂಹಿಕ ಪ್ರಸಾದ ಸೇವಿಸಿದ ರಾಹುಲ್ ಗಾಂಧಿ

ದಾಸೋಹ ಭವನದಲ್ಲಿ ರಾಹುಲ್ ಗಾಂಧಿ ಸಾಮೂಹಿಕ ಪ್ರಸಾದ ಸೇವನೆ ಮಾಡಿದರು. ರಾಹುಲ್ ಗಾಂಧಿ ಜೊತೆಗೆ ಸುಮಾರು 200 ಜನರಿಗೆ ಅವಕಾಶ ನೀಡಲಾಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ, ಎಂ. ಬಿ. ಪಾಟೀಲ್ ಸೇರಿದಂತೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ನಾಯಕರು ದಾಸೋಹ ಭವನದಲ್ಲಿ ಅನ್ನ, ಸಾರು ಪಾಯಸಾ ಬದನೆಕಾಯಿ ಪಲ್ಯ ಸೇರಿದಂತೆ ರಾಹುಲ್ ಗಾಂಧಿ ಜೊತೆ ಪ್ರಸಾದ ಸೇವಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:52 pm, Sun, 23 April 23