Karnataka Lok Sabha Election Results 2024: ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮೋಡಿಗೆ ಅಸಲಿ ಕಾರಣಗಳೇನು?

|

Updated on: Jun 04, 2024 | 4:25 PM

ಕರ್ನಾಟಕದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 19 ಸ್ಥಾನ ಸಿಗುತ್ತಿರುವುದು ಸದ್ಯದ ಅಪ್ ಡೇಟ್. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬಿಜೆಪಿ ಜೆಡಿಸ್ ಮೈತ್ರಿ ಫಲಕೊಟ್ಟಿದೆ. ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಮೈತ್ರಿ ಕಮಾಲ್ ಮಾಡಿದೆ. ಆದರೆ ಕಳೆದ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಹಾಗಿದ್ದರೆ ಎನ್ ಡಿಎ ಮೈತ್ರಿಕೂಟದ ತೃಪ್ತಿದಾಯಕ ಸಾಧನೆಗೆ ಕಾರಣಗಳು ಏನು ಎನ್ನುವುದು ಇಲ್ಲಿದೆ ನೋಡಿ.

Karnataka Lok Sabha Election Results 2024: ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮೋಡಿಗೆ ಅಸಲಿ ಕಾರಣಗಳೇನು?
Follow us on

ಬೆಂಗಳೂರು, (ಜೂನ್ 04): ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು(Lok Sabha Election Results 2024), ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್​ನೊಂದಿಗೆ ಮೈತ್ರಿ (BJP-JDS Alliance) ಮಾಡಿಕೊಂಡಿರುವುದಕ್ಕೆ ಕೊಂಚ ನಿಟ್ಟುಸಿರುಬಿಟ್ಟಂತಾಗಿದೆ. ಹೌದು…ಜೆಡಿಎಸ್​ನೊಂದಿಗಿ ಮೈತ್ರಿಯಿಂದಾಗಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವಲ್ಲಿ ಸಾಧ್ಯವಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ನ ವೋಟ್​ ಬ್ಯಾಂಕ್​ ಆಗಿರುವ ಒಕ್ಕಲಿಗ ಮತಗಳು ಸಾಲಿಡ್ ಆಗಿ ಬಿಜೆಪಿ ಬುಟ್ಟಿಗೆ ಹೋಗಿವೆ. ಹೀಗಾಗಿ ಜೆಡಿಎಸ್​ ತನ್ನ ಇಬ್ಬರು ಅಭ್ಯರ್ಥಿಗಳ ಗೆಲುವಿನೊಂದಿಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದೆ ಎಂದು ಹೇಳಬಹುದು.

ವಿಜಯೇಂದ್ರ ನಾಯಕತ್ವ

ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ತನ್ನ ರಾಜ್ಯ ಕಾರ್ಯಕಾರಣಿಯಲ್ಲಿ ಮಹತ್ವದ ಬದಲಾವಣೆ ಆಡಿತ್ತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಿತ್ತು. ಸಹಜವಾಗಿಯೇ ಪಕ್ಷದ ಒಳಗೆ ಹೊಸ ನೀರು ಹರಿದು ಬಂದು ಕಾರ್ಯಕರ್ತತರಲ್ಲಿ ಹೊಸ ಉತ್ಸಾಹ ಮೂಡಿಸುವಲ್ಲಿ ವಿಜಯೇಂದ್ರ ಯಶ ಕಂಡಿದ್ದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಸೋತು ಲೋಕಸಭೆಯಲ್ಲಿ ಗೆದ್ದು ರಾಜಕೀಯ ಪುನರ್ಜನ್ಮ ಪಡೆದ ರಾಜ್ಯದ ಬಿಜೆಪಿ ನಾಯಕರು

ಸೈಲೆಂಟ್ ಆದ ಬಿಎಲ್ ಸಂತೋಷ್ ಬಣ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಚಾಲ್ತಿಯಲ್ಲಿದ್ದ ಬಿಎಲ್ ಸಂತೋಷ್ ಬಣದ ನಾಯಕರು ಈ ಲೋಕಸಭಾ ಚುನಾವಣೆ ವೇಳೆಗೆ ಸೈಲಂಟ್ ಆಗಿದ್ದರು. ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯ ವೇಳೆಯೂ ಅಂತ ಗೊಂದಲ ಕಂಡುಬರಲಿಲ್ಲ. ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ತೀರ್ಮಾನವೇ ಅಂತಿಮ ಎನ್ನುವ ರೀತಿ ಕಂಡುಬಂದಿತ್ತು. ಕೆಲವು ಕಡೆ ಕೆಲಸ ಮಾಡಿದ ಮೋದಿ ಅಲೆ: ಮೋದಿ ಅಲೆ ಈ ಬಾರಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ಬಂದಿದ್ದರೂ ರಾಜ್ಯದ ಕೆಲವು ಕ್ಷೇತ್ರದಲ್ಲಿ ಮೋದಿ ಅಲೆ ಕೆಲಸ ಮಾಡಿದಂತೆ ಕಂಡಿದೆ. ಅದರ ಪರಿಣಾಮವೇ ಈ ಫಲಿತಾಂಶ. ಹಿಂದುತ್ವದ ಕ್ಷೇತ್ರಗಳು ಎನಿಸಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅಭ್ಯರ್ಥಿಗಳಿಗಿಂತ ಹೆಚ್ಚಿನದಾಗಿ ಮೋದಿ ಅಲೆ ಮತ್ತು ಹಿಂದುತ್ವ ಕೆಲಸ ಮಾಡಿತು.

ಒಂದಾದ ಲಿಂಗಾಯಿತ ಮತ್ತು ಒಕ್ಕಲಿಗ ಮತ

ಈ ಬಾರಿ ಜೆಡಿಎಸ್ ಬಿಜೆಪಿ ಜತೆ ಬಂದಿದ್ದರಿಂದ ಲಿಂಗಾಯಿತ ಮತ್ತು ಒಕ್ಕಲಿಗ ಮತಗಳು ಬಿಜೆಪಿಗೆ ಪ್ಲಸ್ ಆದವು. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಕಡೆ ಹೋಗಿದ್ದ ಒಕ್ಕಲಿಗ ಮತಗಳು ಅದರಲ್ಲಿಯೂ ವಿಶೇಷವಾಗಿ ಹಳೆ ಮೈಸೂರು ಭಾಗದ ಒಕ್ಕಲಿಗ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಎನ್ ಡಿಎ ಮೈತ್ರಿ ಕೂಟ ಯಶಸ್ವಿಯಾಯಿತು.

ಬಂಡಾಯ ಶಮನ: ಟಿಕೆಟ್ ಹಂಚಿಕೆ ನಂತರ ಗೊಂದಲ ಏರ್ಪಟ್ಟರೂ ಬಂಡಾಯ ಶಮನ ಮಾಡುವಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ಯಶಸ್ವಿಯಾದರು. ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಬಂಡಾಯ ಎದ್ದರೂ ಅದರ ಪರಿಣಾಮ ಉಂಟಾಗಲಿಲ್ಲ. ಮಂಡ್ಯದಲ್ಲಿ ಸುಮಲತಾ ತಮ್ಮ ಸ್ಥಾನ ಬಿಟ್ಟುಕೊಟ್ಟರು. ಟಿಕೆಟ್ ಕೈತಪ್ಪಿದ ಮೇಲೆ ಡಿವಿ ಸದಾನಂದ ಗೌಡ ಸೈಲಂಟ್ ಆದರು.

ಕರ್ನಾಟಕದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಮತಗಳು ಬಿಜೆಪಿಗೆ ಒಂದು ಕಡೆ ವರವಾಯಿತು. ಜೆಡಿಎಸ್ ಬಿಜೆಪಿ ಜತೆ ಬಂದಿದ್ದು ಹಳೆ ಮೈಸೂರು ಭಾಗದಲ್ಲಿ ಬಂದಿತು. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಗೆದ್ದಿರುವುದೆ ದೊಡ್ಡ ಉದಾಹರಣೆ.

ಮಧುಸೂದನ ಹೆಗಡೆ, ಶಿರಸಿ

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:21 pm, Tue, 4 June 24