Lingayat: ಹುಬ್ಬಳ್ಳಿಯಲ್ಲಿ ಬಿಜೆಪಿ ಪರ ಲಿಂಗಾಯತ ಮುಖಂಡರ ಜೊತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿರುಸಿನ ಪ್ರಚಾರ

ಲಿಂಗಾಯತ ಮುಖಂಡರು ತಮ್ಮ ಪರ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ ಜಗದೀಶ್ ಶೆಟ್ಟರ್ ಗೆ ತಿರುಗೇಟು ನೀಡುವ ನಿಟ್ಟಿನಲ್ಲಿಯೇ ಪ್ರಲ್ಹಾದ್ ಜೋಶಿ ಇಂದು ಸಂಕೇಶ್ವರ್ ಜೊತೆ ಸೇರಿ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ರು.

Lingayat: ಹುಬ್ಬಳ್ಳಿಯಲ್ಲಿ ಬಿಜೆಪಿ ಪರ ಲಿಂಗಾಯತ ಮುಖಂಡರ ಜೊತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿರುಸಿನ ಪ್ರಚಾರ
ಹುಬ್ಬಳ್ಳಿಯಲ್ಲಿ ಬಿಜೆಪಿ ಪರ ಲಿಂಗಾಯತ ಮುಖಂಡರ ಜೊತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿರುಸಿನ ಪ್ರಚಾರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 08, 2023 | 3:01 PM

ಹುಬ್ಬಳ್ಳಿ: ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ (Karnataka Assembly Elections 2023) ನಾಳಿದ್ದು ನಡೆಯಲಿದೆ. ಹಾಗಾಗಿ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ತವರು ಹುಬ್ಬಳ್ಳಿ ಧಾರವಾಡದಲ್ಲಿ ಹೆಚ್ಚಿನ ಪ್ರಚಾರ ನಡೆಸಿದರು. ಈ ವೇಳೆ ಲಿಂಗಾಯತ (Lingayat) ಮುಖಂಡರು ಜೋಶಿ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.‌ ಉದ್ಯಮಿ ಹಾಗೂ ಸಮುದಾಯದ ಪ್ರಭಾವಿ ನಾಯಕ ವಿಜಯ್ ಸಂಕೇಶ್ವರ್ ಅವರು ಪ್ರಲ್ಹಾದ್ ಜೋಶಿ ಅವರ ಜೊತೆ ಇಂದು ಪ್ರಚಾರದಲ್ಲಿ ತೊಡಗಿದ್ರು.

ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ (Hubli) ಬಿಜೆಪಿ ಅಭ್ಯರ್ಥಿ ಕ್ರಾಂತಿ ಕಿರಣ್ ಪರ ಜೋಶಿ ಹಾಗೂ ವಿಜಯ್ ಸಂಕೇಶ್ವರ್ ಮತಯಾಚಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆಯ ಮೂಲಕವೇ ಮೆರವಣಿಗೆ ನಡೆಸಿದ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ವಿಜಯ್ ಸಂಕೇಶ್ವರ್ ಬಿಜೆಪಿ ಅಭ್ಯರ್ಥಿಗಳ ಪರ ಜನರಲ್ಲಿ ಮತ ಯಾಚಿಸಿದರು.

ಲಿಂಗಾಯತ ಮುಖಂಡರು ತಮ್ಮ ಪರ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ ಜಗದೀಶ್ ಶೆಟ್ಟರ್ ಗೆ ತಿರುಗೇಟು ನೀಡುವ ನಿಟ್ಟಿನಲ್ಲಿಯೇ ಪ್ರಲ್ಹಾದ್ ಜೋಶಿ ಇಂದು ಸಂಕೇಶ್ವರ್ ಜೊತೆ ಸೇರಿ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ರು. ಪ್ರಚಾರ ಆರಂಭಕ್ಕೂ ಮೊದಲು ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಂಕೇಶ್ವರ್, ಬಜರಂಗಬಲಿಗೆ ಜೈಕಾರ ಹಾಕುವ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

Also Read:  ಹುಬ್ಬಳ್ಳಿ ಸೆಂಟ್ರಲ್ ನಲ್ಲಿ ಬಿಜೆಪಿ ಗೆಲುವಿಗೆ ರಣತಂತ್ರ – ಲಿಂಗಾಯತರ ಮತ ಕೈ ತಪ್ಪದಂತೆ ನೋಡಿಕೊಳ್ಳಲು ಸಂಕೇಶ್ವರ್ ಸಹಕಾರ ಕೋರಿದ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು ಗೆಲುವು ಯಾರ ಮಡಿಲಿಗೆ ಎಂಬ ಕುತೂಹಲ ಎಲ್ಲರಲ್ಲಿದೆ. ಲಿಂಗಾಯತರು ಮತಗಳ ಜೊತೆ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳನ್ನ ಶೆಟ್ಟರ್ ನಂಬಿಕೊಂಡಿದ್ರೆ, ಬಿಜೆಪಿ ಸಾಂಪ್ರದಾಯಿಕ ಮತಗಳು ಪಕ್ಷ ಬಿಟ್ಟು ಎಲ್ಲೂ ಹೋಗುವುದಿಲ್ಲ. ಲಿಂಗಾಯತ ಮತಗಳು ಕೂಡ ಬಿಜೆಪಿಯ ಮತ ಬ್ಯಾಂಕ್ ನಲ್ಲಿ ಪ್ರಮಖವಾಗಿದ್ದು, ಲಿಂಗಾಯತರು ಬಿಜೆಪಿ ಪರ ನಿಲ್ಲಲಿದ್ದಾರೆ ಎಂಬ ವಿಶ್ವಾಸವನ್ನ ಪ್ರಲ್ಹಾದ ಜೋಶಿ ಹಾಗೂ ವಿಜಯ ಸಂಕೇಶ್ವರ್ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:38 pm, Mon, 8 May 23