ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಏಪ್ರಿಲ್ 3: ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು (Five Guarantees) ಯಶಸ್ವಿಯಾದ ಹಿನ್ನೆಲೆಯಲ್ಲಿ ಅದೇ ರೀತಿಯ ಸೂತ್ರವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಮೋದಿ ಸಾಮ್ರಾಜ್ಯವನ್ನು ಕೆಡವಲು ಮುಂದಾಗಿದೆ. ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಈ ಐದು ನ್ಯಾಯಗಳ ಜೊತೆ 25 ಭರವಸೆಗಳನ್ನು ಕೊಟ್ಟಿದೆ. ಇಂದು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಕಾತಿಯಾವಾಡದ ಉಸ್ಮಾನ್ಪುರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಘರ್ ಘರ್ ಗ್ಯಾರಂಟಿ’ (Ghar Ghar Guarantee) ಯೋಜನೆ ಅನಾವರಣಗೊಳಿಸಿದ್ದಾರೆ. ಐದು ನ್ಯಾಯ, ಇಪ್ಪತ್ತೈದು ಗ್ಯಾರಂಟಿಗಳಿರುವ ಕರಪತ್ರಗಳನ್ನು ಹಂಚಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲ್ಲಲು ಹೊರಟಿರುವ ಎನ್ಡಿಎ ಪ್ರಯತ್ನಕ್ಕೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೂಲಕ ತೊಡರುಗಾಲು ಹಾಕಲು ಯಶಸ್ವಿಯಾಗುತ್ತದಾ ಕಾದುನೋಡಬೇಕು.
ಕಾಂಗ್ರೆಸ್ ಐದು ನ್ಯಾಯಗಳು
- ಯುವ ನ್ಯಾಯ
- ನಾರಿ ನ್ಯಾಯ
- ಕಿಸಾನ್ ನ್ಯಾಯ
- ಶ್ರಮಿಕ್ ನ್ಯಾಯ
- ಸಮಾನತೆ ನ್ಯಾಯ
ಇದನ್ನೂ ಓದಿ: ಬಾಕ್ಸರ್ ವಿಜೇಂದರ್ ಸಿಂಗ್ ಬಿಜೆಪಿ ಸೇರ್ಪಡೆ; ಮಥುರಾದಲ್ಲಿ ಹೇಮಮಾಲಿನಿ ಬದಲು ಅವರಿಗೆ ಟಿಕೆಟ್ ಸಾಧ್ಯತೆ
ಲೋಕಸಭಾ ಚುನಾವಣೆ: ಕಾಂಗ್ರೆಸ್ನ ಯುವ ನ್ಯಾಯ
- ಮೊದಲ ಉದ್ಯೋಗ ಖಾತ್ರಿ: ಓದಿದ ಯುವಕ, ಯುವತಿಯರಿಗೆ ವರ್ಷಕ್ಕೆ ಒಂದು ಲಕ್ಷ ರೂ ಅಪ್ರೆಂಟಿಸ್ಶಿಪ್
- ನೇಮಕಾತಿ ಖಾತ್ರಿ: 30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ
- ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಹೊಸ ನೀತಿ ಮತ್ತು ಕಾನೂನು
- ಗುತ್ತಿಗೆ ಆಧಾರಿತ ಅಥವಾ ಅರೆಕಾಲಿಕ ಉದ್ಯೋಗಿಗಳ ರಕ್ಷಣೆ
- ಯುವ ರೋಷನಿ: ಯುವಸಮುದಾಯದವರಿಗೆ 5,000 ಕೋಟಿ ರೂಗಳ ಸ್ಟಾರ್ಟಪ್ ಫಂಡ್
ಲೋಕಸಭಾ ಚುನಾವಣೆ: ಕಾಂಗ್ರೆಸ್ನ ನಾರಿ ನ್ಯಾಯ
- ಮಹಾಲಕ್ಷ್ಮೀ: ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೂ ವರ್ಷಕ್ಕೆ 1 ಲಕ್ಷ ರೂ ಧನಸಹಾಯ
- ಕೇಂದ್ರ ಸರ್ಕಾರದ ಹೊಸ ಉದ್ಯೋಗ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ
- ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಹೆಚ್ಚಿನ ಸಂಬಳ
- ಅಧಿಕಾರ ಮೈತ್ರಿ: ಪ್ರತಿಯೊಂದು ಪಂಚಾಯಿತಿಯಲ್ಲೂ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಕಾನೂನು ಹಕ್ಕುಗಳ ಬಗ್ಗೆ ಮಾಹಿತಿ ಕೊಡುವ ಅಧಿಕಾರಸಖಿಗಳ ಲಭ್ಯತೆ
- ಸಾವಿತ್ರಿಬಾಯಿ ಫುಲೆ ಹಾಸ್ಟಲ್: ಉದ್ಯೋಗಸ್ಥ ಮಹಿಳೆಯರಿಗೆ ಈ ಹಾಸ್ಟಲ್ ಸಂಖ್ಯೆ ಎರಡು ಪಟ್ಟು ಹೆಚ್ಚಿಸಲಾಗುವುದು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಬಿಜೆಪಿಗೆ ಸೇರ್ಪಡೆ: ಸುಮಲತಾ
ಲೋಕಸಭಾ ಚುನಾವಣೆ: ಕಾಂಗ್ರೆಸ್ನ ರೈತ ನ್ಯಾಯ
- ನ್ಯಾಯ ಬೆಲೆ: ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಎಂಎಸ್ಪಿಗೆ ಕಾನೂನು ಗ್ಯಾರಂಟಿ ನೀಡಲಾಗುವುದು.
- ಸಾಲ ಮನ್ನಾ ಜಾರಿಗೊಳಿಸಲು ಖಾಯಂ ಆಯೋಗ ರಚನೆ
- ಬೆಳೆ ವಿಮೆ ಮಾಡಿಸಿದವರಿಗೆ ಬೆಳೆ ನಷ್ಟವಾದರೆ ಪರಿಹಾರ ಹಣವನ್ನು 30 ದಿನದೊಳಗೆ ನೇರವಾಗಿ ಖಾತೆಗೆ ಹಾಕಲಾಗುತ್ತದೆ.
- ಆಮದು ರಫ್ತು ನೀತಿ: ರೈತರ ಸಲಹೆ ಪಡೆದು ಹೊಸ ಆಮದು ಮತ್ತು ರಫ್ತು ನೀತಿ ರೂಪಿಸಲಾಗುವುದು.
- ಕೃಷಿಗಾರಿಕೆಯಲ್ಲಿ ಜಿಎಸ್ಟಿಯಿಂದ ಮುಕ್ತಗೊಳಿಸಲಾಗುವುದು. ಯಾವುದಕ್ಕೂ ತೆರಿಗೆ ಇರುವುದಿಲ್ಲ.
ಲೋಕಸಭಾ ಚುನಾವಣೆ: ಕಾಂಗ್ರೆಸ್ನ ಕಾರ್ಮಿಕ ನ್ಯಾಯ
- ಮನ್ರೇಗಾ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರಿಗೂ 400 ರೂ ದಿನಗೂಲಿ
- ಸರ್ವರಿಗೂ ಆರೋಗ್ಯ ಹಕ್ಕು: ಪ್ರತಿಯೊಬ್ಬರಿಗೂ 25 ಲಕ್ಷ ರೂ ಆರೋಗ್ಯ ವಿಮೆ: ಉಚಿತ ಚಿಕಿತ್ಸೆ, ಆಸ್ಪತ್ರೆ, ವೈದ್ಯ, ಔಷಧ, ಪರೀಕ್ಷೆ, ಸರ್ಜರಿ ಇತ್ಯಾದಿ ವೆಚ್ಚವನ್ನೂ ಭರಿಸಲಾಗುತ್ತದೆ.
- ನಗರ ಉದ್ಯೋಗ ಗ್ಯಾರಂಟಿ: ಮನ್ರೇಗಾದಂತಹ ಹೊಸ ಯೋಜನೆಗಳನ್ನು ನಗರಗಳಲ್ಲೂ ತರಲಾಗುವುದು.
- ಸಾಮಾಜಿಕ ಭದ್ರತೆ: ಅಸಂಘಟಿತ ವಲಯದ ಕಾರ್ಮಿಕರಿಗೆ ಲೈಫ್ ಇನ್ಷೂರೆನ್ಸ್ ಮತ್ತು ಆ್ಯಕ್ಸಿಡೆಂಟ್ ಇನ್ಷೂರೆನ್ಸ್.
- ಉದ್ಯೋಗ ಭದ್ರತೆ: ಮುಖ್ಯ ಸರ್ಕಾರಿ ಕಾರ್ಯಗಳಿಗೆ ಗುತ್ತಿಗೆ ಆಧಾರಿತ ವೇತನ ನಿಲ್ಲಿಸಲಾಗುವುದು.
ಇದನ್ನೂ ಓದಿ: ರಾಹುಲ್ ಗಾಂಧಿ ಇಂದು ವಯನಾಡಿನಲ್ಲಿ ನಾಮಪತ್ರ ಸಲ್ಲಿಕೆ
ಲೋಕಸಭಾ ಚುನಾವಣೆ: ಕಾಂಗ್ರೆಸ್ನ ಸಮಾನತೆ ನ್ಯಾಯ
- ಪ್ರತಿಯೊಂದು ವರ್ಗ, ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವಂತೆ ಮಾಡಲಾಗುವುದು.
- ಸಂವಿಧಾನಿಕ ತಿದ್ದುಪಡಿ ತರುವ ಮೂಲಕ ಶೇ. 50ರಷ್ಟಿರುವ ಮೀಸಲಾತಿ ಮಿತಿಯನ್ನು ತೆಗೆದು, ಎಸ್ಎಸ್ ಎಸ್ಟಿ ಒಬಿಸಿ ವರ್ಗದವರಿಗೆ ಸಂಪೂರ್ಣ ಮೀಸಲಾತಿ ಹಕ್ಕು ನೀಡಲಾಗುವುದು.
- ಎಸ್ಸಿ ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅವರಿಗೆ ಹೆಚ್ಚು ಪಾಲು.
- ಜಲ, ಅರಣ್ಯ ಮತ್ತು ಭೂಮಿಯ ಕಾನೂನು ಹಕ್ಕು: ಅರಣ್ಯ ಹಕ್ಕು ಕಾಯ್ದೆ ಅಡಿ ಒಂದು ವರ್ಷಕ್ಕೆ ಗುತ್ತಿಗೆಗಳನ್ನು ನೀಡಲು ನಿರ್ಧರಿಸಲಾಗುವುದು.
- ನಮ್ಮ ಭೂಮಿ ನಮ್ಮ ಆಡಳಿತ: ಪರಿಶಿಷ್ಟ ಪಂಗಡದವರ ಸಂಖ್ಯೆ ಹೆಚ್ಚಿರುವ ಕಡೆ PESA ಜಾರಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ