ಈ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆದವರು… ನಿರೀಕ್ಷೆ ಹುಟ್ಟಿಸಿದವರು, ಹುಸಿಗೊಳಿಸಿದವರು…

Lok Sabha Elections 2024, surprising results: 2024ರ ಲೋಕಸಭಾ ಚುನಾವಣೆಯಲ್ಲಿ ಹಲವು ಅಚ್ಚರಿಯ ಫಲಿತಾಂಶಗಳನ್ನು ಕಾಣಬಹುದು. ರಾಹುಲ್ ಗಾಂಧಿ ಡಬಲ್ ಗೆಲುವಿನಿಂದ ಹಿಡಿದು ಕೇರಳದಲ್ಲಿ ಸೂಪರ್ ಸ್ಟಾರ್ ಸುರೇಶ್ ಗೋಪಿಯಿಂದ ಬಿಜೆಪಿಗೆ ಚೊಚ್ಚಲ ಗೆಲುವಿನವರೆಗೂ ಅನಿರೀಕ್ಷಿತ ಅಚ್ಚರಿಗಳಿವೆ. ಸ್ಮೃತಿ ಇರಾನಿ, ಅಣ್ಣಾಮಲೈ, ರಾಜೀವ್ ಚಂದ್ರಶೇಖರ್ ಮೊದಲಾದವರು ನಿರೀಕ್ಷೆ ಹುಟ್ಟಿಸಿ ಸೋತಿದ್ದಾರೆ. ಇಂಥ ವ್ಯಕ್ತಿಗಳ ವಿವರ ಇಲ್ಲಿದೆ.

ಈ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆದವರು... ನಿರೀಕ್ಷೆ ಹುಟ್ಟಿಸಿದವರು, ಹುಸಿಗೊಳಿಸಿದವರು...
ನರೇಂದ್ರ ಮೋದಿ ಜೊತೆ ಕೆ ಅಣ್ಣಾಮಲೈ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: ವಿವೇಕ ಬಿರಾದಾರ

Updated on:Jun 05, 2024 | 6:42 AM

ನವದೆಹಲಿ, ಜೂನ್ 4: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha elections 2024) ಎನ್​ಡಿಎ ಜೀಕುತ್ತಾ ಜೀಕುತ್ತಾ ಸರಳ ಬಹುಮತ ಪಡೆಯುತ್ತಿದೆ. ಬಿಜೆಪಿ 250 ಸ್ಥಾನ ಗೆಲ್ಲುವ ಸಾಧ್ಯತೆಯೂ ಇಲ್ಲ. ವಿಪಕ್ಷಗಳು ಅಚ್ಚರಿ ರೀತಿಯಲ್ಲಿ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಿವೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಅಚ್ಚರಿಯ ಫಲಿತಾಂಶಗಳು ಚುನಾವಣೆಯಲ್ಲಿ ಕಾಣಸಿಗುತ್ತಿವೆ. ಮತ ಪ್ರಚಾರದ ವೇಳೆ ಬಹಳಷ್ಟು ಅಭ್ಯರ್ಥಿಗಳು ಬೊಬ್ಬರಿಸಿದ್ದರು, ನಿರೀಕ್ಷೆ ಹುಟ್ಟಿಸಿದ್ದರು. ಕೆಲವರು ನಿರೀಕ್ಷೆ ಉಳಿಸಿಕೊಂಡರೆ, ಕೆಲವರು ವಿಫಲರಾಗಿದ್ದಾರೆ. ಅಂಥವರ ಪಟ್ಟಿ ಇಲ್ಲಿದೆ…

ಕೆ ಅಣ್ಣಾಮಲೈ: ತಮಿಳುನಾಡಿನಲ್ಲಿ ಬಿಜೆಪಿ ಅಲೆ ಎಬ್ಬಿಸಲು ಬಹಳ ಶ್ರಮ ವಹಿಸಿದ ಕರ್ನಾಟಕ ಕೇಡರ್​ನ ಮಾಜಿ ಪೊಲೀಸ್ ಅಧಿಕಾರಿಯಾದ ಅಣ್ಣಾಮಲೈ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದಾರೆ. ತಮಿಳುನಾಡಿನಲ್ಲಿ ಕೊಯಮತ್ತೂರು ಸೇರಿದಂತೆ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಇತ್ತು. ಡಿಎಂಕೆಯ ಗಣಪತಿ ರಾಜಕುಮಾರ್ ವಿರುದ್ಧ ಸೋಲುವ ಮುನ್ನ ಅಣ್ಣಾಮಲೈ ಪೈಪೋಟಿ ನೀಡುವಲ್ಲಿ ಸಫಲರಾಗಿದ್ದಾರೆ.

ಸ್ಮೃತಿ ಇರಾನಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ 2019ರಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಗೆದ್ದು ಗಮನ ಸೆಳೆದಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಕುಟುಂಬದ ನಿಷ್ಠಾವಂತರಾದ ಕಿಶೋರಿ ಲಾಲ್ ಎದುರು ಸೋತಿದ್ದಾರೆ. ಇದು ಅನಿರೀಕ್ಷಿತವಾಗಿತ್ತು. ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಎದ್ದ ಸಣ್ಣ ಅಲೆಯಲ್ಲಿ ಇರಾನಿ ಕೊಚ್ಚಿಹೋದಂತಿದೆ.

ಡಿಕೆ ಸುರೇಶ್/ ಡಾ. ಮಂಜುನಾಥ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಡಿಕೆ ಸುರೇಶ್ ವಿರುದ್ಧ ಡಾ. ಮಂಜುನಾಥ್ ಜಯಭೇರಿ ಭಾರಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಏಕೈಕ ಅಭ್ಯರ್ಥಿ ಡಿಕೆ ಸುರೇಶ್ ಅವರಾಗಿದ್ದರು. ಈ ಬಾರಿ ದೇವೇಗೌಡರ ಅಳಿಯನ ಎದುರು ಸೋಲುಂಡಿದ್ದಾರೆ.

ಇದನ್ನೂ ಓದಿ: ಮೊದಲ ಚುನಾವಣೆಯಲ್ಲೇ ಭರ್ಜರಿ ಜಯ ಕಂಡ ಕಂಗನಾ ರಣಾವತ್; ಮೋದಿ ಹೆಸರಿಂದಲೇ ಈ ಗೆಲುವು ಎಂದ ನಟಿ

ಶಶಿ ತರೂರ್/ ರಾಜೀವ್ ಚಂದ್ರಶೇಖರ್: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೊದಲ ಬಾರಿಗೆ ನೇರ ಚುನಾವಣೆಗೆ ಕಣಕ್ಕಿಳಿದಿದ್ದರು. ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಹುತೇಕ ಕೊನೆಯ ಸುತ್ತುಗಳವರೆಗೂ ಅವರೇ ಮುನ್ನಡೆಯಲ್ಲಿದ್ದರು. ಕಾಂಗ್ರೆಸ್​ನ ಪ್ರಬಲ ಅಭ್ಯರ್ಥಿ ಶಶಿ ತರೂರ್ ಅಂತಿಮವಾಗಿ ಗೆಲುವನ್ನು ತಮ್ಮೊಂದಿಗೆ ಉಳಿಸಿಕೊಂಡರು.

ಸುರೇಶ್ ಗೋಪಿ: ಮಾಲಿವುಡ್​ನ ಸೂಪರ್ ಸ್ಟಾರ್​ಗಳಲ್ಲಿ ಒಬ್ಬರಾದ ಸುರೇಶ್ ಗೋಪಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ಗೆಲುವು ಸಾಧಿಸಿದ್ದಾರೆ. ಕೇರಳ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಸಂಸದರೊಬ್ಬರು ಲೋಕಸಭೆಗೆ ಹೋಗಲಿದ್ದಾರೆ.

ರಾಹುಲ್ ಗಾಂಧಿ: 2019ರಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಸೋತಿದ್ದರು. ವಯನಾಡ್​ನಿಂದ ಗೆದ್ದಿದ್ದರು. ಈ ಬಾರಿ ಅವರು ವಯನಾಡ್ ಜೊತೆಗೆ ರಾಯ್ ಬರೇಲಿಯಲ್ಲೂ ಸ್ಪರ್ಧಿಸಿದ್ದರು. ಎರಡರಲ್ಲೂ ಅವರು ಭಾರೀ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.

ಪ್ರಕಾಶ್ ಅಂಬೇಡ್ಕರ್: ಸಂವಿಧಾನ ಶಿಲ್ಪಿ ಎಂದು ಹೆಸರಾದ ಡಾ. ಭೀಮರಾವ್ ಅಂಬೇಡ್ಕರ್ ಅವರ ಮೊಮ್ಮಗನಾದ ಪ್ರಕಾಶ್ ಅಂಬೇಡ್ಕರ್ ಅವರು ಮಹಾರಾಷ್ಟ್ರದ ಅಕೋಲಾ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಅವರು ಗೆಲ್ಲುವ ನಿರೀಕ್ಷೆ ಇರಲಿಲ್ಲ ಎನ್ನುವುದೂ ಕೂಡ ನಿಜವೇ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ರನ್ನರ್ ಅಪ್ ಆಗಿದೆ.

ಇದನ್ನೂ ಓದಿ: ಲೋಕಾಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಹಾಲಿ ಸಂಸದರು ಇವರು

ವೈ ಎಸ್ ಶರ್ಮಿಳಾ ರೆಡ್ಡಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿ ಅವರ ಪುತ್ರಿ ಹಾಗೂ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಸೋದರಿಯಾದ ವೈ ಎಸ್ ಶರ್ಮಿಳಾ ರೆಡ್ಡಿ ಕಡಪ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಇಲ್ಲಿ ಅವರು ಗೆಲ್ಲುವ ನಿರೀಕ್ಷೆ ಇತ್ತು.

ಡಿ ಪುರಂದೇಶ್ವರಿ: ಮಾಜಿ ಸಿಎಂ ಎನ್ ಟಿ ರಾಮರಾವ್ ಅವರ ಮಗಳಾದ ದುಗ್ಗುಬಾಟಿ ಪುರಂದೇಶ್ವರಿ ಈ ಬಾರಿ ಆಂಧ್ರದಲ್ಲಿ ಗೆದ್ದ ಮೂವರು ಬಿಜೆಪಿ ಅಭರ್ಥಿಗಳ ಪೈಕಿ ಒಬ್ಬರು.

ಯೂಸುಫ್ ಪಠಾಣ್/ಅಧೀರ್ ರಂಜನ್ ಚೌಧರಿ: ಕಾಂಗ್ರೆಸ್ ಪಕ್ಷದ ಅಧೀರ್ ರಂಜನ್ ಚೌಧರಿ ಅವರು ಪಶ್ಚಿಮ ಬಂಗಾಳದ ಬಹರಾಮ್​ಪುರ್ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದಾರೆ. ತೃಣಮೂಲ ಕಾಂಗ್ರೆಸ್​ನ ಅಭ್ಯರ್ಥಿಯಾದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಗೆಲುವು ಸಾಧಿಸಿದ್ದಾರೆ.

ಕಂಗಣಾ ರಾಣಾವತ್/ ವಿಕ್ರಮಾದಿತ್ಯ ಸಿಂಗ್: ಹಿಮಾಚಲದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಮಗ ಹಾಗೂ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ಇಲ್ಲಿ ಗೆಲುವು ಸಾಧಿಸಿದ್ದಾರೆ.

ಮನೋಜ್ ತಿವಾರಿ / ಕನ್ಹಯ್ಯ ಕುಮಾರ್: ನಾರ್ತ್ ಈಸ್ಟ್ ಡೆಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗು ಜೆಎನ್​ಯು ಸ್ಟಾರ್ ಕನ್ಹಯ್ಯ ಕುಮಾರ್ ಗೆಲ್ಲಬಹುದು ಎಂದು ಕೆಲವರು ನಿರೀಕ್ಷಿಸಿದ್ದರು. ಆದರೆ, ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಬಿಜೆಪಿ ಪರ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಫಲಿತಾಂಶ: ಗೆದ್ದು ಇತಿಹಾಸ ನಿರ್ಮಿಸಿದ ಶಾಂಭವಿ ಚೌಧರಿ, ಎನ್​ಡಿಎ ಅಭ್ಯರ್ಥಿ ಈಗ ದೇಶದ ಅತಿ ಕಿರಿಯ ಸಂಸದೆ

ಬಾನ್ಸುರಿ ಸ್ವರಾಜ್ / ಸೋಮನಾಥ್ ಭಾರ್ತಿ: ಆಮ್ ಆದ್ಮಿಯ ಸ್ಟಾರ್ ಅಭ್ಯರ್ಥಿಯಾದ ಸೋಮನಾಥ್ ಭಾರ್ತಿ ಅವರನ್ನು ಬಿಜೆಪಿಯ ಬಾನ್ಸುರಿ ಸ್ವರಾಜ್ ಸೋಲಿಸಿದ್ದಾರೆ. ಮಾಜಿ ಸಚಿವೆ, ದಿವಂಗತೆ ಸುಷ್ಮಾ ಸ್ವರಾಜ್ ಪುತ್ರಿ ಈ ಬಾನ್ಸುರಿ.

ಪ್ರಜ್ವಲ್ ರೇವಣ್ಣ/ ಶ್ರೇಯಸ್ ಪಟೇಲ್: ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ತಮ್ಮ ಎರಡನೇ ಚುನಾವಣೆಯಲ್ಲಿ ಸೋತಿದ್ದಾರೆ. ಹಿಂದೆ ಹೊಳೆನರಸೀಪುರದಲ್ಲಿ ದೇವೇಗೌಡರನ್ನೇ ಸೋಲಿಸಿದ್ದ ಜಿ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಕಾಂಗ್ರೆಸ್ ಟಿಕೆಟ್​ನಲ್ಲಿ ಗೆದ್ದಿದ್ದಾರೆ. ಹೊಳೆನರಸೀಪುರದಲ್ಲಿ ಶ್ರೇಯಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ರೇವಣ್ಣಗೆ ನಿಕಟ ಪೈಪೋಟಿ ನೀಡಿದ್ದರು.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Tue, 4 June 24

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ