ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಬೆನ್ನಲ್ಲೇ ಬಿಜೆಪಿ ಸೇರ್ಪಡೆ ಆದ ಮಾಜಿ ಶಾಸಕ ಬಸವರಾಜನ್ ದಂಪತಿ
ಸೌಭಾಗ್ಯ ಬಸವರಾಜನ್ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಬೆನ್ನಲ್ಲೇ ಮಾಜಿ ಶಾಸಕ ಬಸವರಾಜನ್, ಪತ್ನಿ ಸೌಭಾಗ್ಯ ಬಿಜೆಪಿ ಸೇರ್ಪಡೆ ಆಗಿದ್ದಾರೆ.

ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ. ಕೋಟೆನಾಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ರಂಗೇರುತ್ತಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ತಮ್ಮ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಆದರೆ ಸದ್ಯ ಸೌಭಾಗ್ಯ ಬಸವರಾಜನ್ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಬೆನ್ನಲ್ಲೇ ಮಾಜಿ ಶಾಸಕ ಬಸವರಾಜನ್, ಪತ್ನಿ ಸೌಭಾಗ್ಯ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಚಿತ್ರದುರ್ಗ ನಗರದ ಕಮ್ಮರೆಡ್ಡಿ ಸಮುದಾಯ ಭವನ ಪ್ರಚಾರ ಸಭೆಯಲ್ಲಿ ಗುರುವಾರ ಬಸವರಾಜನ್ ದಂಪತಿ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ G.H.ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.
ಇತ್ತ ನಿವೃತ್ತಿ ವಿಚಾರ ತಿಳಿಯುತ್ತಿದ್ದಂತೆ ಸೌಭಾಗ್ಯ ಬಸವರಾಜನ್ ಅವರ ಮನೆ ಬಳಿ ಹೈಡ್ರಾಮಾವೇ ನಡೆದಿದ್ದು, ಬೆಂಬಲಿಗರ ಕಣ್ಣೀರು ಹಾಕಿದ್ದರು. ಒಂದು ಸೌಭಾಗ್ಯ ಬಸವರಾಜನ್ ಚುನಾವಣಾ ಕಣದಿಂದ ಹಿಂದೆ ಸರಿದರೆ, ಬೆಂಬಲಿಗರ ಗತಿಯೇನು ಎಂದು ಮಾಜಿ ಶಾಸಕ ಎಸ್ಕೆ ಬಸವರಾಜನ್ಗೆ ಪ್ರಶ್ನಿಸಿದ್ದರು.
ಇದನ್ನೂ ಓದಿ: Mandya: ಬಜರಂಗದಳ ನಿಷೇಧ ವಿಚಾರ: ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಬಜರಂಗದಳ ಕಾರ್ಯಕರ್ತರು
ಇದೆಲ್ಲದರ ಮಧ್ಯೆ ಸೌಭಾಗ್ಯ ಬಸವರಾಜನ್ ಅವರ ಮನೆಗೆ ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ಭೇಟಿ ನೀಡಿದ್ದರು. ಈ ಹಿನ್ನೆಲೆ ಇಂದು ಸಂಜೆ ಸೌಭಾಗ್ಯ ಬಸವರಾಜನ್ ಅವರು ಬಿಜೆಪಿ ಸೇರ್ಪಡೆ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಕಣದಿಂದ ನಿವೃತ್ತಿ ಪಡೆದು ಬಿಜೆಪಿ ಸೇರ್ಪಡೆ ವಿಚಾರ ಸದ್ಯ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದರು.
ವಿಧಾನಸಭೆ ಚುನಾವಣೆಗೆ ಆರು ದಿನಗಳು ಬಾಕಿ ಉಳಿದಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಅದರಂತೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ವಿರುದ್ಧ ಇದೀಗ ಜಾತಿ ಹೆಸರು ಬಳಸಿ ಭಾಷಣ ಮಾಡಿದ ಹಿನ್ನಲೆ ಚುನಾವಣಾಧಿಕಾರಿಯಿಂದ ದೂರು ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕಿಳಿದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ಗೆ ಕಪ್ಪು ಬಾವುಟ ಪ್ರದರ್ಶಿಸಿದ ಎಂಇಎಸ್
ಏಪ್ರಿಲ್ 26ರಂದು ತೆಂಗಿನ ಗೌರಸಮುದ್ರದಲ್ಲಿ ಭಾಷಣ ಮಾಡಿದ್ದ ಎಸ್.ತಿಪ್ಪೇಸ್ವಾಮಿ, ಜಾತಿಯ ಹೆಸರು ಬಳಸಿ ಭಾಷಣ ಮಾಡಿದ್ದ ಆರೋಪದ ಮೇಲೆ, ಚುನಾವಣಾಧಿಕಾರಿ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮಾಹಿತಿ ಕಲೆಹಾಕಿ ದೂರು ದಾಖಲಿಸಿರುವ ಚುನಾವಣಾಧಿಕಾರಿ
ಏಪ್ರಿಲ್ 26ರಂದು ತೆಂಗಿನ ಗೌರಸಮುದ್ರದಲ್ಲಿ ಭಾಷಣ ಮಾಡಿದ್ದ ತಿಪ್ಪೇಸ್ವಾಮಿ ‘ನಾನು ಮ್ಯಾಸನಾಯಕ, ಕಾಂಗ್ರೆಸ್ ಅಭ್ಯರ್ಥಿ ಊರ ನಾಯಕ, ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ತಿಪ್ಪೇಸ್ವಾಮಿ ಭಾಷಣ ಮಾಡಿದ್ದರು. ಇದರ ಮಾಹಿತಿ ಕಲೆ ಹಾಕಿದ್ದ ಚುನಾವಣಾಧಿಕಾರಿ ಫ್ಲೈಯಿಂಗ್ ಸ್ಕ್ವಾಡ್ ತಿಪ್ಪೇಸ್ವಾಮಿ ವಿರುದ್ಧ ಇದೀಗ ದೂರು ದಾಖಲಿಸಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Thu, 4 May 23




