ಬೆಂಗಳೂರು, ಜೂನ್ 1: ಲೋಕಸಭೆ ಚುನಾವಣೆಯ (Lok Sabha Elections) ಕೊನೆಯ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮತಗಟ್ಟೆ ಸಮೀಕ್ಷೆಗಳು (Exit Poll) ಪ್ರಕಟವಾಗುತ್ತಿವೆ. ಲೋಕಸಭೆಗೆ ಏಳು ಹಂತಗಳಲ್ಲಿ ನಡೆದ ಮತದಾನ ಇಂದು ಕೊನೆಗೊಂಡಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ, ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ (TV9 Polstrat Exit Poll Survey Report) ಪ್ರಕಟಗೊಂಡಿದ್ದು, ಆಡಳಿತಾರೂಢ ಎನ್ಡಿಗೆ ಸಿಹಿ ಸುದ್ದಿ ನೀಡಿದೆ. ಬಿಜೆಪಿ ಸರಳ ಬಹುಮತ ಪಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಲ್ಪ ಸ್ಥಾನಗಳಿಗೆ ತೃಪ್ತಿಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಬಿಜೆಪಿಯ ಓಟ ಮುಂದುವರಿದಿದೆ. ಆದಾಗ್ಯೂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳಲ್ಲಿ 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಸ್ಥಾನಗಳು ತುಸು ಕಡಿಮೆಯಾಗಿವೆ. ಮತ್ತೊಂದೆಡೆ, ದಕ್ಷಿಣ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟ ಸಾಧನೆ ತೋರಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣಗಳಲ್ಲಿ ‘ಇಂಡಿಯಾ’ ಸಾಧನೆ ಉತ್ತಮವಾಗಿದೆ.
ಆದಾಗ್ಯೂ, ದಕ್ಷಿಣದ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯುವ ಸಾಧ್ಯತೆ ಇರುವುದು ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯಲ್ಲಿ ದೃಢಪಟ್ಟಿದೆ.
ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 305 ಸ್ಥಾನ ಗಳಿಸಲಿದೆ. ಎನ್ಡಿಎ ಮೈತ್ರಿಕೂಟಕ್ಕೆ ಒಟ್ಟು 340 ಸ್ಥಾನ ದೊರೆಯಲಿವೆ. ಮತ್ತೊಂದೆಡೆ, ಕಾಂಗ್ರೆಸ್ ಈ ಬಾರಿ ತುಸು ಬಲ ವೃದ್ಧಿಸಿಕೊಂಡಿದೆ. ಪಕ್ಷಕ್ಕೆ 65 ಸ್ಥಾನ ದೊರೆಯಲಿದ್ದು, ‘ಇಂಡಿಯಾ’ ಮೈತ್ರಿಕೂಟಕ್ಕೆ 167 ಸ್ಥಾನ ದೊರೆಯಲಿದೆ. ಇತರರು 36 ಸ್ಥಾನ ಗಳಿಸಲಿದ್ದಾರೆ.
ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಗುಜರಾತ್, ಮಧ್ಯ ಪ್ರದೇಶ, ಛತ್ತೀಸ್ಗಢ, ಉತ್ತರಾಖಂಡ ಹಾಗೂ ದೆಹಲಿಗಳಲ್ಲಿ ಬಿಜೆಪಿ ಕ್ಲೀನ್ಸ್ವೀಪ್ ಸಾಧನೆ ಮಾಡಿದೆ.
ರಾಜ್ಯ | ಒಟ್ಟು ಸ್ಥಾನ | ಬಿಜೆಪಿ | ಎನ್ಡಿಎ | ಕಾಂಗ್ರೆಸ್ | ಇಂಡಿಯಾ | ಇತರರು |
ಗುಜರಾತ್ | 26 | 26 | 26 | 0 | 0 | 0 |
ಮಧ್ಯಪ್ರದೇಶ | 29 | 29 | 29 | 0 | 0 | 0 |
ಛತ್ತೀಸ್ಗಢ | 11 | 11 | 11 | 0 | 0 | 0 |
ಉತ್ತರಾಖಂಡ | 5 | 5 | 5 | 0 | 0 | 0 |
ದೆಹಲಿ | 7 | 7 | 7 | 0 | 0 | 0 |
ಹರಿಯಾಣ | 10 | 8 | 8 | 2 | 2 | 0 |
ಉತ್ತರ ಪ್ರದೇಶ | 80 | 62 | 66 | 3 | 14 | 0 |
ರಾಜಸ್ಥಾನ | 25 | 19 | 19 | 4 | 5 | 1 |
ಜಾರ್ಖಂಡ್ | 14 | 12 | 12 | 0 | 1 | 1 |
ಅಸ್ಸಾಂ | 14 | 11 | 12 | 1 | 1 | 1 |
ಹಿಮಾಚಲ ಪ್ರದೇಶ | 4 | 4 | 4 | 0 | 0 | 0 |
ಮಹಾರಾಷ್ಟ್ರ | 48 | 18 | 22 | 5 | 25 | 1 |
ಕರ್ನಾಟಕ | 28 | 18 | 20 | 8 | 8 | 0 |
ಪಶ್ಚಿಮ ಬಂಗಾಳ | 42 | 21 | 21 | 0 | ||
ತೆಲಂಗಾಣ | 17 | 7 | 7 | 8 | 8 | 2 |
ಬಿಹಾರ | 40 | 17 | 29 | 2 | 8 | 3 |
ಕೇರಳ | 20 | 1 | 1 | 13 | 19 | 0 |
ತಮಿಳುನಾಡು | 39 | 2 | 4 | 9 | 35 | 0 |
ಪಂಜಾಬ್ | 13 | 3 | 3 | 5 | 8 | 2 |
ಆಂಧ್ರಪ್ರದೇಶ | 25 | 2 | 12 | 0 | 0 | 13 |
ಒಡಿಶಾ | 21 | 13 | 13 | 1 | 1 | 7 |
ಗೋವಾ | 2 | 2 | 2 | 0 | 0 | 0 |
ಕೇಂದ್ರಾಡಳಿತ ಪ್ರದೇಶಗಳು | 7 | 4 | 4 | 2 | 2 | 1 |
ಜಮ್ಮು ಮತ್ತು ಕಾಶ್ಮೀರ | 5 | 2 | 2 | 0 | 2 | 1 |
ಈಶಾನ್ಯ ಮತ್ತು ಇತರೆ | 11 | 7 | 7 | 2 | 2 | 2 |
ಒಟ್ಟು ಸ್ಥಾನಗಳು | 543 | 311 | 346 | 65 | 162 | 35 |
ಇದನ್ನೂ ಓದಿ: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sat, 1 June 24