Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡ ಕುಟುಂಬದ ಜೊತೆ ವೈರತ್ವ ಇದ್ದಿದ್ರೆ ಕುಮಾರಸ್ವಾಮಿಯನ್ನು ಕರೆದೊಯ್ದು ಸಿಎಂ ಮಾಡ್ತಿರಲಿಲ್ಲ: ಡಿಕೆ ಶಿವಕುಮಾರ್

ದೇವೇಗೌಡ ಕುಟುಂಬದ ಜೊತೆ ವೈರತ್ವ ಇದ್ದಿದ್ರೆ ಕುಮಾರಸ್ವಾಮಿಯನ್ನು ಕರೆದೊಯ್ದು ಸಿಎಂ ಮಾಡ್ತಿರಲಿಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 23, 2024 | 7:45 PM

ಕುಮಾರಸ್ವಾಮಿಗೆ ತನ್ನ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಬೇಕಾಗಿತ್ತು ಮತ್ತು ಪಕ್ಷದ ಅಸ್ತಿತ್ವವನ್ನು ಸಹ ಉಳಿಸಬೇಕಿತ್ತು ಹಾಗಾಗೇ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದ ಶಿವಕುಮಾರ್, ನೋಡ್ತಾ ಇರಿ ರಾಜ್ಯದಲ್ಲಿ ಬಿಜೆಪಿಯನ್ನು ಜೆಡಿಎಸ್ ಮುಗಿಸುತ್ತದೆ ಮತ್ತು ಜೆಡಿಎಸ್ ಅನ್ನು ಬಿಜೆಪಿ ನುಂಗಿಬಿಡಲಿದೆ ಎಂದರು.

ರಾಮನಗರ: ಡಿಕೆ ಸುರೇಶ್ (DK Suresh) ಪರ ಪ್ರಚಾರ ಮಾಡುತ್ತಾ ತಮ್ಮ ಚುನಾವಣಾ ವಾಹನದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್ (DK Shivakumar) ಬಿಜೆಪಿ-ಜೆಡಿಎಸ್ ಮೈತ್ರಿ ಮೇಲೆ ವಾಗ್ದಾಳಿ ನಡೆಸಿದರು. ತನಗೆ ಜನರ ನಾಡಿ ಮಿಡಿತ ಚೆನ್ನಾಗಿ ಅರ್ಥ ಆಗುತ್ತೆ, ವಿಧಾನಸಭಾ ಚುನಾವಣೆ (Assembly polls) ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುತ್ತದೆ ಯಾರ ಜೊತೆಯೂ ಮೈತ್ರಿಗೆ ಕೈ ಚಾಚದೆ ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ ಅಂತ ಹೇಳಿದ್ದೆ, ನಮಗೆ 136 ಸೀಟು ಬರಲಿಲ್ಲವೇ ಎಂದು ಶಿವಕುಮಾರ ಕೇಳಿದರು. ಕುಮಾರಸ್ವಾಮಿಗೆ ತನ್ನ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಬೇಕಾಗಿತ್ತು ಮತ್ತು ಪಕ್ಷದ ಅಸ್ತಿತ್ವವನ್ನು ಸಹ ಉಳಿಸಬೇಕಿತ್ತು ಹಾಗಾಗೇ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದ ಶಿವಕುಮಾರ್, ನೋಡ್ತಾ ಇರಿ ರಾಜ್ಯದಲ್ಲಿ ಬಿಜೆಪಿಯನ್ನು ಜೆಡಿಎಸ್ ಮುಗಿಸುತ್ತದೆ ಮತ್ತು ಜೆಡಿಎಸ್ ಅನ್ನು ಬಿಜೆಪಿ ನುಂಗಿಬಿಡಲಿದೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದರೆ ಡಾ ಸಿಎನ್ ಮಂಜುನಾಥ್ ಕೇಂದ್ರದಲ್ಲಿ ಆರೋಗ್ಯ ಸಚಿವರಾಗುತ್ತಾರಂತೆ ಅಂತ ಹೇಳಿದಾಗ ಶಿವಕುಮಾರ್, ಅಯ್ಯೋ ಅಲ್ಲೊಬ್ಬರು ಕೃಷಿ ಸಚಿವರಾಗುತ್ತಿದ್ದಾರೆ, ಇಲ್ಲೊಬ್ಬರು ಅರೋಗ್ಯ ಮಂತ್ರಿ! ಅಸಲಿಗೆ ಇವರು ಗೆದ್ದರೆ ತಾನೆ ಮಿನಿಸ್ಟ್ರುಗಳಾಗೋದು ಎಂದು ಶಿವಕುಮಾರ್ ಹೇಳಿದರು. ದೇವೇಗೌಡ ಕುಟುಂಬದ ಜೊತೆ ತನಗೆ ಯಾವುದೇ ವೈರತ್ವ ಇಲ್ಲ, ಹಗೆತನ ಇದ್ದಿದ್ರೆ ಕುಮಾರಸ್ವಾಮಿಯನ್ನು ಕರೆದೊಯ್ದು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚೊಂಬನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯಿಂದ ಪಿಕ್​​ಪಾಕೆಟ್ ಜಾಹೀರಾತು: ಡಿಕೆ ಶಿವಕುಮಾರ್ ತಿರುಗೇಟು