ಪ್ರಧಾನಿ ಚುನಾವಣಾ ಭಾಷಣಗಳಲ್ಲಿ 421 ಬಾರಿ ‘ಮಂದಿರ’, 758 ಬಾರಿ ‘ಮೋದಿ’ ಹೆಸರು ಬಳಕೆ: ಕಾಂಗ್ರೆಸ್

ಇಂಡಿಯಾ ಬಣವು ಚುನಾವಣೆಯಲ್ಲಿ ಗೆದ್ದರೆ ಪ್ರಧಾನ ಮಂತ್ರಿ ಯಾರು ಎಂದು ಕೇಳಿದಾಗ, ಖರ್ಗೆ “ನಮ್ಮಲ್ಲಿ ಮೈತ್ರಿ ಇರುವುದರಿಂದ ನಾವು ಯಾರನ್ನೂ ಪ್ರಧಾನಿಯಾಗಿ ಬಿಂಬಿಸಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಕರೆಯುತ್ತೇವೆ, ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ. ಮೈತ್ರಿಕೂಟದ ನಾಯಕರು ಏನು ಹೇಳುತ್ತಾರೆ ಎಂಬ ಆಧಾರದ ಮೇಲೆ ಪ್ರಧಾನಿಯನ್ನು ನಿರ್ಧರಿಸಲಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಧಾನಿ ಚುನಾವಣಾ ಭಾಷಣಗಳಲ್ಲಿ 421 ಬಾರಿ 'ಮಂದಿರ', 758 ಬಾರಿ 'ಮೋದಿ' ಹೆಸರು ಬಳಕೆ: ಕಾಂಗ್ರೆಸ್
ಮಲ್ಲಿಕಾರ್ಜುನ ಖರ್ಗೆ
Follow us
ರಶ್ಮಿ ಕಲ್ಲಕಟ್ಟ
|

Updated on: May 30, 2024 | 5:43 PM

ದೆಹಲಿ ಮೇ 30 : ಕಳೆದ 15 ದಿನಗಳ ಚುನಾವಣಾ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಭಾಷಣಗಳಲ್ಲಿ 421 ಬಾರಿ ‘ಮಂದಿರ’ (Mandir) ಎಂಬ ಪದ ಮತ್ತು 758 ಬಾರಿ ಮೋದಿ ಹೆಸರು ಬಳಸಿದ್ದಾರೆ. ಅವರು ತಮ್ಮ ಭಾಷಣದಲ್ಲಿ ಮುಸ್ಲಿಂ , ಪಾಕಿಸ್ತಾನ ಮತ್ತು ಅಲ್ಪಸಂಖ್ಯಾತರು ಎಂದ 224 ಬಾರಿ ಹೇಳಿದ್ದು ಒಮ್ಮೆ ಕೂಡ ಹಣದುಬ್ಬರ ಮತ್ತು ನಿರುದ್ಯೋಗವನ್ನು ಉಲ್ಲೇಖಿಸಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

“ನಾವು ಬಿಜೆಪಿಯ ಪ್ರಚಾರ ಮತ್ತು ಪ್ರಧಾನಿ ಅಲ್ಲಿ ಮಾತನಾಡಿದ್ದನ್ನು ನೋಡಿದರೆ ಕಳೆದ 15 ದಿನಗಳಲ್ಲಿ ಅವರು ಕಾಂಗ್ರೆಸ್ ಅನ್ನು 232 ಬಾರಿ ಪ್ರಸ್ತಾಪಿಸಿದ್ದಾರೆ. ಮೋದಿ ಅವರ ಹೆಸರನ್ನು 758 ಬಾರಿ ಪ್ರಸ್ತಾಪಿಸಿದ ಅವರು 573 ಬಾರಿ ಇಂಡಿಯಾ ಮೈತ್ರಿ ಮತ್ತು ವಿರೋಧ ಪಕ್ಷಗಳ ಬಗ್ಗೆ ಮಾತನಾಡಿದರು. ಆದರೆ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ಅವರು ಪ್ರಮುಖ ವಿಷಯಗಳನ್ನು ಬದಿಗಿಟ್ಟು ಪ್ರಚಾರದಲ್ಲಿ ತಮ್ಮ ಬಗ್ಗೆ ಮಾತ್ರ ಮಾತನಾಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಕ್ತಾಯಗೊಳ್ಳುವ ಗಂಟೆಗಳ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಹೇಳಿದ್ದಾರೆ.

ಖರ್ಗೆ ಸುದ್ದಿಗೋಷ್ಠಿ

ಚುನಾವಣಾ ಕಾವಲು ಸಂಸ್ಥೆಯು ಜಾತಿ ಅಥವಾ ಕೋಮುದ ಆಧಾರದ ಮೇಲೆ ಪಕ್ಷಗಳು ಮೇಲ್ಮನವಿ ಸಲ್ಲಿಸುವುದನ್ನು ನಿಷೇಧಿಸಿದ್ದರೂ, ವಿಭಜಕ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ಕಾರ್ಯನಿರ್ವಹಿಸದ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಖರ್ಗೆ ದೂಷಿಸಿದ್ದಾರೆ. ಏತನ್ಮಧ್ಯೆ, ಜೂನ್ 4 ರಂದು ಮತ ಎಣಿಕೆ ವೇಳೆ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

“ನಮಗೆ ವಿಶ್ವಾಸವಿದೆ, ಜನರು ಹೊಸ, ಪರ್ಯಾಯ ಸರ್ಕಾರಕ್ಕೆ ತೀರ್ಪು ನೀಡುತ್ತಾರೆ. ಇಂಡಿಯಾ ಮೈತ್ರಿ ಸರ್ಕಾರ ರಚಿಸಲಿದೆ. ಇದು ಎಲ್ಲರನ್ನೂ ಒಳಗೊಳ್ಳುವ, ರಾಷ್ಟ್ರೀಯವಾದ ಮತ್ತು ಅಭಿವೃದ್ಧಿಶೀಲ ಸರ್ಕಾರವಾಗಿರುತ್ತದೆ ಎಂದು ಖರ್ಗೆ ಹೇಳಿದರು.

ಇಂಡಿಯಾ ಬಣವು ಚುನಾವಣೆಯಲ್ಲಿ ಗೆದ್ದರೆ ಪ್ರಧಾನ ಮಂತ್ರಿ ಯಾರು ಎಂದು ಕೇಳಿದಾಗ, ಖರ್ಗೆ “ನಮ್ಮಲ್ಲಿ ಮೈತ್ರಿ ಇರುವುದರಿಂದ ನಾವು ಯಾರನ್ನೂ ಪ್ರಧಾನಿಯಾಗಿ ಬಿಂಬಿಸಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಕರೆಯುತ್ತೇವೆ, ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ. ಮೈತ್ರಿಕೂಟದ ನಾಯಕರು ಏನು ಹೇಳುತ್ತಾರೆ ಎಂಬ ಆಧಾರದ ಮೇಲೆ ಪ್ರಧಾನಿಯನ್ನು ನಿರ್ಧರಿಸಲಾಗುತ್ತದೆ. ಸಂವಿಧಾನವನ್ನು ರಕ್ಷಿಸಲು ಬಿಜೆಪಿ ಸರ್ಕಾರವನ್ನು ಹೊರಹಾಕಲು ಜನರು ಒಗ್ಗೂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

“ಗಾಂಧೀಜಿ ಅವರು ಅಹಿಂಸೆಯ ರಾಜಕಾರಣವನ್ನು ಮಾಡಿದರು, ದ್ವೇಷವನ್ನಲ್ಲ. ಆದರೆ ಮೋದಿಯವರ ರಾಜಕೀಯ ದ್ವೇಷದಿಂದ ಕೂಡಿದೆ. ನಮ್ಮ ಗಮನ ಎಲ್ಲರ ಕಲ್ಯಾಣದತ್ತ ಆಗಿದೆ. ಧರ್ಮ, ಜಾತಿ, ಮತ, ನಂಬಿಕೆ, ಲಿಂಗ ಭಾಷೆಯ ಭೇದ ಮರೆತು ಸಂವಿಧಾನದ ರಕ್ಷಣೆಗೆ ಕೈಜೋಡಿಸುತ್ತಿರುವ ಜನರಿಗೆ ಈ ಚುನಾವಣೆ ನೆನಪಾಗುತ್ತದೆ. ಪ್ರಧಾನಿ ಮತ್ತು ಬಿಜೆಪಿ ಹಲವು ಸಂದರ್ಭಗಳಲ್ಲಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ. ನಾವು ಸಮಸ್ಯೆಗಳ ಮೇಲೆ ಮತ ಕೇಳಿದ್ದೇವೆ ಎಂದು ಖರ್ಗೆ ಹೇಳಿದರು.

ರಾಷ್ಟ್ರಪಿತನ ಕುರಿತ ಸಿನಿಮಾ ಮಾಡುವ ಮೊದಲು ಜಾಗತಿಕವಾಗಿ ಮಹಾತ್ಮ ಗಾಂಧಿ ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗಳ ಬಗ್ಗೆ ವಾಗ್ದಾಳಿ ನಡೆಸಿದ ಖರ್ಗೆ, ಜೂನ್ 4 ರ ನಂತರ ಮೋದಿ ಮತ್ತು ಇತರ ಬಿಜೆಪಿ ನಾಯಕರಿಗೆ ಗಾಂಧಿ ಬಗ್ಗೆ ಓದುಲು ಸಾಕಷ್ಟು ಸಮಯ ಸಿಗುತ್ತದೆ. ಅವರು ಗಾಂಧೀಜಿಯ ಜೀವನ ಚರಿತ್ರೆ My Experiments with Truth ಓದಬೇಕು ಎಂದಿದ್ದಾರೆ ಖರ್ಗೆ.

ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಲಿದೆ; ಚುನಾವಣಾ ಪ್ರಚಾರ ಮುಕ್ತಾಯಗೊಳಿಸಿದ ಮೋದಿ

“ಪ್ರಧಾನಿ ಅವರಿಗೆ ಮಹಾತ್ಮ ಗಾಂಧಿಯವರ ಕೆಲಸದ ಬಗ್ಗೆ ತಿಳಿದಿಲ್ಲದಿದ್ದರೆ, ಅವರಿಗೆ ಸಂವಿಧಾನದ ಬಗ್ಗೆಯೂ ತಿಳಿದಿಲ್ಲದಿರಬಹುದು. ಗಾಂಧೀಜಿಯವರು ಸ್ವರಾಜ್ಯದ ದೃಷ್ಟಿಯನ್ನು ಹೊಂದಿದ್ದರು.ಅವರು ಸ್ವರಾಜ್ಯಕ್ಕಾಗಿ ಹೋರಾಡಿದರು. ಗಾಂಧೀಜಿಯ ಬಗ್ಗೆ ಅರಿವಿಲ್ಲದ ಮೋದಿ ಅಥವಾ ಬಿಜೆಪಿಯಂತಹವರು, ಜೂನ್ 4 ರ ನಂತರ ಬಿಡುವಿನ ವೇಳೆಯಲ್ಲಿ ಅವರ ಜೀವನ ಚರಿತ್ರೆಯನ್ನು ಓದಬೇಕು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.

“ವಿವೇಕಾನಂದ ಬಂಡೆಯ ಮೇಲೆ ಕುಳಿತು ಅಥವಾ ಗಂಗಾ ನದಿಯ ಸಮುದ್ರದಲ್ಲಿ ಸ್ನಾನ ಮಾಡುವುದರಿಂದ ಗಾಂಧಿಯನ್ನು ಅರ್ಥಮಾಡಿಕೊಂಡಂತಾಗುವುದಿಲ್ಲ. ಅದಕ್ಕಾಗಿ ಅಧ್ಯಯನ ಮಾಡಬೇಕು’ ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ