ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ: ಸೋಮಶೇಖರ್​ ರೆಡ್ಡಿ

ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಪೋಟರ್​ಗಳು ಮತ್ತು ಕೆಲ ನಾಯಕರು ಬಿಜೆಪಿ ಬಿಟ್ಟು ಹೋಗುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸೋಮಶೇಖರ್​ ರೆಡ್ಡಿ ಆರೋಪ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ: ಸೋಮಶೇಖರ್​ ರೆಡ್ಡಿ
ಸೋಮಶೇಖರ್​ ರೆಡ್ಡಿ
Follow us
ವಿವೇಕ ಬಿರಾದಾರ
|

Updated on: May 08, 2023 | 1:36 PM

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಬಳ್ಳಾರಿಯಲ್ಲಿ (Bellary) ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಪೋಟರ್​ಗಳು ಮತ್ತು ಕೆಲ ನಾಯಕರು ಬಿಜೆಪಿ (BJP) ಬಿಟ್ಟು ಹೋಗುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸೋಮಶೇಖರ್​ ರೆಡ್ಡಿ (Somashekar Reddy) ಆರೋಪ ಮಾಡಿದ್ದಾರೆ. ಸೋಮಶೇಖರ್ ರೆಡ್ಡಿ ಹೊಂದಾಣಿಕೆ ರಾಜಕೀಯ ಮಾಡೋದಿಲ್ಲ. ಬಿಜೆಪಿ ನನಗೆ ರಾಜಕೀಯ ‌ಜನ್ಮ ನೀಡಿದ ತಾಯಿ. ಪಕ್ಷಕ್ಕೆ ದ್ರೋಹ ಬಗೆಯುವ‌ ಕೆಲಸ ಮಾಡುವುದಿಲ್ಲ ಎನ್ನುವ ಮೂಲಕ ಕೆಆರ್​ಪಿಪಿ ಪಕ್ಷದ ಜೊತೆಗೆ ಸೋಮಶೇಖರ ರೆಡ್ಡಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಉಸ್ತುವಾರಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎನ್ನುವವರು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅನುದಾನ ಕೊಟ್ಟಿರೋದಕ್ಕೆ ಮಾಡಿರೋದಲ್ವಾ…? ಹೆಲಿಕಾಪ್ಟರ್​ನಲ್ಲಿ ಹಾರೋರು ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವೇ..? ಎಂದು ಜನಾರ್ದನ ರೆಡ್ಡಿ ಮತ್ತು ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಲಿಂಗಾಯತ ವೇದಿಕೆ ಎನ್ನುವುದು ಒಂದು ಕಾಲ್ಪನಿಕ ಸಂಘಟನೆ: ಸಿಎಂ ಬೊಮ್ಮಾಯಿ

ನಾನು ಸತ್ತ ಮೇಲೆ ಬಿಜೆಪಿ ಬಾವುಟವನ್ನು ನನ್ನ ದೇಹದ ಮೇಲೆ ಹಾಕಿ ಸುಟ್ಟು ಬಿಡಿ ಎಂದು ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಹಣ ಇದ್ದವರು, ಅಬ್ಬರದ ಪ್ರಚಾರ ಮಾಡುತ್ತಾರೆ ನಾನು ನನ್ನ ದಾರಿಯಲ್ಲಿ ಪ್ರಚಾರ ಮಾಡುತ್ತೇನೆ. ಜನಾರ್ದನ ರೆಡ್ಡಿ ಎಲ್ಲರನ್ನೂ ಹೆದರಿಸುತ್ತಿದ್ದಾರೆ. ಕಾರ್ಪೋರೇಟರ್​ಗಳಿಗೆ ಹೆದರಿಸುತ್ತಿದ್ದಾರೆ. ಹಣ ಕೊಡುತ್ತಿದ್ದಾರೆ. ಇಲ್ಲವಾದರೇ ಅವರ ಆಸ್ತಿ ಕಸಿದುಕೊಳ್ಳುವ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಕಟ್ಟಾಳು ದಿವಾಕರ ಬಾಬುರನ್ನು ಜನಾರ್ದನ ರೆಡ್ಡಿ ಜೈಲಿಗೆ ಹಾಕಿಸಿದರು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ