Poll of Polls: ಏನಿದು ಚುನಾವಣೋತ್ತರ ಸಮೀಕ್ಷೆ? ಎಕ್ಸಿಟ್ ಪೋಲ್ ಲೆಕ್ಕಾಚಾರ ಹೇಗಿರುತ್ತದೆ?

|

Updated on: May 28, 2024 | 5:40 PM

India General Election Poll Survey: ಚುನಾವಣೋತ್ತರ ಸಮೀಕ್ಷೆ ಹೆಸರೇ ಸೂಚಿಸುವಂತ ಪ್ರತಿ ಮತದಾನ ಹಂತಗಳು ಮುಗಿದಾದ ಮೇಲೆ ಮತದಾನದ ಬಳಿಕ ಮತದಾರರ ಅಭಿಪ್ರಾಯ ಕೇಳಿ ಫಲಿತಾಂಶ ಏನಿರಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ ಊಹಿಸುವ ಪ್ರಕ್ರಿಯೆಯಾಗಿದೆ. ಜನರು ಹೇಗೆ ಮತ ಚಲಾಯಿಸಿದರು ಎಂಬುದರ ಮಾಹಿತಿಯನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿದೆ.

Poll of Polls: ಏನಿದು ಚುನಾವಣೋತ್ತರ ಸಮೀಕ್ಷೆ? ಎಕ್ಸಿಟ್ ಪೋಲ್ ಲೆಕ್ಕಾಚಾರ ಹೇಗಿರುತ್ತದೆ?
ಎಕ್ಸಿಟ್ ಪೋಲ್
Follow us on

ದೆಹಲಿ ಮೇ 28: ಲೋಕಸಭಾ ಚುನಾವಣೆಯ (Lok Sabha Election) ಅಂತಿಮ ಹಂತದ ಮತದಾನ ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗವು (ECI) ಅಧಿಕೃತವಾಗಿ ಚುನಾವಣಾ ಫಲಿತಾಂಶ ಪ್ರಕಟಿಸುವುದಕ್ಕಿಂತ ಮುನ್ನ ಮಾಧ್ಯಮಗಳು ಎಕ್ಸಿಟ್ ಪೋಲ್ (Exit Polls) ಅಥವಾ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸುತ್ತವೆ. ಚುನಾವಣೋತ್ತರ ಸಮೀಕ್ಷೆ ಹೆಸರೇ ಸೂಚಿಸುವಂತ ಪ್ರತಿ ಮತದಾನ ಹಂತಗಳು ಮುಗಿದಾದ ಮೇಲೆ ಮತದಾನದ ಬಳಿಕ ಮತದಾರರ ಅಭಿಪ್ರಾಯ ಕೇಳಿ ಫಲಿತಾಂಶ ಏನಿರಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ ಊಹಿಸುವ ಪ್ರಕ್ರಿಯೆಯಾಗಿದೆ. ಜನರು ಹೇಗೆ ಮತ ಚಲಾಯಿಸಿದರು ಎಂಬುದರ ಮಾಹಿತಿಯನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿದೆ. ಅಧಿಕೃತ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು ಈ ಸಮೀಕ್ಷೆಗಳು ಚುನಾವಣಾ ಫಲಿತಾಂಶಗಳ ಆರಂಭಿಕ ಸೂಚನೆಗಳನ್ನು ನೀಡುತ್ತವೆ. 1957 ರಲ್ಲಿ ಎರಡನೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪಿನಿಯನ್ ಎಕ್ಸಿಟ್ ಪೋಲ್ ಅನ್ನು ನಡೆಸಿತ್ತು.

ಎಕ್ಸಿಟ್ ಪೋಲ್‌ಗಳ ಹಿಂದಿನ ಕಲ್ಪನೆಯೆಂದರೆ, ಮತದಾನದ ಸ್ಥಳದಿಂದ ಹೊರಬಂದ ತಕ್ಷಣ ಮತದಾರರಲ್ಲಿ ಮತದಾನದ ಬಗ್ಗೆ ಕೇಳಿದರೆ ಮತದಾರರು ಸತ್ಯವನ್ನು ಹೇಳುವ ಸಾಧ್ಯತೆಯಿದೆ ಏಕೆಂದರೆ ಅವರ ಸ್ಮರಣೆ ಇನ್ನೂ ತಾಜಾವಾಗಿರುತ್ತದೆ. ಸರ್ಕಾರವು ಎಂದಿಗೂ ಎಕ್ಸಿಟ್ ಪೋಲ್ ನಡೆಸುವುದಿಲ್ಲ.

ಭಾರತದಲ್ಲಿ ಎಕ್ಸಿಟ್ ಪೋಲ್‌ಗಳನ್ನು ನಿಷೇಧಿಸದಿದ್ದರೂ, ಭಾರತೀಯ ಚುನಾವಣಾ ಆಯೋಗವು ಅವುಗಳನ್ನು ನಡೆಸುವ ಬಗ್ಗೆ ಕೆಲವು ನಿಯಮಗಳನ್ನು ವಿಧಿಸಿದೆ. ಎಕ್ಸಿಟ್ ಪೋಲ್‌ಗಳ ಬಳಕೆಯ ಮೇಲಿನ ನಿಯಂತ್ರಣ ಚುನಾವಣಾ ಆಯೋಗದ ಮೇಲಿದೆ. ಮತದಾನ ಮುಕ್ತಾಯವಾದ ನಂತರವೇ ಎಕ್ಸಿಟ್ ಪೋಲ್ ನಡೆಸಬೇಕು. ಚುನಾವಣಾ ಆಯೋಗ ಪ್ರಕಾರ, ಎಕ್ಸಿಟ್ ಪೋಲ್​​ನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ನಡೆಸಬಹುದು. ಈ ಅವಧಿಯು ಮತಗಟ್ಟೆಗಳು ಮುಚ್ಚುವ ಸಮಯದಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ಬೂತ್ ಮುಚ್ಚಿದ 30 ನಿಮಿಷಗಳ ನಂತರ ಕೊನೆಗೊಳ್ಳುತ್ತದೆ.ಮತದಾನದ ದಿನ ಅಥವಾ ಮತದಾನದ ಅವಧಿಯಲ್ಲಿ ಯಾವುದೇ ಎಕ್ಸಿಟ್ ಪೋಲ್ ಪ್ರಕಟಿಸುವಂತಿಲ್ಲ.

ಮತದಾನದ ಅವಧಿ ಮುಕ್ತಾಯದ ಮೊದಲು ಭಾರತದ ಯಾವುದೇ ಭಾಗದಲ್ಲಿ ಎಕ್ಸಿಟ್ ಪೋಲ್‌ಗಳನ್ನು ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತದೆ. ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 126A ಪ್ರಕಾರ, ”  ಚುನಾವಣಾ ಆಯೋಗವು ಸೂಚಿಸಬಹುದಾದಂತಹ ಅವಧಿಯಲ್ಲಿ ಎಕ್ಸಿಟ್ ಪೋಲ್‌ನ ಫಲಿತಾಂಶವನ್ನು ಯಾವುದೇ ವ್ಯಕ್ತಿ ಯಾವುದೇ ಎಕ್ಸಿಟ್ ಪೋಲ್ ನಡೆಸುವಂತಿಲ್ಲ. ಅದೇ ರೀತಿ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅದನ್ನು ಪ್ರಕಟಿಸಬಾರದು ಅಥವಾ ಪ್ರಚಾರ ಮಾಡಬಾರದು ಎಂದು ಹೇಳಿದೆ.

ಹಲವಾರು ನಿದರ್ಶನಗಳ ಹೊರತಾಗಿಯೂ, ಇತ್ತೀಚಿನ ದಶಕಗಳಲ್ಲಿ ಎಕ್ಸಿಟ್ ಪೋಲ್‌ಗಳು ಭಾರತದಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗಿವೆ. ಎಲ್ಲ ಹಂತಗಳಲ್ಲಿನ ಮತದಾನ ಮುಗಿದ ಕೂಡಲೇ ಯಾವ ಪಕ್ಷ ಗೆಲ್ಲುತ್ತದೆ ಎಂಬ ಕುತೂಹಲ ಜನರಲ್ಲಿ ಇದ್ದೇ ಇರುತ್ತದೆ. ಈ ಕುತೂಹಲದಿಂದಾಗಿಯೇ ಟಿವಿ ಮಾಧ್ಯಮಗಳು ಈ ಬಗ್ಗೆ ಸುಳಿವು ನೀಡಲು ಶುರು ಮಾಡುತ್ತದೆ.ಒಂದು ವೇಳೆ ನಿಗದಿತ ಅವಧಿಗಿಂತ ಮುನ್ನವೇ ಸಮೀಕ್ಷೆ ಪ್ರಕಟಿಸಿದೆ ಸೆಕ್ಷನ್‌ 126ಎ ಪ್ರಕಾರ, “ಈ ಸೆಕ್ಷನ್‌ನ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಅಂದಹಾಗೆ ಚುನಾವಣೋತ್ತರ ಸಮೀಕ್ಷೆಗಳು ಯಾವತ್ತೂ ಸರಿಯಾಗಬೇಕು ಎಂದೇನೂ ಇಲ್ಲ.

ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆ – ವ್ಯತ್ಯಾಸ ಏನು?

ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಇಂಗ್ಲಿಷ್‌ನಲ್ಲಿ ಒಪೀನಿಯನ್ ಪೋಲ್ ಅಂತಾರೆ. ಎಕ್ಸಿಟ್ ಪೋಲ್ ಅಂದರೆ , ಚುನಾವಣೋತ್ತರ ಸಮೀಕ್ಷೆ. ಚುನಾವಣಾ ಪೂರ್ವ ಸಮೀಕ್ಷೆ ಎಂದರೆ ಚುನಾವಣೆಗೆ ಮೊದಲು ಜನಾಭಿಪ್ರಾಯ ಸಂಗ್ರಹಿಸಿ ಅದರ ಲೆಕ್ಕಾಚಾರ ಆಧರಿಸಿ ಫಲಿತಾಂಶ ಹೀಗಿರಬಹುದು ಎಂದು ಊಹಿಸಿ ಹೇಳುವಂಥದ್ದು. ಆದರೆ ಎಕ್ಸಿಟ್ ಪೋಲ್ ಚುನಾವಣೆ ಮುಗಿದ ನಂತರ ಮಾಡುವ ಮತಗಟ್ಟೆ ಸಮೀಕ್ಷೆ ಆಗಿದೆ. ಈ ಸಮೀಕ್ಷೆ ನಡೆಸಲು ಖಾಸಗಿ ಸಂಸ್ಥೆಗಳಿದ್ದು, ಇವು ಮಾಧ್ಯಮಗಳೊಂದಿಗೆ ಸೇರಿ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸುತ್ತವೆ.

ಚುನಾವಣೋತ್ತರ ಸಮೀಕ್ಷೆ ಹೇಗೆ ಮಾಡಲಾಗುತ್ತದೆ?

ಮೊದಲೆಲ್ಲ ಮತಗಟ್ಟೆಗೆ ಹೋಗಿ ಈ ಸಮೀಕ್ಷೆ ಮಾಡಲಾಗುತ್ತಿತ್ತು. ಇದೀಗ ಮತದಾರರ ಮೊಬೈಲ್‌ಗೆ ಸ್ವಯಂಚಾಲಿತ ಕರೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಈ ರೀತಿ ಕರೆಗಳಲ್ಲಿ ಮತದಾರರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಗಳ ಆಯ್ಕೆ ನೀಡಲಾಗುತ್ತದೆ. ಆ ಮೂಲಕ ಮಾದರಿ ಸಂಗ್ರಹಿಸಿ ಫಲಿತಾಂಶವನ್ನು ಊಹಿಸಲಾಗುತ್ತದೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಪ್ರಕಾರ, “ಸರಿಯಾದ ಪ್ರಶ್ನೆಗಳನ್ನು ಸಿದ್ಧಪಡಿಸದೇ ಮಾಹಿತಿಯನ್ನು ಕಲೆ ಹಾಕುವಂತಿಲ್ಲ ಅಥವಾ ಮತ ಹಂಚಿಕೆಯ ಅಂದಾಜುಗಳ ಲೆಕ್ಕಾಚಾರವನ್ನು ವ್ಯವಸ್ಥಿತವಾಗಿ ವಿಶ್ಲೇಷಿಸಲಾಗುವುದಿಲ್ಲ.

ಜನಸಂಖ್ಯಾ ಪ್ರಾತಿನಿಧ್ಯ: ಸಮೀಕ್ಷೆ ಮಾಡಲಾದ ಜನಸಂಖ್ಯೆಯು ಒಟ್ಟಾರೆ ಮತದಾನದ ಜನಸಂಖ್ಯೆಯ ಜನಸಂಖ್ಯಾ ಪ್ರತಿನಿಧಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಕೆಲವು ಗುಂಪುಗಳು ಹೆಚ್ಚು ಅಥವಾ ಕಡಿಮೆ ಪ್ರತಿನಿಧಿಸಿದರೆ, ಅದು ಭವಿಷ್ಯವಾಣಿಗಳ ನಿಖರತೆಯ ಮೇಲೆ ಪರಿಣಾಮ ಬೀರಬಹುದು. ದೊಡ್ಡ ಮಾದರಿಯ ಗಾತ್ರವು ಮುಖ್ಯವಾಗಿದೆ. ಆದರೆ ಮಾದರಿಯ ಗಾತ್ರಕ್ಕಿಂತ ಹೆಚ್ಚಾಗಿ ಮಾದರಿಯು ದೊಡ್ಡ ಜನಸಂಖ್ಯೆಯನ್ನು ಎಷ್ಟು ಚೆನ್ನಾಗಿ ಪ್ರತಿನಿಧಿಸುತ್ತದೆ ಎಂಬುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ಚುನಾವಣೆಯಲ್ಲಿ ಯಾರು ಗೆದ್ದರೆ ಮಾರುಕಟ್ಟೆ ವರ್ತನೆ ಹೇಗಿರುತ್ತೆ? ನೊಮುರಾ ಸಂಸ್ಥೆಯಿಂದ ಇಂಟರೆಸ್ಟಿಂಗ್ ಲೆಕ್ಕಾಚಾರ

ಚುನಾವಣೋತ್ತರ ಸಮೀಕ್ಷೆಯನ್ನು ನಡೆಸುವ ಸಾಮಾನ್ಯ ವಿಧಾನವೆಂದರೆ ಮಾದರಿಗಳ ಸಂಗ್ರಹ. ಈ ಮಾದರಿಗಳು ಹಿಂದಿನ ಮತ್ತು ಪ್ರಸ್ತುತ ಅವಧಿಯಲ್ಲಿ ನಿರ್ದಿಷ್ಟ ಪಕ್ಷ ಮತ್ತು ಅದರ ಕಾರ್ಯಗಳ ಬಗ್ಗೆ ನಾಗರಿಕರು ಏನು ಭಾವಿಸುತ್ತಾರೆ ಎಂಬುದರ ಅಭಿಪ್ರಾಯವಷ್ಟೇ. ಎಕ್ಸಿಟ್ ಪೋಲ್ ಸಮಯದಲ್ಲಿ ಮತದಾರರಿಗೆ ಕೇಳಲಾದ ಪ್ರಶ್ನೆಗಳೆಂದರೆ ಅವನು/ಅವಳು ವಿವರಗಳನ್ನು ಹಂಚಿಕೊಳ್ಳಲು ಬಯಸಿದರೆ, XYZ ಪಕ್ಷಕ್ಕಾಗಿ ನೀವು ಮತದಾನ ಮಾಡಿದ್ದು ಯಾಕೆ? ಎಂಬ ಪ್ರಶ್ನೆ ಕೇಳಿ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ.ಎಕ್ಸಿಟ್ ಪೋಲ್ ನಡೆಸುವ ಏಜೆನ್ಸಿಗಳು ಸಂಗ್ರಹಿಸಿದ ಮಾದರಿಗಳು ಪ್ರದೇಶ/ರಾಜ್ಯವನ್ನು ಅವಲಂಬಿಸಿ ಭಿನ್ನವಾಗಿರುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ