AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಕ್ಸಿಟ್ ಪೋಲ್ ಟಿವಿ ಚರ್ಚೆಗಳಲ್ಲಿ ನಮ್ಮ ಪಕ್ಷ ಭಾಗವಹಿಸುವುದಿಲ್ಲ: ಕಾಂಗ್ರೆಸ್

“ಊಹಾಪೋಹದ ಅರ್ಥವೇನು? ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ನಾವೇಕೆ ಅರ್ಥಹೀನ ಊಹಾಪೋಹಗಳಲ್ಲಿ ಭಾಗಿಯಾಗಬೇಕು? ಬೆಟ್ಟಿಂಗ್‌ನಲ್ಲಿ ಕೆಲವು ಶಕ್ತಿಗಳು ಭಾಗಿಯಾಗಿವೆ. ನಾವೇಕೆ ಅದರ ಭಾಗವಾಗಬೇಕು? ಯಾರಿಗೆ ಮತ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಜೂನ್ 4 ರಂದು ಪಕ್ಷಗಳು ಎಷ್ಟು ಮತಗಳನ್ನು ಪಡೆದಿವೆ ಎಂದು ತಿಳಿಯುತ್ತದೆ. ನಾವೇಕೆ ಊಹೆ ಮಾಡಬೇಕು? ಎಂದು ಪವನ್ ಖೇರಾ ಕೇಳಿದ್ದಾರೆ.

ಎಕ್ಸಿಟ್ ಪೋಲ್ ಟಿವಿ ಚರ್ಚೆಗಳಲ್ಲಿ ನಮ್ಮ ಪಕ್ಷ ಭಾಗವಹಿಸುವುದಿಲ್ಲ: ಕಾಂಗ್ರೆಸ್
ಪವನ್ ಖೇರಾ
ರಶ್ಮಿ ಕಲ್ಲಕಟ್ಟ
|

Updated on: May 31, 2024 | 8:50 PM

Share

ದೆಹಲಿ ಮೇ 31: ಜೂನ್ 1 ರಂದು ಟೆಲಿವಿಷನ್ ಚಾನೆಲ್‌ಗಳಲ್ಲಿ ಯಾವುದೇ ಎಕ್ಸಿಟ್ ಪೋಲ್ (Exit poll) ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ (Congress) ಶುಕ್ರವಾರ ಘೋಷಿಸಿದೆ. ಎಲ್ಲಾ ಚುನಾವಣೆಗಳು ಮುಗಿದ ಅರ್ಧ ಘಂಟೆಯ ನಂತರ ಶನಿವಾರ ಸಂಜೆ ಎಕ್ಸಿಟ್ ಪೋಲ್ ಭವಿಷ್ಯವಾಣಿಗಳು ಪ್ರಕಟಗೊಳ್ಳಲು ಪ್ರಾರಂಭಿಸುತ್ತವೆ. ಜೂನ್ 4 ರಂದು ನಿಜವಾದ ಫಲಿತಾಂಶ ಹೊರಬೀಳುವ ಮುನ್ನ ಊಹಾಪೋಹಗಳಿಗೆ ಒಳಗಾಗದಿರಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pawan Khera) ಹೇಳಿದ್ದಾರೆ.

ಮತದಾರರು ಮತ ಚಲಾಯಿಸಿದ್ದು, ತೀರ್ಪು ಖಚಿತವಾಗಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮೊದಲು, ಟಿಆರ್‌ಪಿಗಾಗಿ ಊಹಾಪೋಹದಲ್ಲಿ ಪಾಲ್ಗೊಳ್ಳಲು ನಮಗೆ ಇಷ್ಟವಿಲ್ಲ. ಎಕ್ಸಿಟ್ ಪೋಲ್ ಕುರಿತ ಚರ್ಚೆಗಳಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದು ಆಗಿರಬೇಕು. ನಾವು ಜೂನ್ 4 ರಿಂದ ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ” ಎಂದು ಪವನ್ ಖೇರಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪವನ್ ಖೇರಾ ಎಕ್ಸ್ ಪೋಸ್ಟ್

“ಊಹಾಪೋಹದ ಅರ್ಥವೇನು? ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ನಾವೇಕೆ ಅರ್ಥಹೀನ ಊಹಾಪೋಹಗಳಲ್ಲಿ ಭಾಗಿಯಾಗಬೇಕು? ಬೆಟ್ಟಿಂಗ್‌ನಲ್ಲಿ ಕೆಲವು ಶಕ್ತಿಗಳು ಭಾಗಿಯಾಗಿವೆ. ನಾವೇಕೆ ಅದರ ಭಾಗವಾಗಬೇಕು? ಯಾರಿಗೆ ಮತ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಜೂನ್ 4 ರಂದು ಪಕ್ಷಗಳು ಎಷ್ಟು ಮತಗಳನ್ನು ಪಡೆದಿವೆ ಎಂದು ತಿಳಿಯುತ್ತದೆ. ನಾವೇಕೆ ಊಹೆ ಮಾಡಬೇಕು?.. ಈ ಚುನಾವಣೆಯಲ್ಲಿ ನಾವು ಗೆಲ್ಲಲು ಸಜ್ಜಾಗಿದ್ದೇವೆ. ಇಂಡಿಯಾ ಮೈತ್ರಿಕೂಟವು ಜೂನ್ 4 ರ ನಂತರ ಸರ್ಕಾರವನ್ನು ರಚಿಸಲಿದೆ ಎಂದು ಎಎನ್‌ಐ ಜೊತೆ ಮಾತನಾಡಿದ ಪವನ್ ಖೇರಾ ಹೇಳಿದ್ದಾರೆ.

ಮತದಾನದ ನಂತರ ಮತದಾರರು ಏನು ಹೇಳುತ್ತಾರೆ ಎಂಬುದರ ಆಧಾರದ ಮೇಲೆ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿಯುತ್ತವೆ. ಚುನಾವಣಾ ಆಯೋಗವು ಶನಿವಾರ ಸಂಜೆ 6.30 ರವರೆಗೆ ನಿರ್ಬಂಧವನ್ನು ಹೊಂದಿದ್ದು ನಂತರ ಎಕ್ಸಿಟ್ ಪೋಲ್ ಭವಿಷ್ಯವನ್ನು ಪ್ರಕಟಿಸಬಹುದು.

ಭಾರತದಲ್ಲಿ ಎಕ್ಸಿಟ್ ಪೋಲ್‌ಗಳು 1957 ರಲ್ಲಿ ಪ್ರಾರಂಭವಾಯಿತು. ಏಜೆನ್ಸಿಗಳು, ಪೋಲ್‌ಸ್ಟರ್‌ಗಳು, ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಸಿದ್ಧಪಡಿಸುತ್ತಾರೆ. ವರ್ಷಗಳಿಂದೀಚೆಗೆ ಎಕ್ಸಿಟ್ ಪೋಲ್‌ಗಳು ಮತ ಎಣಿಕೆಯ ದಿನದ ಮೊದಲು ಬಹುನಿರೀಕ್ಷಿತ ಘಟನೆಯಾಗಿ ಮಾರ್ಪಟ್ಟಿವೆ. ಟೆಲಿವಿಷನ್ ಚಾನೆಲ್‌ಗಳು ಎಕ್ಸಿಟ್ ಪೋಲ್ ಕುರಿತು ಚರ್ಚೆಗಳನ್ನು ನಡೆಸುತ್ತವೆ, ಅಲ್ಲಿ ರಾಜಕೀಯ ಪಕ್ಷಗಳಿಂದ ಪ್ರತಿನಿಧಿಸಲ್ಪಟ್ಟ ವಕ್ತಾರರು ಎಕ್ಸಿಟ್ ಪೋಲ್ ಡೇಟಾದ ಬಗ್ಗೆ ಚರ್ಚಿಸುತ್ತಾರೆ. ಈ ಬಾರಿ ಎಕ್ಸಿಟ್ ಪೋಲ್ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿದೆ.

ಎಕ್ಸಿಟ್ ಪೋಲ್‌ಗಳು ಹಿಟ್ ಮತ್ತು ಮಿಸ್ ಆಗಿರುವ ಎರಡೂ ನಿದರ್ಶನಗಳು ಭಾರತದ ಚುನಾವಣಾ ಇತಿಹಾಸದಲ್ಲಿ ಸಾಕಷ್ಟು ಇವೆ. 2019ರಲ್ಲಿ, ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ ಸುಮಾರು 285 ಸ್ಥಾನಗಳನ್ನು ಭವಿಷ್ಯ ನುಡಿದಿದ್ದವು. ಆದರೆ ಎನ್‌ಡಿಎ 353 ಸ್ಥಾನಗಳನ್ನು ಗೆದ್ದಿತ್ತು. 2024 ರ ಎಕ್ಸಿಟ್ ಪೋಲ್‌ಗಳು 2024 ರ ಲೋಕಸಭಾ ಚುನಾವಣೆ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಭವಿಷ್ಯ ನುಡಿಯುತ್ತವೆ.

ಇದನ್ನೂ ಓದಿ: ಕೊನೆಯ ಕ್ವಾರ್ಟರ್​ನಲ್ಲೂ ನಿರೀಕ್ಷೆಮೀರಿ ಜಿಡಿಪಿ ವೃದ್ಧಿ; 2023-24ರಲ್ಲಿ ಶೇ. 8.2ರಷ್ಟು ಬೆಳೆದ ಭಾರತದ ಆರ್ಥಿಕತೆ

ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸಿಟ್ ಪೋಲ್‌ಗಳ ವಿರುದ್ಧ ಎಚ್ಚರಿಸಿದ್ದು, ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ದಾರಿತಪ್ಪದಂತೆ ಎಚ್ಚರವಹಿಸಲು ಹೇಳಿದ್ದಾರೆ. “ಇಂದು ನಾನು ನಿಮಗೆ ಅತ್ಯಂತ ಮಹತ್ವದ ಮನವಿಯನ್ನು ಮಾಡುತ್ತಿದ್ದೇನೆ, ನಾಳೆ ಮತದಾನದ ಸಮಯದಲ್ಲಿ ಮತ್ತು ಮತದಾನದ ನಂತರದ ದಿನಗಳಲ್ಲಿ, ಮತಗಳ ಎಣಿಕೆ ಮುಗಿದು ನೀವು ಗೆಲುವಿನ ಸುದ್ದಿ ಪಡೆಯುವವರೆಗೆ ನೀವೆಲ್ಲರೂ ಸಂಪೂರ್ಣ ಜಾಗರೂಕರಾಗಿರಿ. ಬಿಜೆಪಿಯಿಂದ ದಾರಿತಪ್ಪಬೇಡಿ ಎಂದು ಅಖಿಲೇಶ್ ಹೇಳಿದ್ದಾರೆ.

“ವಾಸ್ತವವಾಗಿ ನಾನು ಈ ಮನವಿಯನ್ನು ಮಾಡುತ್ತಿದ್ದೇನೆ ಏಕೆಂದರೆ ಬಿಜೆಪಿಯವರು ನಾಳೆ ಸಂಜೆ ಚುನಾವಣೆ ಮುಗಿದ ತಕ್ಷಣ, ಸುಮಾರು 300 ಸ್ಥಾನಗಳಲ್ಲಿ ಮುನ್ನಡೆ ಬಿಜೆಪಿಗೆ ಸಿಕ್ಕಿದೆ ಎಂದು ತಮ್ಮ ‘ಮಾಧ್ಯಮ ಗುಂಪು (ಮಾಧ್ಯಮ ಮಂಡಳಿ) ವಿವಿಧ ಚಾನೆಲ್‌ಗಳಲ್ಲಿ ಹೇಳುವಂತೆ ಮಾಡುತ್ತಾರೆ. ಅದು ಸಂಪೂರ್ಣ ಸುಳ್ಳು ಎಂದು ಅಖಿಲೇಶ್ ಹೇಳಿದ್ದಾರೆ. ಮತ ಎಣಿಕೆಯ ದಿನದಂದು ಪ್ರತಿಪಕ್ಷಗಳು ಎಚ್ಚರವಾಗಿರದಂತೆ ಬಿಜೆಪಿ ಉದ್ದೇಶಪೂರ್ವಕವಾಗಿ ಈ ಸುಳ್ಳುಗಳನ್ನು ಪ್ರಚಾರ ಮಾಡುತ್ತದೆ ಎಂದು ಯುಪಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು