ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result) ಪ್ರಕಟವಾಗಿದೆ. ಈ ಬಾರಿ ಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ. ಆದರೆ, ಬಿಜೆಪಿ (BJP) ನೇತೃತ್ವದ ಮೈತ್ರಿಕೂಟ ಎನ್‌ಡಿಎ 292 ಸ್ಥಾನಗಳನ್ನು ಪಡೆದುಕೊಂಡಿದೆ. ಇದೇ ವೇಳೆ, ಇಂಡಿಯಾ ಒಕ್ಕೂಟವು 234 ಸ್ಥಾನಗಳನ್ನು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಎಲ್ಲರ ಕಣ್ಣು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಮೇಲೆ ನೆಟ್ಟಿದೆ. ನಿತೀಶ್ ಕುಮಾರ್ ಅವರ ಜೆಡಿಯು 12 ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು ಪಡೆದಿವೆ. ಒಟ್ಟಿನಲ್ಲಿ ಒಟ್ಟು 28 ಸ್ಥಾನಗಳಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬಹುಮುಖ್ಯವಾಗಿ ಪರಿಣಮಿಸಿದೆ.
ಈ ಎರಡು ಪಕ್ಷಗಳ ಹೆಜ್ಜೆಗಳ ಮೇಲೆ ಮಾತ್ರವಲ್ಲದೆ, ಎನ್‌ಡಿಎ ಅಥವಾ ಇಂಡಿಯಾ ಮೈತ್ರಿಕೂಟದ ಭಾಗವಲ್ಲದ ಸ್ವತಂತ್ರ ಸಂಸದರು ಮತ್ತು ಪಕ್ಷಗಳ ಮೇಲೂ ಗಮನ ಹರಿಸಲಾಗಿದೆ. ಅಂತಹ ಸಂಸದರ ಸಂಖ್ಯೆ 17 ಇವೆ. ಈ ಸಂಸದರು ಕೂಡ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸಬಹುದು.
17 ಸಂಸದರಲ್ಲಿ ಎಐಎಂಐಎಂನ ಓವೈಸಿ, ಬಿಹಾರದ ಪೂರ್ಣಿಯಾದಿಂದ ಗೆದ್ದ ಪಪ್ಪು ಯಾದವ್, ಉತ್ತರ ಪ್ರದೇಶದ ನಗೀನಾದಿಂದ ಗೆದ್ದ ಚಂದ್ರಶೇಖರ್ ಆಜಾದ್, ಪಂಜಾಬ್‌ನ ಫರೀದ್‌ಕೋಟ್‌ನಿಂದ ಗೆದ್ದಿರುವ ಸಬರ್ಜಿತ್ ಸಿಂಗ್ ಖಾಲ್ಸಾ, ಖದೂರ್ ಸಾಹಿಬ್, ದಮನ್ ಮತ್ತು ದಿಯುನಿಂದ ಗೆದ್ದ ಅಮೃತಪಾಲ್ ಸಿಂಗ್, ಸಾಂಗ್ಲಿಯಿಂದ ಗೆದ್ದ ವಿಶಾಲ್ ಪಾಟೀಲ್, ಬಾರಾಮುಲ್ಲಾದಿಂದ ಗೆದ್ದ ಇಂಜಿನಿಯರ್ ರಶೀದ್ ಒಳಗೊಂಡಿದ್ದಾರೆ.
17 ಸಂಸದರ ಪಟ್ಟಿ ಇಲ್ಲಿದೆ
ಸಂಸತ್ತಿನ ಸದಸ್ಯ | ಪಾರ್ಟಿ |
1- ಪಪ್ಪು ಯಾದವ್ | ಸ್ವತಂತ್ರ |
2- ಓವೈಸಿ | ಎಐಎಂಐಎಂ |
3- ಚಂದ್ರಶೇಖರ್ ಆಜಾದ್ | ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) |
4- ಸಬರ್ಜಿತ್ ಸಿಂಗ್ ಖಾಲ್ಸಾ | ಸ್ವತಂತ್ರ |
5- ಅಮೃತಪಾಲ್ ಸಿಂಗ್ | ಸ್ವತಂತ್ರ |
6-ವಿಶಾಲ್ ಪಾಟೀಲ್ | ಸ್ವತಂತ್ರ |
7- ಇಂಜಿನಿಯರ್ ರಶೀದ್ | ಸ್ವತಂತ್ರ |
8- ಪಟೇಲ್ ಉಮೇಶಭಾಯ್ | ಸ್ವತಂತ್ರ |
9- ಮೊಹಮ್ಮದ್ ಹನೀಫಾ | ಸ್ವತಂತ್ರ |
10-ರಿಕಿ ಆಂಡ್ರ್ಯೂ | ಪೀಪಲ್ಸ್ ಪಾರ್ಟಿ |
11-ರಿಚರ್ಡ್ ವನ್ಲಾಲ್ಹಂಗೈಹಾ | ಜೋರಾಮ್ ಪೀಪಲ್ಸ್ ಮೂವ್ಮೆಂಟ್ |
12-ಹರ್ಸಿಮ್ರತ್ ಕೌರ್ ಬಾದಲ್ | ಶಿರೋಮಣಿ ಅಕಾಲಿದಳ |
13-ಪೆದ್ದಿರೆಡ್ಡಿ ವೆಂಕಟ ಮಿಧುನ್ ರೆಡ್ಡಿ | ವೈಎಸ್ಆರ್ಸಿಪಿ |
14-ಅವಿನಾಶ್ ರೆಡ್ಡಿ | ವೈಎಸ್ಆರ್ಸಿಪಿ |
15-ತನುಜ್ ರಾಣಿ | ವೈಎಸ್ಆರ್ಸಿಪಿ |
16-ಗುರುಮೂರ್ತಿ ಮಡಿಲ | ವೈಎಸ್ಆರ್ಸಿಪಿ |
17-ಜೋಯಂತ ಬಸುಮತರಿ | ಯುಪಿಪಿಎಲ್ |
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪಕ್ಷಾಂತರಿ ನಾಯಕರಿಂದ ಬಿಜೆಪಿಗೆ ನಷ್ಟವೇ ಹೆಚ್ಚು! ಎಡವಿದ್ದು ಎಲ್ಲೆಲ್ಲಿ? ಇಲ್ಲಿದೆ ನೋಡಿ
ಇಂಡಿಯಾ ಕೂಟ ಸರ್ಕಾರ ರಚಿಸಲು ಸಾಧ್ಯವಿದೆಯೇ?
ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಆದಾಗ್ಯೂ ನಂಬರ್ ಗೇಮ್ ಬಗ್ಗೆ ನೋಡುವುದಾದರೆ, ಇಂಡಿಯಾ ಮೈತ್ರಿಕೂಟ ಒಟ್ಟು 234 ಸ್ಥಾನಗಳನ್ನು ಹೊಂದಿದೆ. 272ರ ಸಂಖ್ಯೆಯನ್ನು ತಲುಪಲು 38 ಸಂಸದರ ಅಗತ್ಯವಿದೆ. ನಿತೀಶ್ ಮತ್ತು ನಾಯ್ಡು 28 ಸಂಸದರನ್ನು ಹೊಂದಿದ್ದಾರೆ. ಅವರು ಇಂಡಿಯಾ ಒಕ್ಕೂಟದೊಂದಿಗೆ ಕೈಜೋಡಿಸಿದರೆ (ಇಬ್ಬರೂ ಎನ್‌ಡಿಎ ಜೊತೆ ಸೇರುವುದಾಗಿ ಈಗಾಗಲೇ ಘೋಷಿಸಿದ್ದಾರೆ) ಅದರ ಸಂಖ್ಯೆ 262 ತಲುಪುತ್ತದೆ. ಇಂಡಿಯಾ ಕೂಟಕ್ಕೆ ಇನ್ನೂ 10 ಸಂಸದರ ಅಗತ್ಯವಿದೆ. ಈ ಸಂದರ್ಭದಲ್ಲಿ ಪಕ್ಷೇತರರ ಬೆಂಬಲ ಅಗತ್ಯವಾಗುತ್ತದೆ.
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ