AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆ ರಿಸಲ್ಟ್​ಗೆ ಒಂದು ದಿನ ಇರುವಾಗಲೇ ಡಾ.ಸುಧಾಕರ್​ ವಿರುದ್ಧ ಕೇಸ್ ಬುಕ್

ರಾಜ್ಯ ಸರ್ಕಾರದ ಚಿಹ್ನೆ ಇರುವ ಲೆಟರ್ ಹೆಡ್​ನಲ್ಲಿ ಚುನಾವಣಾ ಆಯುಕ್ತರು ಮತ್ತು ಬೆಂಗಳೂರು ವಿಭಾಗಕ್ಕೆ ಪತ್ರ ವ್ಯವಹಾರ ಮಾಡಿದ್ದಕ್ಕೆ ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್​ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಲೋಕಸಭಾ ಚುನಾವಣೆ ರಿಸಲ್ಟ್​ಗೆ ಒಂದು ದಿನ ಇರುವಾಗಲೇ ಡಾ.ಸುಧಾಕರ್​ ವಿರುದ್ಧ ಕೇಸ್ ಬುಕ್
ಲೋಕಸಭಾ ಚುನಾವಣೆ ರಿಸಲ್ಟ್​ಗೆ ಒಂದು ದಿನ ಇರುವಾಗಲೇ ಡಾ.ಸುಧಾಕರ್​ ವಿರುದ್ಧ ಕೇಸ್ ಬುಕ್
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jun 03, 2024 | 7:18 PM

Share

ಚಿಕ್ಕಬಳ್ಳಾಪುರ, ಜೂನ್​​ 03: ಚುನಾವಣೆ ವೇಳೆ ರಾಜ್ಯ ಸರ್ಕಾರದ ಲೇಟರ್ ಹೆಡ್ ದುರ್ಬಳಕೆ ಆರೋಪಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ (K Sudhakar) ವಿರುದ್ಧ ನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ (code of conduct) ದಾಖಲಾಗಿದೆ. ರಾಜ್ಯ ಸರ್ಕಾರದ ಚಿಹ್ನೆ ಇರುವ ಲೆಟರ್​ ಹೆಡ್​ನಲ್ಲಿ ಚುನಾವಣಾ ಆಯುಕ್ತರು, ಬೆಂಗಳೂರು ವಿಭಾಗಕ್ಕೆ ಪತ್ರ ವ್ಯವಹಾರ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಕೆಮಾಡಿರುವುದರಿಂದ ಈ ಬಗ್ಗೆ, ಸದರಿಯವರ ವಿರುದ್ಧ ಪೋಲೀಸ್ ಅಧಿಕಾರಿಗಳ ಮೂಲಕ ಮಾಜಿ ಸಚಿವ ಡಾ. ಕೆ.ಸುಧಾಕರ್ ರವರ ವಿರುದ್ಧ ಉಲ್ಲೇಖ ರೀತಾ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲಾ ಚುನಾವಣಾಧಿಕಾರಿಗಳು ಸೂಚಿಸಿ ಪತ್ರವನ್ನು ರವಾನಿಸಿಕೊಂಡಿರುತ್ತಾರೆ.

ಇದನ್ನೂ ಓದಿ: ಲೋಕಸಭಾ ರಿಸಲ್ಟ್ ವೇಳೆ ಸಮಸ್ಯೆ ನಿವಾರಣೆಗೆ ಟಾಸ್ಕ್​ ಫೋರ್ಸ್ ರಚಿಸಿದ ಕಾಂಗ್ರೆಸ್

ಏಪ್ರಿಲ್​ 2ರಂದು ಹಿಂದೆ ಚುನಾವಣೆ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಡಾ. ಕೆ.ಸುಧಾಕರ್​ ತಮ್ಮ ಕಚೇರಿ, ಮನೆಯಲ್ಲಿ (ಸ್ಪಷ್ಟವಾಗಿ ವಿಳಾಸ ತಿಳಿದುಬಂದಿರುವುದಿಲ್ಲ) ಲೆಟರ್ ಹೆಡ್​ನಲ್ಲಿ ಚುನಾವಣಾ ಆಯುಕ್ತರು, ಬೆಂಗಳೂರು ವಿಭಾಗ ರವರಿಗೆ ಪತ್ರ ವ್ಯವಹಾರ ಮಾಡಿದ್ದು, ಸದರಿ ಲೆಟರ್ ಹೆಡ್​ನಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಕೆಮಾಡಿರುವುದಾಗಿ ಕಂಡ ಪತ್ರದಲ್ಲಿ ನಮೂದಿಸಿದೆ.

ಇದನ್ನೂ ಓದಿ: ಎಕ್ಸಿಟ್ ಪೋಲ್ ಗಳು ಗೊಂದಲ ಸೃಷ್ಟಿಸಿವೆ, ಅವಸರ ಯಾಕೆ? ನಾಳೆ ಮಧ್ಯಾಹ್ನ ಎಲ್ಲ ಗೊತ್ತಾಗಲಿದೆ: ಸತೀಶ್ ಜಾರಕಿಗೊಳಿ

ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಸಿರುವ the Emblem and Names (Prevention of Improper use) Act-1950. 03 of the state Emblem of India (Provibition of Improper use) Act-2005, 5, 500, 170, 171, 171(f), 260, 481 ಐಪಿಎಸ್​ರಡಿ ಡಾ. ಕೆ.ಸುಧಾಕರ್ ರವರ ವಿರುದ್ಧ ಕಾನೂನು ರೀತಾ ಕ್ರಮ ಕೈಗೊಳ್ಳಲು ಕೋರಿ ದೂರು ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:06 pm, Mon, 3 June 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ