AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈತ್ರಿ ಅಭ್ಯರ್ಥಿ ರೋಡ್​ ಶೋ ವೇಳೆ ಮೋದಿ ಪರ ಘೋಷಣೆ; ಕಾಂಗ್ರೆಸ್​ ಶಾಸಕ ಫುಲ್​ ಗರಂ

ಮೈತ್ರಿ ಅಭ್ಯರ್ಥಿ ರೋಡ್​ ಶೋ ವೇಳೆ ಮೋದಿ ಪರ ಘೋಷಣೆ; ಕಾಂಗ್ರೆಸ್​ ಶಾಸಕ ಫುಲ್​ ಗರಂ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Apr 23, 2024 | 8:41 PM

Share

ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಎರಡು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಅದರಂತೆ ಇಂದು(ಏ.23) ಕೋಲಾರ ಜಿಲ್ಲೆ ಬಂಗಾರಪೇಟೆ (Bangarapet) ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ರೋಡ್​ ಶೋ ವೇಳೆ ಕಿರಿಕ್ ಆಗಿದ್ದು, ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬು ರೋಡ್​ ಶೋಗೆ ರಸ್ತೆಯಲ್ಲಿ ಜನ ಜಮಾಯಿಸಿದ್ಧರು. ಈ ವೇಳೆ ಕಾರಿನಲ್ಲಿ ಬಂದ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್​.ಎನ್​ನಾರಾಯಣಸ್ವಾಮಿ(SN Narayanaswamy) ಎದುರು ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆ ಕಾರಿನಿಂದ ಹೊರಬಂದು ಶಾಸಕ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಕೋಲಾರ, ಏ.23: ಕೋಲಾರ ಜಿಲ್ಲೆ ಬಂಗಾರಪೇಟೆ(Bangarapet) ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ರೋಡ್​ ಶೋ ವೇಳೆ ಕಿರಿಕ್ ಆಗಿದ್ದು, ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬು ರೋಡ್​ ಶೋಗೆ ರಸ್ತೆಯಲ್ಲಿ ಜನ ಜಮಾಯಿಸಿದ್ಧರು. ಈ ವೇಳೆ ಕಾರಿನಲ್ಲಿ ಬಂದ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್​.ಎನ್​ನಾರಾಯಣಸ್ವಾಮಿ(SN Narayanaswamy) ಎದುರು ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆ ಕಾರಿನಿಂದ ಹೊರಬಂದು ಶಾಸಕ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಶಾಸಕರ ಬೆಂಬಲಿಗರಿಂದ ಎಸ್.ಎನ್.- ಎಸ್.ಎನ್. ಎಂದು ಘೋಷಣೆ ಕೂಗಿದ್ದು, ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಳಿಕ ಶಾಸಕರನ್ನು ಪೊಲೀಸರು ಹಾಗೂ ಕೆಲ ಮುಖಂಡರು ಸಮಾಧಾನ ಪಡಿಸಿ ಕಳಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Rajendra Simha BL
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More