ಕುಮಾರಸ್ವಾಮಿಗೆ ಅಮಿತ್​ ಶಾ ಬುಲಾವ್: ನಾಳೆ ದೆಹಲಿಗೆ ಬರುವಂತೆ ಸೂಚನೆ

|

Updated on: Jun 04, 2024 | 4:54 PM

ಬುಧವಾರ ಎನ್​ಡಿಎ ಸಭೆ ನಡೆಯಲಿದೆ. ಅದರಲ್ಲಿ ಹಾಜರಾಗುವಂತೆ ಕುಮಾರಸ್ವಾಮಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಗೆದ್ದ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಕುಮಾರಸ್ವಾಮಿಗೆ ಅಮಿತ್​ ಶಾ ಬುಲಾವ್: ನಾಳೆ ದೆಹಲಿಗೆ ಬರುವಂತೆ ಸೂಚನೆ
ಕುಮಾರಸ್ವಾಮಿ & ಅಮಿತ್​ ಶಾ
Follow us on

ಬೆಂಗಳೂರು, ಜೂನ್ 4: ಲೋಕಸಭೆ ಚುನಾವಣೆ ಫಲಿತಾಂಶದ (Lok Sabha Eelection Result) ಬೆನ್ನಲ್ಲೇ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿಗೆ (HD Kumaraswamy) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ದೂರವಾಣಿ ಕರೆ ಮಾಡಿದ್ದು, ಬುಧವಾರ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಬುಧವಾರ ಎನ್​ಡಿಎ ಸಭೆ ನಡೆಯಲಿದೆ. ಅದರಲ್ಲಿ ಹಾಜರಾಗುವಂತೆ ಕುಮಾರಸ್ವಾಮಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಗೆದ್ದ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಇಷ್ಟೇ ಅಲ್ಲದೆ, ಎನ್​ಡಿಎ ಸಣ್ಣ ಮಿತ್ರ ಪಕ್ಷಗಳ ನಾಯಕರಿಗೆ ಅಮಿತ್ ಶಾ ಫೋನ್ ಕರೆ ಮಾಡಿದ್ದಾರೆ. ಬಿಹಾರದ ಸಣ್ಣ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಹಿಂದೂಸ್ತಾನಿ ಅವಾಮಿ ಮೋರ್ಚಾ ಅಧ್ಯಕ್ಷ ಜಿತಿನ್ ರಾಮ್ ಮಾಂಝಿ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಜೊತೆ ಚರ್ಚೆ ಮಾಡಿದ್ದಾರೆ. ಎನ್​ಡಿಎ ಜೊತೆ ಗಟ್ಟಿಯಾಗಿ ನಿಲ್ಲುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ.

ಸಂಜೆ 7 ಗಂಟೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಬಳಿಕ ನಾಳೆ ಎನ್​​ಡಿಎ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಎನ್​ಡಿಎ ಸಂಚಾಲಕರಾಗಲು ನಾಯ್ಡುಗೆ ಆಹ್ವಾನ

ಈ ಮಧ್ಯೆ, ಆಂಧ್ರ ಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕಿಂಗ್​ಮೇಕರ್​ ಆಗಿ ಹೊರಹೊಮ್ಮಿದ್ದಾರೆ. ಇದೀಗ ಎನ್​ಡಿಎ ಸಂಚಾಲಕರಾಗುವಂತೆ ಚಂದ್ರಬಾಬು ನಾಯ್ಡುಗೆ ಬಿಜೆಪಿಯಿಂದ ದೊಡ್ಡ ಆಫರ್ ದೊರೆತಿದೆ. ಆಂಧ್ರದಲ್ಲಿ 16 ಸ್ಥಾನಗಳಲ್ಲಿ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದ್ದು ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

ಈ ಮಧ್ಯೆ, ಸರ್ಕಾರ ರಚಿಸಲು ಇಂಡಿಯಾ ಮೈತ್ರಿಕೂಟ ಕೂಡ ಸರ್ಕಸ್ ಆರಂಭಿಸಿದೆ. ಜೆಡಿಯು ನಾಯಕ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಜೊತೆ ಮಾತುಕತೆಗೆ ಮುಂದಾಗಿದೆ. ಈ ಇಬ್ಬರು ನಾಯಕರ ಜತೆ ಶರದ್ ಪವಾರ್ ಈಗಾಗಲೇ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಿಂಗ್​ಮೇಕರ್​​ಗಳ ಜತೆ ಶರದ್ ಪವಾರ್ ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ನಿತೀಶ್, ನಾಯ್ಡು ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಇಬ್ಬರೂ ನಾಯಕರ ಜೊತೆ ಅಮಿತ್ ಶಾ ಕೂಡ ಸಂಪರ್ಕದಲ್ಲಿದ್ದಾರೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ