Lok Sabha Election Results: ಇಂದು ಲೋಕಸಭಾ ಚುನಾವಣೆ ಮತ ಎಣಿಕೆ; ಫಲಿತಾಂಶ ನೋಡೋದು ಹೇಗೆ?

|

Updated on: Jun 04, 2024 | 6:32 AM

Lok Sabha Election Vote Counting: ಕಳೆದ ಒಂದೂವರೆ ತಿಂಗಳಿಂದ 7 ಹಂತಗಳಲ್ಲಿ ನಡೆದಿರುವ ಲೋಕಸಭಾ ಚುನಾವಣೆ ಫಲಿತಾಂಶ ಇಂದು (ಜೂ. 4) ಹೊರಬೀಳಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಯಾವ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾನೆ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ.

Lok Sabha Election Results: ಇಂದು ಲೋಕಸಭಾ ಚುನಾವಣೆ ಮತ ಎಣಿಕೆ; ಫಲಿತಾಂಶ ನೋಡೋದು ಹೇಗೆ?
ಲೋಕಸಭೆ ಚುನಾವಣೆಯ ಮತ ಎಣಿಕೆ
Follow us on

ನವದೆಹಲಿ: ಇಂದು (ಮಂಗಳವಾರ) ನಡೆಯಲಿರುವ ಲೋಕಸಭಾ ಚುನಾವಣೆಯ (Lok Sabha Elections 2024) ಮತ ಎಣಿಕೆಯ (Vote Counting) ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇಂದು ಮಧ್ಯಾಹ್ನದ ವೇಳೆಗೆ ಯಾರಿಗೆ ಬಹುಮತ ಸಿಗುತ್ತದೆ ಎಂಬುದರ ನಿಖರ ಮಾಹಿತಿ ಸಿಗಲಿದೆ. 543 ಸದಸ್ಯರಿರುವ ಲೋಕಸಭೆಗೆ (ಸೂರತ್ ಮತ್ತು ಇಂದೋರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಯಿತು) ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಿತು.

ಏಪ್ರಿಲ್ 19 (ಹಂತ 1), ಏಪ್ರಿಲ್ 26 (ಹಂತ 2), ಮೇ 7 (ಹಂತ 3), ಮೇ 13 (ಹಂತ 4), ಮೇ 20 (ಹಂತ 5), ಮೇ 25 (ಹಂತ 6), ಮತ್ತು ಜೂನ್ 1 (ಹಂತ 7)ದ ಚುನಾವಣೆ ನಡೆದಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಎಲ್ಲಿ ಪರಿಶೀಲಿಸಬೇಕು?:

ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್​ನಲ್ಲಿ ಮತ ಎಣಿಕೆಯ ಫಲಿತಾಂಶಗಳನ್ನು ನೋಡಬಹುದು. ಇವುಗಳು https://results.eci.gov.in/ ನಲ್ಲಿ ಮತ್ತು iOS ಮತ್ತು Android ಮೊಬೈಲ್​ಗಳಿಗೆ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ: LS Election 2024 Result day holiday: ಜೂನ್ 4ಕ್ಕೆ ಚುನಾವಣಾ ಫಲಿತಾಂಶ; ಅಂದು ಇದೆಯಾ ರಜೆ?

ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?:

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುವವರಿಗೆ, ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ವಿವಿಧ ಸುದ್ದಿ ಚಾನೆಲ್‌ಗಳ ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಟಿವಿ9 ಸೇರಿದಂತೆ ಎಲ್ಲ ಸುದ್ದಿ ವಾಹಿನಿಗಳು ಮುಂಜಾನೆಯಿಂದಲೇ ಸುದ್ದಿಗಳ ನೇರಪ್ರಸಾರ ಮಾಡುತ್ತವೆ. ಟಿವಿ9 ವೆಬ್​ಸೈಟ್​ನಲ್ಲಿಯೂ ಲೈವ್​ ಅಪ್​ಡೇಟ್​ಗಳನ್ನು ವೀಕ್ಷಿಸಬಹುದು.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ 2019ರಲ್ಲಿ 352 ಸ್ಥಾನಗಳನ್ನು ಗಳಿಸಿದ ದಾಖಲೆಗಿಂತ ತನ್ನ ಸಾಧನೆಯನ್ನು ಸುಧಾರಿಸಲು ಸಜ್ಜಾಗಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ರಿಸಲ್ಟ್​ಗೆ ಒಂದು ದಿನ ಇರುವಾಗಲೇ ಡಾ.ಸುಧಾಕರ್​ ವಿರುದ್ಧ ಕೇಸ್ ಬುಕ್

ಮೂವಿಮ್ಯಾಕ್ಸ್ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಮುಂಬೈ ಸೇರಿದಂತೆ ಮಹಾರಾಷ್ಟ್ರದ ತನ್ನ ಥಿಯೇಟರ್‌ಗಳಲ್ಲಿ ಲೈವ್ ಆಗಿ ಪ್ರದರ್ಶಿಸುತ್ತದೆ. ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುವ “ಚುನಾವಣಾ ಫಲಿತಾಂಶಗಳು 2024” ಎಂಬ 6 ಗಂಟೆಗಳ ಅವಧಿಯ ಪ್ರದರ್ಶನಕ್ಕಾಗಿ ಪೇಟಿಎಂನಲ್ಲಿ ಬುಕ್ಕಿಂಗ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ.

ಲೋಕಸಭೆಯ ಎಲ್ಲಾ 543 ಸದಸ್ಯರನ್ನು ಆಯ್ಕೆ ಮಾಡಲು 7 ಹಂತಗಳಲ್ಲಿ ಏಪ್ರಿಲ್ 19ರಿಂದ ಜೂನ್ 1ರವರೆಗೆ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಯಿತು. ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಎಣಿಕೆಯ ಫಲಿತಾಂಶಗಳು ECI ವೆಬ್‌ಸೈಟ್‌ನಲ್ಲಿ results.eci.gov.in ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಿಂದ ಕ್ಷೇತ್ರವಾರು ಅಥವಾ ರಾಜ್ಯವಾರು ಫಲಿತಾಂಶಗಳ ಜೊತೆಗೆ ವಿಜೇತ ಅಥವಾ ಮುಂಚೂಣಿಯಲ್ಲಿರುವ ಅಥವಾ ಹಿಂದುಳಿದ ಅಭ್ಯರ್ಥಿಗಳ ವಿವರಗಳನ್ನು ಕಂಡುಹಿಡಿಯಲು ಬಳಕೆದಾರರು ಲಭ್ಯವಿರುವ ಫಿಲ್ಟರ್ ಅನ್ನು ಬಳಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ