ಕುಮಾರಸ್ವಾಮಿಯನ್ನ ವಾಪಸ್​ ಚನ್ನಪಟ್ಟಣಕ್ಕೆ ಕಳುಹಿಸಿ-ಡಿಕೆ ಶಿವಕುಮಾರ್​ ವಾಗ್ದಾಳಿ

ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ಉಭಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದಾರೆ. ಅದರಂತೆ ಇಂದು (ಏ.20) ಮೈಸೂರು ಜಿಲ್ಲೆಯ ಕೆ.ಆರ್​ ನಗರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ‘ಮಂಡ್ಯದಲ್ಲಿ ಸ್ಟಾರ್ ಚಂದ್ರು ಅಲ್ಲ ಅಭ್ಯರ್ಥಿ, ಸಿದ್ದರಾಮಯ್ಯ, ಡಿಕೆ ಅಭ್ಯರ್ಥಿ. ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಕುಮಾರಸ್ವಾಮಿಯನ್ನು ವಾಪಸ್​ ಚನ್ನಪಟ್ಟಣಕ್ಕೆ ಕಳುಹಿಸಿ ಎಂದು ಕಿಡಿಕಾರಿದರು.

ಕುಮಾರಸ್ವಾಮಿಯನ್ನ ವಾಪಸ್​ ಚನ್ನಪಟ್ಟಣಕ್ಕೆ ಕಳುಹಿಸಿ-ಡಿಕೆ ಶಿವಕುಮಾರ್​ ವಾಗ್ದಾಳಿ
ಡಿಕೆ ಶಿವಕುಮಾರ್​
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 20, 2024 | 4:06 PM

ಮೈಸೂರು, ಏ.20: ‘ನಾವು ನಿನ್ನ ಬೆನ್ನಿಗೆ ಚೂರಿ ಹಾಕಿದ್ವಾ ಎಂದು ಹೆಚ್​ ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ಡಿಕೆ ಶಿವಕುಮಾರ್(DK Shivakumar) ವಾಗ್ದಾಳಿ ನಡೆಸಿದ್ದಾರೆ. ಇಂದು(ಏ.20) ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಾತನಾಡಿದ ಅವರು, ‘ನನ್ನ ಜಮೀನಲ್ಲಿ ಕಲ್ಲು ಒಡೆಯೋಕೆ ಇವನ ಅನುಮತಿ ಕೇಳಬೇಕಾ?, ಎ ಟೀಂ, ಬಿ ಟೀಂ ಅಲ್ಲ ಈಗ ಬಿಜೆಪಿ ಜೆಡಿಎಸ್ ಪಾರ್ಟ್​ನರ್ಸ್​ ಆಗಿದ್ದಾರೆ.  ಮಂಡ್ಯದಲ್ಲಿ ಸ್ಟಾರ್ ಚಂದ್ರು ಅಲ್ಲ ಅಭ್ಯರ್ಥಿ, ಸಿದ್ದರಾಮಯ್ಯ, ಡಿಕೆ ಅಭ್ಯರ್ಥಿ. ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಕುಮಾರಸ್ವಾಮಿಯನ್ನು ವಾಪಸ್​ ಚನ್ನಪಟ್ಟಣಕ್ಕೆ ಕಳುಹಿಸಿ ಎಂದು ಕಿಡಿಕಾರಿದರು.

ಕಾಂಗ್ರೆಸ್​ ಪಕ್ಷ ಒಂದು ಜಾತಿ, ಧರ್ಮದ‌ ಮೇಲೆ ನಿಂತಿಲ್ಲ. ಮೋದಿ ಅವರು 15 ಲಕ್ಷ ಹಣ ಹಾಕ್ತೇವೆ ಅಂದಿದ್ದರು. ಯಾರಿಗಾದರೂ ಬಂತಾ?, ಆದಾಯ ಡಬಲ್‌ ಆಯ್ತಾ ಅಥವಾ ಯುವಕರಿಗೆ ಸರ್ಕಾರಿ ಕೆಲಸ ಸಿಕ್ತಾ?. ಮತ್ತೆ ಏಕೆ ಪ್ರಧಾನಿ ಮೋದಿಗೆ ವೋಟ್​ ಕೇಳುವುದಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು. ‘ನಾವು ಭ್ರಷ್ಟಾಚಾರ ತೆಗೆಯಬೇಕು ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ, ಹೆಚ್​ಡಿಕೆ ಅವರು ಇದರಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆ ಹೆಚ್​ಡಿಕೆ ವಿರುದ್ಧ ಮಂಡ್ಯದ ಹೆಣ್ಣು ಮಕ್ಕಳು ರೊಚ್ಚಿಗೆದ್ದಿದ್ದಾರೆ.

ಇದನ್ನೂ ಓದಿ:ಮಂಡ್ಯ-ಮೈಸೂರು ಭಾಗಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ: ಡಿಕೆ ಶಿವಕುಮಾರ್

ಕುಮಾರಸ್ವಾಮಿ ಅವರು ನಮ್ಮ ಬದುಕಿನ ಪ್ರಶ್ನೆ ಮಾಡುತ್ತಿದ್ದಾರೆ. ನೀನು ಸಿಎಂ, ನಿಮ್ಮ ತಂದೆ ಪ್ರಧಾನಿ ಆಗಿದ್ದರೋ ಅಲ್ಲೇ ನಿಲ್ಲಬೇಕಿತ್ತು. ಸಾ.ರಾ.ಮಹೇಶ್, ಪುಟ್ಟರಾಜು, ತಮ್ಮಣ್ಣಗೆ ಚಾಕಲೇಟ್​ ಕೊಟ್ಟರು, ಜೆಡಿಎಸ್​ನಲ್ಲಿ ಯಾರು ಕಾರ್ಯಕರ್ತರು ಇಲ್ಲವೇ.  ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ. ಒಕ್ಕಲಿಗ ನಾಯಕ ಎಂದು ಹೇಳಿದ್ನಾ, ನಾನು ಸರ್ವಜನಾಂಗದ ನಾಯಕ ಎಂದು ವಿಪಕ್ಷಗಳ ಹೇಳಿಕೆಗೆ ಟಾಂಗ್​ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ