ಲೋಕಸಭೆ ಚುನಾವಣೆ: ಏಪ್ರಿಲ್ 26ಕ್ಕೆ 2ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ

|

Updated on: Apr 24, 2024 | 7:00 AM

Lok Sabha Elections Phase 2 polls: ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. 2ನೇ ಹಂತದಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳೂ ಸೇರಿವೆ. ಕರ್ನಾಟಕದಲ್ಲಿ ಯಾವೆಲ್ಲ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ ಎಂಬ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆ: ಏಪ್ರಿಲ್ 26ಕ್ಕೆ 2ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್ 24: ಲೋಕಸಭೆ ಚುನಾವಣೆಗೆ (Lok Sabha Elections) 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ವೋಟಿಂಗ್ (Voting) ಏಪ್ರಿಲ್ 19ರಂದು ನಡೆದಿದೆ. ಇದೀಗ ಏಪ್ರಿಲ್ 26ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ (2nd Phase Poll) ಒಟ್ಟು 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣೆ ನಡೆಯಲಿರುವ 13 ರಾಜ್ಯಗಳಲ್ಲಿ ಕರ್ನಾಟಕದ ಜತೆಗೆ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿವೆ.

ಅಸ್ಸಾಂನಲ್ಲಿ 5, ಬಿಹಾರದಲ್ಲಿ 5, ಛತ್ತೀಸ್‌ಗಢದಲ್ಲಿ 3, ಕೇರಳದಲ್ಲಿ 20, ಮಧ್ಯಪ್ರದೇಶದಲ್ಲಿ 7, ಮಹಾರಾಷ್ಟ್ರದಲ್ಲಿ 8, ಮಣಿಪುರದಲ್ಲಿ 1, ರಾಜಸ್ಥಾನದಲ್ಲಿ 13, ತ್ರಿಪುರಾ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 1, ಉತ್ತರ ಪ್ರದೇಶದ 8, ಪಶ್ಚಿಮ ಬಂಗಾಳದ 3 ಮತ್ತು ಜಮ್ಮು ಮತ್ತು ಕಾಶ್ಮೀರದ 1 ಲೋಕಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣದ ಜಿಲ್ಲೆಗಳ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಆ 14 ಕ್ಷೇತ್ರಗಳ ವಿವರ ಇಲ್ಲಿದೆ.

ರಾಜ್ಯದ ಹೆಸರು ಕ್ಷೇತ್ರದ ಹೆಸರು ಹಂತ ದಿನಾಂಕ
ಕರ್ನಾಟಕ ಬೆಂಗಳೂರು ಕೇಂದ್ರ ಹಂತ 2 26-ಏಪ್ರಿಲ್-24
ಕರ್ನಾಟಕ ಬೆಂಗಳೂರು ಉತ್ತರ ಹಂತ 2 26-ಏಪ್ರಿಲ್-24
ಕರ್ನಾಟಕ ಬೆಂಗಳೂರು ಗ್ರಾಮಾಂತರ ಹಂತ 2 26-ಏಪ್ರಿಲ್-24
ಕರ್ನಾಟಕ ಬೆಂಗಳೂರು ದಕ್ಷಿಣ ಹಂತ 2 26-ಏಪ್ರಿಲ್-24
ಕರ್ನಾಟಕ ಚಾಮರಾಜನಗರ ಹಂತ 2 26-ಏಪ್ರಿಲ್-24
ಕರ್ನಾಟಕ ಚಿಕ್ಕಬಳ್ಳಾಪುರ ಹಂತ 2 26-ಏಪ್ರಿಲ್-24
ಕರ್ನಾಟಕ ಚಿತ್ರದುರ್ಗ ಹಂತ 2 26-ಏಪ್ರಿಲ್-24
ಕರ್ನಾಟಕ ದಕ್ಷಿಣ ಕನ್ನಡ ಹಂತ 2 26-ಏಪ್ರಿಲ್-24
ಕರ್ನಾಟಕ ಹಾಸನ ಹಂತ 2 26-ಏಪ್ರಿಲ್-24
ಕರ್ನಾಟಕ ಕೋಲಾರ ಹಂತ 2 26-ಏಪ್ರಿಲ್-24
ಕರ್ನಾಟಕ ಮಂಡ್ಯ ಹಂತ 2 26-ಏಪ್ರಿಲ್-24
ಕರ್ನಾಟಕ ಮೈಸೂರು ಹಂತ 2 26-ಏಪ್ರಿಲ್-24
ಕರ್ನಾಟಕ ತುಮಕೂರು ಹಂತ 2 26-ಏಪ್ರಿಲ್-24
ಕರ್ನಾಟಕ ಉಡುಪಿ ಚಿಕ್ಕಮಗಳೂರು ಹಂತ 2 26-ಏಪ್ರಿಲ್-24

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್​ಶೋ: ತೇಜಸ್ವಿ ಸೂರ್ಯ ಪರ ಪ್ರಚಾರ

ಏಪ್ರಿಲ್ 19 ರಂದು ಮೊದಲ ಹಂತದ ಚುನಾವಣೆ ನಡೆದಿದ್ದು, 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡ