ಬಿಜೆಪಿ, ಕಾಂಗ್ರೆಸ್, ಜೆಡಿಎಸ್
ಕರ್ನಾಕಟ ವಿಧಾನಸಭೆ ಚುನಾವಣೆಯತ್ತ (Karnataka Assembly Election 2023) ದೇಶದ ಚಿತ್ತ ನೆಟ್ಟಿದೆ. ಈ ಬಾರಿಯ ಚುನಾವಣೆ ಬಹಳಷ್ಟು ರೋಚಕತೆಯಿಂದ ಕೂಡಿದ್ದು, ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುತ್ತೆ ಕಾದು ನೋಡಬೇಕಾಗಿದೆ. ಪ್ರಬಲ ಮೂರು ಪಕ್ಷಗಳ ಮದ್ಯೆ ಜಾಟಾಪಟಿ ಏರ್ಪಟ್ಟಿದೆ. ಬುಧವಾರ ಮೇ.10 ರಂದು ಮತದಾನ ನಡೆದಿದೆ. ಶನಿವಾರ ಮೇ.13ರಂದು ಮತ ಎಣಿಕೆ ನಡೆಯಲಿದ್ದು, ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಇನ್ನು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಬಲದಿಂದ ಅಥವಾ ಪಕ್ಷದ ವರ್ಚಸ್ಸಿನಿಂದ ಗೆದ್ದು ಬರುತ್ತಾರೆ. ಹೀಗೆ ಕಳೆದ ಎರಡು ಚುನಾವಣೆಗಳಲ್ಲಿ ಅತಿ ಕಡಿಮೆ ಮತಗಳ ಅಂತರಿಂದ ಗೆದ್ದು ಬೀಗಿದ ಮತ್ತು ಸೋತು ಸುಣ್ಣಾದ ಅಭ್ಯರ್ಥಿಗಳ ಯಾರು ಅಂತ ತಿಳಿಯೋಣ. ಅದರಲ್ಲೂ ಯಾವ ಅಭ್ಯರ್ಥಿ 5 ಸಾವಿರ ಮತಗಳ ಅಂತರದಿಂದ ವಿಜಯಶಾಲಿಗಳಾಗಿದ್ದಾರೆ ಮತ್ತು ಪರಭಾವಗೊಂಡಿದ್ದಾರೆ ಎಂಬುವುದರ ಕುರಿತಾದ ಅಂಕಿ ಅಂಶ ಇಲ್ಲಿದೆ.
ಇದನ್ನೂ ಓದಿ: ಕಳೆದ ಚುನಾವಣೆಗಳಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು
2018 ರ ವಿಧಾನಸಭಾ ಚುನಾವಣೆ
- ಅಥಣಿ ವಿಧಾಸಭಾ ಕ್ಷೇತ್ರ: 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಗ ಮಹೇಶ್ ಕುಮಟಳ್ಳಿ ಅವರು 2,331 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಲಕ್ಷ್ಮಣ ಸವದಿ ಅವರ ಎದರು ಗೆಲವು ಸಾಧಿಸಿದ್ದರು.
- ಯಮಕನಮರಡಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು 2,850 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಷ್ಟಗಿ ಮಾರುತಿ ಮಲ್ಲಪ್ಪ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.
- ಖಾನಾಪುರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು 5,133 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿಠಲ್ ಹಾಲಗೇರ್ ವಿರುದ್ಧ ಜಯಬೇರಿ ಭಾರಿಸಿದ್ದರು
- ರಾಮದುರ್ಗ ವಿಧಾಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಮಹದೇವಪ್ಪ ಯಾದವಾಡ ಅವರು 2,875 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಹದೇವಪ್ಪ ಪಟ್ಟಣ ಅವರ ವಿರುದ್ಧ ಜಯಘೋಷ ಮೊಳಗಿಸಿದ್ದರು.
- ಜಮಖಂಡಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರು 2,795 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರ ವಿರುದ್ಧ ಗೆದ್ದಿದ್ದರು.
- ಬೀಳಗಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಮುರುಗೇಶ್ ನೀರಾಣಿ ಅವರು 4,811 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ ಪಾಟೀಲ್ ಅವರ ವಿರುದ್ಧ ಗೆಲವು ಸಾಧಿಸಿದ್ದರು.
- ಬದಾಮಿ ವಿಧಾಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು 1,696 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ವಿರುದ್ಧ ಗೆದ್ದಿದ್ದರು.
- ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಮನಗೌಡ ಬಿ ಪಾಟೀಲ್ 3,353 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಬೀಮನಗೌಡ ಬಿ ಪಾಟೀಲ್ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.
- ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರು 3,186 ಮತಗಳ ಅಂತರದಿಂದ ಜಿಡಿಎಸ್ ಅಭ್ಯರ್ಥಿ ಸೋಮನಗೌಡ ಬಿ ಪಾಟೀಲ್ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.
- ಚಿತ್ತಾಪುರ ವಿಧಾಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪಿಯಾಂಕ್ ಖರ್ಗೆ ಅವರು 4,393 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಾಲ್ಮಿಕಿ ನಾಯಕ್ ಅವರ ವಿರುದ್ಧ ಜಯಶಾಲಿಯಾಗಿದ್ದರು.
- ಆಳಂದ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರು 697 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಪಾಟೀಲ್ ಅವರ ವಿರುದ್ಧ ಗೆಲವು ಸಾಧಿಸಿದ್ದರು.
- ಸಿಂಧನೂರು ವಿಧಾನಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಅವರು 1,597 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾದರ್ಲಿ ಹಂಪನಗೌಡ ಅವರ ವಿರುದ್ಧ ಜಯಘೋಷ ಮೊಳಗಿಸಿದ್ದರು.
- ಮಸ್ಕಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು 213 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರ ವಿರುದ್ಧ ಗೆದ್ದಿದ್ದರು.
- ಗದಗ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ ಪಾಟೀಲ್ ಅವರು 1,868 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರ ವಿರುದ್ಧ ಜಯಗಳಿಸಿದ್ದರು.
- ಕುಂದಗೋಳ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿಯವರು 634 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಎಸ್.ಐ ಚಿಕ್ಕನಗೌಡರ ಅವರ ವಿರುದ್ಧ ಗೆದ್ದಿದ್ದರು.
- ಯಲ್ಲಾಪುರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಅವರು 1,483 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಂಡಲಗಿ ವೀರಭದ್ರಗೌಡ ಶಿವಾನಂದಗೌಡ ಪಾಟೀಲ್ ಅವರ ವಿರುದ್ಧ ಜಯಗಳಿಸಿದ್ದರು.
- ಹಿರೇಕೇರೂರು ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿಸಿ ಪಾಟೀಲ್ ಅವರು 555 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಯು.ಬಿ ಬಣಕಾರ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.
- ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಬಿ ನಾಗೇಂದ್ರ ಅವರು 2,679 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಣ್ಣ ಪಕೀರಪ್ಪ ಅವರ ವಿರುದ್ಧ ಜಯಗಳಿಸಿದ್ದರು.
- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಸ್.ಎ ರವೀಂದ್ರನಾಥ್ ಅವರು 4,071 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್ಎಸ್ ಮಲ್ಲಿಕಾರ್ಜುನ್ ಅವರ ವಿರುದ್ಧ ಗೆದ್ದಿದ್ದರು.
- ಹೊನ್ನಾಳಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಂ.ಪಿ ರೇಣುಕಾಚಾರ್ಯ ಅವರು 4,233 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡ ಅವರ ವಿರುದ್ಧ ಜಯಘೋಷ ಮೊಳಗಿಸಿದ್ದರು.
- ವಿಜಯನಗರ ವಿಧಾನಸಭಾಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಎಮ್. ಕೃಷ್ಣಪ್ಪ ಅವರು 2,775 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹೆಚ್. ರವೀಂದ್ರ ಅವರ ವಿರುದ್ಧ ಗೆದ್ದಿದ್ದರು.
- ಜಯನಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿಎನ್ ಪ್ರಹ್ಲಾದ್ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.
- ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಅವರು 1,779 ಮತಗಳ ಅಂತರಿಂದ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರ ವಿರುದ್ಧ ಗೆದ್ದಿದ್ದರು.
- ಹಾನೂರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಆರ್. ನರೇಂದ್ರ ಅವರು 3,513 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಡಾ. ಪ್ರೀತನ್ ನಾಗಪ್ಪ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.