ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆ 2024 ಫಲಿತಾಂಶ: ಅಂತಿಮ ಹಂತದಲ್ಲಿ ಬದಲಾದ ಭವಿಷ್ಯ, 4ನೇ ಬಾರಿ ಗೆದ್ದು ಬೀಗಿದ ಪಿಸಿ ಮೋಹನ್

|

Updated on: Jun 04, 2024 | 2:36 PM

Bengaluru Central Lok Sabha Election Results 2024 Live Counting Updates: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ರೂಪುಗೊಂಡಾಗಿನಿಂದಲೂ ಇಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಾ ಬಂದಿದೆ. ವಿಶೇಷವೆಂದರೆ ಪಿ.ಸಿ. ಮೋಹನ್ ಅವರು ಸತತ ಗೆಲುವು ಸಾಧಿಸಿದ್ದು ಈ ಬಾರಿಯೂ ಗೆದ್ದು ಬೀಗಿದ್ದಾರೆ. ಇದು ಅವರ ನಾಲ್ಕನೇ ಗೆಲುವು.

ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆ 2024 ಫಲಿತಾಂಶ: ಅಂತಿಮ ಹಂತದಲ್ಲಿ ಬದಲಾದ ಭವಿಷ್ಯ, 4ನೇ ಬಾರಿ ಗೆದ್ದು ಬೀಗಿದ ಪಿಸಿ ಮೋಹನ್
ಮನ್ಸೂರ್ ಅಲಿ ಖಾನ್, ಪಿಸಿ ಮೋಹನ್
Follow us on

ಬೆಂಗಳೂರು, ಜೂನ್.04: ಏಪ್ರಿಲ್ 26 ರಂದು ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನ ಪ್ರಕ್ರಿಯೆ ವೇಳೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾನ ನಡೆದಿತ್ತು. ಇಂದು ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಮತ್ತು ಕಾಂಗ್ರೆಸ್​ನಿಂದ ಮನ್ಸೂರ್ ಅಲಿ ಖಾನ್ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಸತತ ನಾಲ್ಕನೇ ಬಾರಿಗೆ ಪಿಸಿ ಮೋಹನ್ ಜಯಭೇರಿ ಬಾರಿಸಿದ್ದಾರೆ.

1,2ನೇ ಸುತ್ತಿನಲ್ಲಿ ಮುನ್ನಡೆಯಲ್ಲಿದ್ದ ಪಿ.ಸಿ.ಮೋಹನ್ ನಂತರದ ಸುತ್ತಿನಲ್ಲಿ ಹಿನ್ನೆಡೆಯಾಗಿದ್ದರು. ಇನ್ನೇನು ಮನ್ಸೂರ್ ಅಲಿ ಖಾನ್ ಗೆಲುವು ಪಕ್ಕಾ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದರು. ಪಿಸಿ ಮೋಹನ್ ಕೂಡ ನಿರಾಸೆಯಿಂದ ಮತ ಎಣಿಕೆ ಕೇಂದ್ರದಿಂದ ಹೊರ ನಡೆದಿದ್ದರು. ಆದರೆ ಅಂತಿಮ ಹಂತದಲ್ಲಿ ಭಾರಿ ಬದಲಾವಣೆಯಾಗಿದೆ. 75 ಸಾವಿರಕ್ಕೂ ಹೆಚ್ಚು ಮತಗಳ ಹಿನ್ನಡೆಯಲ್ಲಿದ್ದ ಪಿ.ಸಿ. ಮೋಹನ್ ಅವರಿಗೆ ಮಹದೇವಪುರ, ಸಿ.ವಿ.ರಾಮನ್ ನಗರ, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ 13 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಸಿಕ್ಕಿದೆ. ಈ ಮೂಲಕ 35 ರಿಂದ‌ 40 ಸಾವಿರ ಲೀಡ್ ನಿಂದ ಪಿ.ಸಿ. ಮೋಹನ್ ಗೆಲುವು ಸಾಧಿಸಿದ್ದಾರೆ.

ಏಪ್ರಿಲ್ 26 ರಂದು ಈ ಲೋಕಸಭಾ ಕ್ಷೇತ್ರಕ್ಕೆ 54.06 ರಷ್ಟು ಮತದಾನ ನಡೆದಿತ್ತು. ಒಂದೂವರೆ ದಶಕಗಳ ಇತಿಹಾಸ ಹೊಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಕ್ಷೇತ್ರದಲ್ಲಿ ಆರಂಭದಿಂದಲೂ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಮಾತ್ರವಲ್ಲದೇ, ಒಬ್ಬರೇ ಸಂಸದರಾಗಿ ಮುಂದುವರೆದಿರುವುದು ವಿಶೇಷ.

ಈ ಕ್ಷೇತ್ರವನ್ನು 2008 ರಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಿಂದ ವಿಂಗಡಿಸಿ ರಚಿಸಲಾಯಿತು. ಮೊದಲ ಚುನಾವಣೆಯಿಂದಲೂ ಬಿಜೆಪಿ ನಾಯಕ ಪಿಸಿ ಮೋಹನ್ ಆಯ್ಕೆಯಾಗುತ್ತಾ ಬಂದಿದ್ದು ಈ ಬಾರಿಯೂ ತಮ್ಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡಲ್ಲ ಎಂದು ಹೇಳಲಾಗುತ್ತಿದೆ. ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಪಿಸಿ ಮೋಹನ್ 70,968 ಮತಗಳ ಅಂತರದಿಂದ ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ವಿರುದ್ಧ ಗೆಲುವು ಸಾಧಿಸಿದ್ದರು. ಸದ್ಯ ಈ ಬಾರಿ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಮನ್ಸೂರ್ ಅಲಿ ಖಾನ್ ಸ್ಪರ್ಧಿಸಿದ್ದು ಪಿ.ಸಿ.ಮೋಹನ್ ಮತ್ತೊಮ್ಮೆ ಗೆದ್ದು 4ನೇ ಬಾರಿ ಸಂಸದರಾಗಿದ್ದಾರೆ.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:38 am, Tue, 4 June 24