Sakaleshpur Election Results 2023: ಸಕಲೇಶಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಎಚ್.ಕೆ. ಕುಮಾರಸ್ವಾಮಿಗೆ ಸೋಲುಣಿಸಿದ ಬಿಜೆಪಿ
Sakaleshpur Assembly Election Result 2023 Live Counting Updates: ಹಾಸನ ಜಿಲ್ಲೆಯ ಮಲೆನಾಡಿನ ಭಾಗದಲ್ಲಿರುವ ಸಕಲೇಶಪುರದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಮುರಳಿ ಮೋಹನ್ ಮತ್ತು ಬಿಜೆಪಿಯಿಂದ ಎಸ್ ಮಂಜುನಾಥ್ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದ ಮತ ಎಣಿಕೆಯ ವಿವರ ಇಲ್ಲಿದೆ.
Sakaleshpur Assembly Election Result 2023: 1.93 ಲಕ್ಷ ಮತದಾರರು ಇರುವ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕ ವಿಧಾನಸಭೆಗೆ 2023 ಮೇ 10ಕ್ಕೆ ಚುನಾವಣೆ ನಡೆದಿತ್ತು. ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಎಸ್ಸಿ ಮೀಸಲು ಇರುವ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್ ಮಂಜುನಾಥ್ ರೋಚಕ ಜಯ ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಚ್.ಕೆ. ಕುಮಾರಸ್ವಾಮಿ ಅವರ ಸತತ ಗೆಲುವಿನ ಓಟಕ್ಕೆ ಸಿಮೆಂಟ್ ಮಂಜು ಬ್ರೇಕ್ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 3ನೇ ಸ್ಥಾನ ಗಳಿಸಿದರೂ ಶೇ. 25ಕ್ಕೂ ಹೆಚ್ಚು ಮತ ಗಳಿಸಿ ತ್ರಿಕೋನ ಫೈಟ್ ಪ್ರದರ್ಶನವಾಗುವಂತೆ ಮಾಡಿದ್ದಾರೆ.
ಸಕಲೇಶಪುರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಣದಲ್ಲಿದ್ದ ಪ್ರಮುಖರು:
- ಜೆಡಿಎಸ್: ಎಚ್.ಕೆ. ಕುಮಾರಸ್ವಾಮಿ
- ಬಿಜೆಪಿ: ಎಸ್ ಮಂಜುನಾಥ (ಗೆಲುವು)
- ಕಾಂಗ್ರೆಸ್: ಮುರಳಿ ಮೋಹನ್
2018ರಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸಿಕ್ಕ ಗೆಲುವಿನ ಅಂತರ 5 ಸಾವಿರಕ್ಕಿಂತಲೂ ಕಡಿಮೆ. ನಾರ್ವೆ ಸೋಮಶೇಖರ್ ಬಿಜೆಪಿ ಟಿಕೆಟ್ ಪಡೆದು ಕುಮಾರಸ್ವಾಮಿಗೆ ತೀವ್ರ ಪೈಪೋಟಿ ನೀಡಿದ್ದರು. ಈ ಬಾರಿ ಮಂಜುನಾಥ್ ಎಂಬುವವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಎಚ್.ಕೆ. ಕುಮಾರಸ್ವಾಮಿ ಅವರ ಗೆಲುವಿನ ಓಟ ಹೀಗೇ ಮುಂದುವರಿಯುತ್ತದಾ ಎಂಬುದನ್ನು ನೋಡಲು ಫಲಿತಾಂಶ ಪ್ರಕಟವಾಗುವವರೆಗೂ ಕಾಯಬೇಕು.
ಇನ್ನು, ಹಾಸನದಲ್ಲಿ ಹೆಚ್ಡಿ ದೇವೇಗೌಡ, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡರಂತಹ ದಿಗ್ಗಜರ ಸಮ್ಮುಖದಲ್ಲಿ ಬಿಜೆಪಿಯಲ್ಲಿ ಪ್ರಬಲ ಮುಖಂಡ ಆಗಿದ್ದವರು ಬಿಬಿ ಶಿವಪ್ಪ. ಹಾಸನದಲ್ಲಿ ಕೇಸರಿ ಬಾವುಟ ಹಾರಿಸಿದ ಮೊದಲಿಗರಲ್ಲಿ ಶಿವಪ್ಪ ಸೇರುತ್ತಾರೆ. 1994 ಮತ್ತು 1999ರ ಚುನಾವಣೆಯಲ್ಲಿ ಬಿಬಿ ಶಿವಪ್ಪ ಬಿಜೆಪಿ ಟಿಕೆಟ್ನಲ್ಲಿ ಸಕಲೇಶಪುರದಲ್ಲಿ ಗೆಲುವು ಕಂಡಿದ್ದರು. ಅದಾದ ಬಳಿಕ ಬಿಜೆಪಿಗೆ ಇಲ್ಲಿ ಗೆಲುವು ಸಿಕ್ಕಿರಲಿಲ್ಲ. ಈಗ ಕಮಲ ಇಲ್ಲಿ ಮತ್ತೆ ಅರಳಿದೆ.
Published On - 4:28 pm, Thu, 4 May 23