ಪರಂಪರೆಯನ್ನು ಮಗನೇ ಮುಂದುವರೆಸಿಕೊಂಡು ಹೋಗಬೇಕು; ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆಗೆ ಶಶಿ ತರೂರ್ ಸ್ಪಷ್ಟನೆ

|

Updated on: May 22, 2024 | 5:46 PM

ಕಳೆದ 2 ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಅಭ್ಯರ್ಥಿಗಳು 2019ರ ಲೋಕಸಭೆ ಚುನಾವಣೆಗಿಂತ ಉತ್ತಮವಾಗಿ ಮತ ಪಡೆಯುವ ಮೂಲಕ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.

ಪರಂಪರೆಯನ್ನು ಮಗನೇ ಮುಂದುವರೆಸಿಕೊಂಡು ಹೋಗಬೇಕು; ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆಗೆ ಶಶಿ ತರೂರ್ ಸ್ಪಷ್ಟನೆ
ಶಶಿ ತರೂರ್
Follow us on

ರಾಯ್​ಬರೇಲಿ: ತಂದೆ ಅಥವಾ ತಾಯಿಯ ನಂತರ ಮಗನೇ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ವಾಡಿಕೆ. ರಾಯ್‌ಬರೇಲಿ (Rae Bareli) ಗಾಂಧಿ ಭದ್ರಕೋಟೆಯಾಗಿದ್ದು, ಸೋನಿಯಾ ಗಾಂಧಿ (Sonia Gandhi) ಹಿಂದೆ ಸರಿಯಲು ನಿರ್ಧರಿಸಿದ್ದರಿಂದ ಆ ಪರಂಪರೆಯನ್ನು ಮಗ ರಾಹುಲ್ ಗಾಂಧಿ (Rahul Gandhi) ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರು ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಾದ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಯನ್ನು ಹೇರುತ್ತಿದ್ದಾರೆ ಎಂಬ ಬಿಜೆಪಿಯ ಆರೋಪವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತಳ್ಳಿಹಾಕಿದ್ದಾರೆ. 2022ರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ಶಶಿ ತರೂರ್‌ ರಾಹುಲ್ ಗಾಂಧಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ರಾಯ್‌ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದು, ಸೋನಿಯಾ ಗಾಂಧಿ ಹಿಂದೆ ಸರಿಯಲು ನಿರ್ಧರಿಸಿದಾಗ ಆ ಪರಂಪರೆಯನ್ನು ಪುತ್ರನೇ ವಹಿಸಿಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿರುವೆ: ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಸೋನಿಯಾ ಪ್ರಚಾರ

ತಿರುವನಂತಪುರಂ ಸಂಸದರಾಗಿರುವ ಶಶಿ ತರೂರ್ ಈ ಬಗ್ಗೆ ಮಾತನಾಡಿದ್ದು, ರಾಹುಲ್ ಗಾಂಧಿಯವರು ಪ್ರಶ್ನಾತೀತವಾಗಿ ಕಾಂಗ್ರೆಸ್ ಪಕ್ಷದ ಅತ್ಯಂತ ಜನಪ್ರಿಯ ನಾಯಕರು. ಸಾರ್ವಜನಿಕವಾಗಿ ಮತ್ತು ಪಕ್ಷದೊಳಗೆ ಎರಡರಲ್ಲೂ ಅವರೊಬ್ಬ ಉತ್ತಮ ನಾಯಕ. ಅವರನ್ನು ಯಾರ ಮೇಲೂ ಹೇರುವ ಅಗತ್ಯವಿಲ್ಲ. ಅವರಿಗೆ ಕಣ್ಣು ಮುಚ್ಚಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ ಸಿಗುತ್ತದೆ. ಅವರನ್ನು ಹೇರುವ ಅಗತ್ಯವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

“ರಾಯ್​ಬರೇಲಿಯ ಮಟ್ಟಿಗೆ, ಫಿರೋಜ್ ಗಾಂಧಿ ಅವರು ಅಲ್ಲಿಂದ ಮೊದಲ ಬಾರಿಗೆ ಆಯ್ಕೆಯಾದಾಗಿನಿಂದ 1952ರಿಂದ ಇದು ಗಾಂಧಿ ಕುಟುಂಬದ ವಶದಲ್ಲಿದೆ. ಇದು ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ ಆ ಕ್ಷೇತ್ರದಲ್ಲಿ ಸ್ಪರ್ಧಿಸಿ ಒಂದು ಹಂತವನ್ನು ದಾಟಿದ ನಂತರ ರಾಜ್ಯಸಭೆಗೆ ಹೋಗಲು ಬಯಸಿದ್ದರು. ಈಗ ಆ ಪರಂಪರೆಯನ್ನು ಮಗ ತೆಗೆದುಕೊಂಡಿದ್ದಾರೆ. ಅದರಲ್ಲಿ ವಿಶೇಷವಾದ್ದೇನೂ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ನೀಡುವುದಾಗಿ ರಾಹುಲ್ ಗಾಂಧಿಯೇ ಹೇಳಿದ್ದಾರೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

2004 ರಿಂದ 2024ರ ವರೆಗೆ ಎರಡು ದಶಕಗಳ ಕಾಲ ರಾಯ್ ಬರೇಲಿ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸಿದ ನಂತರ ಸೋನಿಯಾ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಬಾರಿ ಕಾಂಗ್ರೆಸ್ ಈ ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಕಣಕ್ಕಿಳಿಸಿದೆ. ರಾಯ್ ಬರೇಲಿಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ