Lok Sabha Elections 2024: ಇಂದು ಅಂತಿಮ ಹಂತದ ಲೋಕಸಭೆ ಚುನಾವಣೆ; 57 ಕ್ಷೇತ್ರಗಳಲ್ಲಿ ಮತದಾನ

ಸುಮಾರು 80 ದಿನಗಳ ಪ್ರಚಾರದ ನಂತರ ಲೋಕಸಭೆ ಚುನಾವಣೆಯ ಮತದಾನ ಇಂದು (ಶನಿವಾರ) ಮುಕ್ತಾಯವಾಗಲಿದ್ದು, 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. 1951-52ರ ಮೊದಲ ಲೋಕಸಭಾ ಚುನಾವಣೆಯ ನಂತರ ಇದು ಎರಡನೇ ಅತಿ ದೀರ್ಘವಾದ ಸಂಸತ್ ಚುನಾವಣೆಯಾಗಿದೆ.

Lok Sabha Elections 2024: ಇಂದು ಅಂತಿಮ ಹಂತದ ಲೋಕಸಭೆ ಚುನಾವಣೆ; 57 ಕ್ಷೇತ್ರಗಳಲ್ಲಿ ಮತದಾನ
ಲೋಕಸಭೆ ಚುನಾವಣೆ
Follow us
ಸುಷ್ಮಾ ಚಕ್ರೆ
|

Updated on: Jun 01, 2024 | 6:51 AM

ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Polls 7th Phase)  7ನೇ ಮತ್ತು ಅಂತಿಮ ಹಂತವು ಇಂದು (ಜೂನ್ 1) ನಡೆಯಲಿದೆ. ಈ 7ನೇ ಹಂತದಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢದಲ್ಲಿ ಮತದಾನ ನಡೆಯಲಿದೆ. ಈ 57 ಕ್ಷೇತ್ರಗಳಲ್ಲಿ ಒಟ್ಟು 904 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮತದಾನ ಮುಗಿದ ನಂತರ, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಕ್ಸಿಟ್ ಪೋಲ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇಂದು ಅಂತ್ಯದ ವೇಳೆಗೆ, ಪಂಜಾಬ್‌ನ ಎಲ್ಲಾ 13 ಸ್ಥಾನಗಳಲ್ಲಿ ಮತ್ತು ಹಿಮಾಚಲ ಪ್ರದೇಶದ ಎಲ್ಲಾ 4 ಸ್ಥಾನಗಳಲ್ಲಿ ಒಂದೇ ಬಾರಿಗೆ ಮತದಾನ ಪೂರ್ಣಗೊಳ್ಳಲಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎಲ್ಲಾ 7 ಹಂತಗಳಲ್ಲಿ ಮತದಾನ ನಡೆಯಿತು. ಜಾರ್ಖಂಡ್ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆಗಳು ಸಹ ಏಕಕಾಲದಲ್ಲಿ ನಡೆಯುತ್ತಿವೆ.

ಇದನ್ನೂ ಓದಿ: Lok Sabha Election 2024 Exit poll date: ಲೋಕಸಭಾ ಚುನಾವಣೆ, ಎಕ್ಸಿಟ್ ಪೋಲ್ ಜೂನ್ 1ಕ್ಕೆ; ಸಮಯ, ನೇರ ಪ್ರಸಾರ ಇತ್ಯಾದಿ ವಿವರ

2019ರಲ್ಲಿ ಆಪ್ ಇಂಡಿಯ ಬ್ಲಾಕ್ ಮತ್ತು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಈ 57 ಸ್ಥಾನಗಳಲ್ಲಿ ಕ್ರಮವಾಗಿ 19 ಮತ್ತು 30 ಸ್ಥಾನಗಳನ್ನು ಗೆದ್ದವು. ಈ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಗೆಲುವು ಸಾಧಿಸಿದೆ. ಇಂಡಿಯ ಬ್ಲಾಕ್ ಸದಸ್ಯರ ಪೈಕಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ಕ್ರಮವಾಗಿ 9 ಮತ್ತು 8 ಸ್ಥಾನಗಳನ್ನು ಗಳಿಸಿವೆ. ಒಡಿಶಾದಲ್ಲಿ ಬಿಜು ಜನತಾ ದಳ (BJD) 8 ಸ್ಥಾನಗಳನ್ನು ಗೆದ್ದಿದೆ, ಬಹುಜನ ಸಮಾಜ ಪಕ್ಷ (BSP) ಯುಪಿಯಲ್ಲಿ 2 ಮತ್ತು ಶಿರೋಮಣಿ ಅಕಾಲಿ ದಳ (SAD) ಪಂಜಾಬ್‌ನಲ್ಲಿ 2 ಸ್ಥಾನಗಳನ್ನು ಗೆದ್ದಿದೆ.

ಮತ ಹಂಚಿಕೆಗೆ ಸಂಬಂಧಿಸಿದಂತೆ, 2019ರಲ್ಲಿ ಇಂಡಿಯ ಬ್ಲಾಕ್ ಪಕ್ಷಗಳ 37.52% ಮತಗಳಿಗೆ ಹೋಲಿಸಿದರೆ NDA ಬಣದ ಪಕ್ಷಗಳು 39.03% ಮತಗಳನ್ನು ಪಡೆದಿವೆ.

ಇಂದು ನಡೆಯುವ ಚುನಾವಣೆಯಲ್ಲಿ 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎಸ್‌ಪಿ 56, ನಂತರದ ಸ್ಥಾನದಲ್ಲಿ ಬಿಜೆಪಿ 51, ಮತ್ತು ಕಾಂಗ್ರೆಸ್ 31 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಂದು ಪಂಜಾಬ್‌ನಾದ್ಯಂತ ಮತದಾನ ನಡೆದಿದ್ದು, ರಾಜ್ಯವು ಈ ಹಂತದಲ್ಲಿ 328 ಅಭ್ಯರ್ಥಿಗಳನ್ನು ಹೊಂದಿದ್ದು, ಉತ್ತರ ಪ್ರದೇಶದಲ್ಲಿ 144 ಅಭ್ಯರ್ಥಿಗಳು ಇದ್ದಾರೆ. ಬಿಹಾರದ 8 ಸ್ಥಾನಗಳಲ್ಲಿ 134 ಮತ್ತು ಪಶ್ಚಿಮ ಬಂಗಾಳದ 9 ಸ್ಥಾನಗಳಲ್ಲಿ 124 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ದೆಹಲಿಯಲ್ಲಿ ಚರ್ಚೆಗೆ ಬಂದ ಕಾಂಗ್ರೆಸ್ ಮುಖಂಡರ ಹೆಸರುಗಳು ಹೀಗಿವೆ

ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ 199 ಅಭ್ಯರ್ಥಿಗಳಲ್ಲಿ ಪಂಜಾಬ್‌ನಲ್ಲಿ 69, ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ 36, ಮತ್ತು ಬಿಹಾರದಲ್ಲಿ 30. ಪಂಜಾಬ್‌ನ ಲುಧಿಯಾನ ಮತ್ತು ಪಟಿಯಾಲ ಕ್ಷೇತ್ರಗಳು ತಲಾ 9 ಪ್ರಕರಣಗಳೊಂದಿಗೆ ಹೆಚ್ಚಿನ ಅಭ್ಯರ್ಥಿಗಳನ್ನು ಹೊಂದಿವೆ. 151 ಅಭ್ಯರ್ಥಿಗಳು ಅಥವಾ ಒಟ್ಟು 17%ರಷ್ಟು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಪ್ರಮುಖ ಪಕ್ಷಗಳಲ್ಲಿ ಬಿಜೆಪಿಯು 23 ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಹೆಚ್ಚಿನ ಅಭ್ಯರ್ಥಿಗಳನ್ನು ಹೊಂದಿದೆ.

ಈ ಹಂತದ 299 ಕೋಟ್ಯಾಧಿಪತಿಗಳ ಪೈಕಿ ಪಂಜಾಬ್‌ನಲ್ಲಿ ಅತಿ ಹೆಚ್ಚು 102, ಉತ್ತರ ಪ್ರದೇಶದಲ್ಲಿ 55, ಮತ್ತು ಬಿಹಾರದಲ್ಲಿ 50 ಅಭ್ಯರ್ಥಿಗಳಿದ್ದಾರೆ. ಪಕ್ಷಗಳ ಪೈಕಿ ಬಿಜೆಪಿಯು ಅತಿ ಹೆಚ್ಚು ಕೋಟ್ಯಾಧಿಪತಿ ಅಭ್ಯರ್ಥಿಗಳನ್ನು ಅಂದರೆ 44 ಅಭ್ಯರ್ಥಿಗಳನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ