Karnataka Assembly Election 2023: ವಾರದೊಳಗೆ ಬಿಜೆಪಿಯ ರಾಜ್ಯ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಡಾ.ಕೆ.ಸುಧಾಕರ್

ಬಿಜೆಪಿಯ ರಾಜ್ಯ ಚುನಾವಣಾ ಪ್ರಣಾಳಿಕೆ ವಾರದೊಳಗೆ ಬಿಡುಗಡೆಯಾಗುತ್ತದೆ ಎಂದು ಆರೋಗ್ಯ ಸಚಿವ, ರಾಜ್ಯ ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Karnataka Assembly Election 2023: ವಾರದೊಳಗೆ ಬಿಜೆಪಿಯ ರಾಜ್ಯ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಡಾ.ಕೆ.ಸುಧಾಕರ್
ಡಾ. ಕೆ ಸುಧಾಕರ್​
Follow us
ವಿವೇಕ ಬಿರಾದಾರ
|

Updated on:Apr 10, 2023 | 1:54 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Election 2023) ಮತದಾನಕ್ಕೆ ಒಂದು ತಿಂಗಳು ಬಾಕಿ ಇದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳು ಕ್ಷೇತ್ರಗಳಲ್ಲಿ ಭಾಗಶಃ ಪ್ರಚಾರವನ್ನು ಮುಗಿಸಿವೆ. ಪ್ರಚಾರದ ವೇಳೆ ರಾಜ್ಯದ ಜನತೆಗೆ ಕಾಂಗ್ರೆಸ್​ (Congress) ಮತ್ತು ಜೆಡಿಎಸ್ (JDS)​ ಭರವಸೆಗಳನ್ನು ನೀಡಿದ್ದು, ಅಧಿಕಾರಕ್ಕೆ ಬಂದ ಮೇಲೆ ಈಡೇರಿಸುವುದಾಗಿ ವಚನ ನೀಡಿವೆ. ಆದರೆ ಬಿಜೆಪಿ (BJP) ಮಾತ್ರ ಯಾವುದೇ ಆಶ್ವಾಸನೆಗಳನ್ನು ನೀಡದೆ ತಟಸ್ಥವಾಗಿತ್ತು. ಅತ್ತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗುತ್ತಿದ್ದರೇ, ಇತ್ತ ರಾಜ್ಯ ಚುನಾವಣಾ ಪ್ರಣಾಳಿಕೆ (Manifesto) ಸಿದ್ದವಾಗುತ್ತಿದೆ. ಇನ್ನು ಬಿಜೆಪಿಯ ರಾಜ್ಯ ಚುನಾವಣಾ ಪ್ರಣಾಳಿಕೆ ವಾರದೊಳಗೆ ಬಿಡುಗಡೆಯಾಗುತ್ತದೆ ಎಂದು ಆರೋಗ್ಯ ಸಚಿವ, ರಾಜ್ಯ ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ.ಕೆ.ಸುಧಾಕರ್ (K Sudhakar) ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಣಾಳಿಕೆ ಸಂಬಂಧ ವಿಭಾಗ, ಜಿಲ್ಲೆ, ತಾಲೂಕುವಾರು ಸಭೆಗಳು ಆಗಿವೆ. ರಾಜ್ಯ ಹಾಗೂ ದೇಶಕ್ಕೆ ನಮ್ಮ ಪ್ರಣಾಳಿಕೆ ಮಾದರಿಯಾಗಲಿದೆ. ಹೊಸತನ, ಬದುಕು ಕಟ್ಟಿಕೊಡುವ ರೀತಿ ಪ್ರಣಾಳಿಕೆ ಇರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಈ ಬಾರಿ ತಮ್ಮ ಪುತ್ರರಿಗೆ ಟಿಕೆಟ್ ಕೇಳಿದ ಬಿಜೆಪಿ ನಾಯಕರು ಯಾರ‍್ಯಾರು? ಇಲ್ಲಿದೆ ಪಟ್ಟಿ

ಅಂಗೈಯಲ್ಲಿ ಚಂದ್ರ ತೋರಿಸುವ ಕೆಲಸ ಅಂತೂ ಮಾಡಲ್ಲ. ನಮ್ಮ ಆರ್ಥಿಕ ಪರಿಸ್ಥಿತಿ, ಶಕ್ತಿ ತೋರಿಸಲಿದೆ. ರಾಮ ರಾಜ್ಯದ ಅಡಿಯಲ್ಲಿ ಪರಿಕಲ್ಪನೆಗೆ ಪೂರಕ ಇರಲಿದೆ. ಗ್ರೇಟರ್ ಬೆಂಗಳೂರು, ಕಿತ್ತೂರು, ಕಲ್ಯಾಣ ಕರ್ನಾಟಕ, ಬಯಲು ಸೀಮೆ ಹೀಗೆ ವಲಯವಾರು ಪ್ರಣಾಳಿಕೆ ಮಾಡಲಿದ್ದೇವೆ ಎಂದು ಸೂಚನೆ ನೀಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:54 pm, Mon, 10 April 23