ರೆಸಾರ್ಟ್ ರಾಜಕಾರಣ ಮುಗಿದಿದೆ, ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಮಲಗುವುದಕ್ಕೂ ಬಿಟ್ಟಿಲ್ಲ ಎಂದ ಡಿಕೆಶಿವಕುಮಾರ್
ನಾನು ಪಕ್ಷಕ್ಕೆ ಶ್ರಮ ಪಟ್ಟಿದ್ದೀನಿ, ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಮಲಗುವುದಕ್ಕೂ ಬಿಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ‘ನಾನು ಪಕ್ಷಕ್ಕೆ ಶ್ರಮ ಪಟ್ಟಿದ್ದೀನಿ, ರೆಸಾರ್ಟ್ ರಾಜಕಾರಣ ಮುಗಿದಿದೆ. ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಮಲಗುವುದಕ್ಕೂ ಬಿಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ದಿನೇಶ್ ಗುಂಡೂರಾವ್(Dinesh Gundu Rao) ಆಗಲ್ಲವೆಂದು ಬಿಟ್ಟಾಗ ನನಗೆ ಜವಾಬ್ದಾರಿ ಕೊಟ್ಟರು. ನೈತಿಕ ಹೊಣೆ ಹೊತ್ತು ಎಲ್ಲರೂ ರಾಜೀನಾಮೆ ಕೊಟ್ಟಿದ್ರು, ಆಗ ನನಗೆ ಸೋನಿಯ ಗಾಂಧಿಯವರು ಜವಾಬ್ದಾರಿ ಕೊಟ್ಟರು. ಈಗ ಹಿರಿಯರು ಕಿರಿಯರು ಎಲ್ಲರೂ ನಮಗೆ ಈಗ ಸಹಕಾರ ಕೊಡ್ತಾರೆ, ಉತ್ತಮವಾದ ಸರ್ಕಾರ ಕೊಡ್ತೀವಿ ಎಂದರು.
ಎಕ್ಸಿಟ್ ಪೋಲ್ ಸರ್ವೇ ಕುರಿತು ಮಾತನಾಡಿದ ಅವರು ‘ ಈ ಬಗ್ಗೆ ನಂಬಿಕೆ ಇಲ್ಲ, ನನ್ನ ನಂಬಿಕೆ 141 ಸೀಟು, ಎಕ್ಸಿಟ್ ಪೋಲ್ ಸ್ಯಾಂಪಲ್ ಸಂಖ್ಯೆ ಕಡಿಮೆ ಇದ್ದು, ನಮ್ಮ ಸ್ಯಾಂಪಲ್ ಸಂಖ್ಯೆ ಜಾಸ್ತಿ ಇದೆ. ಇನ್ನೂ ಹೆಚ್ಚಿನ ಸಂಖ್ಯೆ ಬರಲಿದ್ದು, ನಿಚ್ಚಳವಾದ ಬಹುಮತ ಕಾಂಗ್ರೆಸ್ಗೆ ಬರುತ್ತದೆ. ಇದು ನನ್ನ ಅಚಲವಾದ ನಂಬಿಕೆ. ಬಿಜೆಪಿಯವರು ಎಷ್ಟೇ ದುಡ್ಡು ಸುರಿದಿರಬಹುದು. ಬಿಜೆಪಿಯ ಎಷ್ಟೇ ದೊಡ್ಡ ನಾಯಕರು ಬಂದು ಪ್ರಚಾರ ಮಾಡಿರಬಹುದು. ಆದರೆ, ‘ಬ್ಯಾಲೇಟ್ ಈಸ್ ಸ್ಟ್ರಾಂಗರ್ ದೇನ್ ಬುಲೆಟ್’ ಯಾವ ರೀತಿ ಆಡಳಿತ ದುರುಪಯೋಗ ಮಾಡಿಕೊಂಡರು ಎನ್ನೋದು ದೊಡ್ಡ ಕಥೆ ಎಂದರು.
ಇದನ್ನೂ ಓದಿ:ಮೈಸೂರು: ಚುನಾವಣೆ ಗೆಲುವು ಸೋಲಿನ ಮೇಲೆ ಛಾಪಾಕಾಗದದಲ್ಲಿ 5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್
ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಹೇಳ್ತಾ ಇದ್ದೇನೆ, ಬಂದು ನನ್ನ ಸೇರಿಕೊಳ್ಳಿ
ಹೌದು ತೆರೆಯೂ ಇಲ್ಲ, ಮರೆಯೂ ಇಲ್ಲ. ಎಚ್ಡಿಕೆ ಏನು ಹೇಳ್ತಾರೆ ಮಾಡ್ತಾರೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಎಚ್ಡಿಕೆ ಮಾತು ಗೊತ್ತಿಲ್ಲ. ಕುಮಾರಣ್ಣನ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು ಮಾತಾಡ್ತಾರೆ. ನಾನಂತೂ ಈಗಲೇ ರಿಟೈರ್ ಆಗುವವನಲ್ಲ. ನನ್ನ ಕೊನೆ ಉಸಿರು ಇರುವ ತನಕ ಫೈಟ್ ಮಾಡುವವನು, ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಹೇಳ್ತಾ ಇದ್ದೇನೆ, ಬಂದು ನನ್ನ ಸೇರಿಕೊಳ್ಳಿ ಎಂದಿದ್ದಾರೆ. ಇದೇ ವೇಳೆ ಕಪ್ ನಮ್ಮದೇ ಎಂಬ ಆರ್ ಅಶೋಕ್ ಹೇಳಿಕೆ ವಿಚಾರ ‘ಎಷ್ಟೇ ನಂಬರ್ ಬಂದರೂ ಸರ್ಕಾರ ಮಾಡ್ತೀವಿ ಅಂತಿದ್ದಾರಲ್ಲ. ಕಪ್ ಅಶೋಕ್ ಅವರೇ ಇಟ್ಟುಕೊಳ್ಳಲಿ. ಎಲ್ಲ ಪಕ್ಷದವರು ಅವರವರ ಶಾಸಕರನ್ನು ಹಿಡಿದಿಟ್ಟುಕೊಳ್ತಾರೆ. ಯಾವ ಅಧಿಕಾರ ಹಂಚಿಕೆಯ ಮಾತೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ ಹೇಳಿದಂತೆ ನಾವು ಕೇಳ್ತೀವಿ ಎಂದು ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ