AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಫಲಿತಾಂಶ: ಗೆದ್ದು ಇತಿಹಾಸ ನಿರ್ಮಿಸಿದ ಶಾಂಭವಿ ಚೌಧರಿ, ಎನ್​ಡಿಎ ಅಭ್ಯರ್ಥಿ ಈಗ ದೇಶದ ಅತಿ ಕಿರಿಯ ಸಂಸದೆ

ಜೆಡಿಯು ಸಚಿವ ಅಶೋಕ್ ಕುಮಾರ್ ಚೌಧರಿ ಅವರ ಪುತ್ರಿ ಶಾಂಭವಿ ಚೌಧರಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಶಾಂಭವಿ ಲೋಕಸಭೆ ಚುನಾವಣೆಗೆ ಮುನ್ನ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) ಔಪಚಾರಿಕವಾಗಿ ಸೇರಿದ್ದರು.

ಲೋಕಸಭೆ ಫಲಿತಾಂಶ: ಗೆದ್ದು ಇತಿಹಾಸ ನಿರ್ಮಿಸಿದ ಶಾಂಭವಿ ಚೌಧರಿ, ಎನ್​ಡಿಎ ಅಭ್ಯರ್ಥಿ ಈಗ ದೇಶದ ಅತಿ ಕಿರಿಯ ಸಂಸದೆ
ಶಾಂಭವಿ ಚೌಧರಿ
Ganapathi Sharma
|

Updated on: Jun 04, 2024 | 4:13 PM

Share

ಪಟ್ನಾ, ಜೂನ್ 4: ಲೋಕಸಭೆ ಚುನಾವಣೆ ಫಲಿತಾಂಶಗಳು (Lok Sabha result) ಪ್ರಕಟವಾಗುತ್ತಿದ್ದು, ಉತ್ತರ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ (NDA Candidate) ಶಾಂಭವಿ ಚೌಧರಿ (Shambhavi Choudhary) ಗೆಲುವು ಸಾಧಿಸಿದ್ದಾರೆ. ಈ ಮೂಲಕ ದೇಶದ ಅತ್ಯಂತ ಕಿರಿಯ ಸಂಸದರಾಗಿ ಹೊರಹೊಮ್ಮಿದ್ದು, ಇತಿಹಾಸ ಸೃಷ್ಟಿಸಿದ್ದಾರೆ. ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡವಿಟ್ ಪ್ರಕಾರ ಚೌಧರಿ ವಯಸ್ಸು ಕೇವಲ 25 ವರ್ಷ.

ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಹಿರಿಯ ಜೆಡಿಯು ಸಚಿವ ಅಶೋಕ್ ಕುಮಾರ್ ಚೌಧರಿ ಅವರ ಪುತ್ರಿ ಶಾಂಭವಿ ಚೌಧರಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಮೀಸಲು ಕ್ಷೇತ್ರದಿಂದ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಸನ್ನಿ ಹಜಾರಿ ವಿರುದ್ಧ ಸುಮಾರು ಒಂದು ಲಕ್ಷ ಮತಗಳ ಅಂತರದಿಂಧ ಗೆಲುವು ಸಾಧಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸನ್ನಿ ಅವರನ್ನು ಕಣಕ್ಕಿಳಿಸಲಾಗಿತ್ತು. ಲೋಕಸಭೆ ಚುನಾವಣೆಗೂ ಮುನ್ನ ಅವರು ಮಾತೃ ಪಕ್ಷವನ್ನು ಸೇರಿದ್ದರು. ಆದರೆ, ರಾಜಕೀಯ ಹಿತಾಸಕ್ತಿಗಳ ಭಿನ್ನಾಭಿಪ್ರಾಯದಿಂದಾಗಿ ಅವರ ತಂದೆ ಮಹೇಶ್ವರ್ ಹಜಾರಿ (ಇವರು ಜೆಡಿಯು ನಾಯಕರು) ಸನ್ನಿ ಪರವಾಗಿ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ.

ಮಹೇಶ್ವರ್ ಜೆಡಿಯು ಸಚಿವರಾಗಿದ್ದು, ಅವರ ಮಗ ಆಪ್ ಐಎನ್‌ಸಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಶಾಂಭವಿ ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ಅವರ ಸೊಸೆಯಾಗಿದ್ದಾರೆ. ಕುನಾಲ್ ಅವರು ಅಯೋಧ್ಯೆ ರಾಮ ಮಂದಿರ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕುನಾಲ್ ಪಟ್ನಾದ ಮಹಾವೀರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರೂ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಾಂಭವಿ ಪರವಾಗಿ ಪ್ರಚಾರ ಮಾಡಿದ್ದರು.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಾಂಭವಿ ಲೋಕಸಭೆ ಚುನಾವಣೆಗೆ ಮುನ್ನ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) ಔಪಚಾರಿಕವಾಗಿ ಸೇರಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಸಮಸ್ತಿಪುರ ಕ್ಷೇತ್ರವನ್ನು ಮಾಜಿ ಸಂಸದ ರಾಮಚಂದ್ರ ಪಾಸ್ವಾನ್ ಅವರ ಪುತ್ರ ಎಲ್‌ಜೆಪಿ ಅಭ್ಯರ್ಥಿ ಪ್ರಿನ್ಸ್ ರಾಜ್ ಗೆದ್ದಿದ್ದರು.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ